ಕರ್ನಾಟಕ ಮಹಾನಾಯಕ ಅಂಬೇಡ್ಕರ್ ವೇದಿಕೆ ಜಿಲ್ಲಾಧ್ಯಕ್ಷ ಗೌತಮ ಸಂಗೋಳಗಿ ಜನ್ಮದಿನ, ಅನ್ನಸಂತರ್ಪಣೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕರ್ನಾಟಕ ಮಹಾನಾಯಕ ಅಂಬೇಡ್ಕರ್ ವೇದಿಕೆ ಜಿಲ್ಲಾಧ್ಯಕ್ಷ ಗೌತಮ ಸಂಗೋಳಗಿ ಜನ್ಮದಿನ ಪ್ರಯುಕ್ತ ಶನಿವಾರ ಹೈಕೋರ್ಟ್ ಸಮೀಪದ ನಿರಾಶ್ರಿತರ ಕೇಂದ್ರದಲ್ಲಿ ಸರಳವಾಗಿ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಸಿದ್ರಾಮಪ್ಪ ದೊಡ್ಡಮನಿ, ಕಾಂಗ್ರೆಸ್ ಹಿರಿಯ ಮುಖಂಡ ನೀಲಕಂಠರಾವ ಮೂಲಗೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ವೀರನಾಯಕ, ಭೀಮ್ ಶಕ್ತಿ ಸಂಘದ ರಾಜ್ಯಾಧ್ಯಕ್ಷ ಅಂಬಾಜಿ ಪಿ. ಮೇಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಂ. ಮುಡ್ಡಿ, ಶಂಕರ ನಾಟೇಕಾರ್, ಅಹಮದ್ ಶೇಕ್, ರೀಯಜ್ ಇಮ್ಮದರ್, ಶಿವಕುಮಾರ್ ಗಾಯಕವಾಡ, ಕೈಲಾಸ ಸಂಗೋಳಗಿ, ಜೈ ಕರುನಾಡು ಜನಪರ ಸಮಿತಿ ರಾಜ್ಯಾಧ್ಯಕ್ಷ ಸಿದ್ದು ಜಮಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗೌತಮ ಸಂಗೋಳಗಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಸಾಮಾಜಿಕ ಸೇವೆಯಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ ಎಂದು ಮುಖಂಡರು ಮತ್ತು ಅಭಿಮಾನಿಗಳು ಹಾರೈಸಿದರು.

