Oplus_0

ಮುನಿಯಪ್ಪ, ಬಸವಂತಪ್ಪ ಅವರಿಗೆ ಸಚಿವ ಸ್ಥಾನ ಮಾದಿಗ ಸಮಾಜ ಹರ್ಷ: ರವಿ ಬೆಳಮಗಿ 

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸುದೀರ್ಘವಾಗಿ ರಾಜಕೀಯ ಅನುಭವ ಹೊಂದಿರುವ ಮುತ್ಸದಿ ಹಾಗೂ ಮಾದಿಗ ಸಮುದಾಯದ ಅಗ್ರಗಣ್ಯ ನಾಯಕರಾದ ಕೆ.ಎಚ್ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ಹಾಗೂ ಕೆ.ಎಸ್ ಬಸವಂತಪ್ಪ ಅವರಿಗೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಇಲಾಖೆ ಖಾತೆ ಸಿಕ್ಕಿದ್ದರಿಂದ ಕರ್ನಾಟಕ ಮಾದಿಗ ಸಮಾಜದ ಡಿ.ಎಂ.ಎಸ್.ಎಸ್ ನ ಜಿಲ್ಲಾ ಮಾಧ್ಯಮ ವಕ್ತಾರ ರವಿ ಬೆಳಮಗಿ ಹರ್ಷಪಡಿಸಿದ್ದಾರೆ.

ಕೆ.ಎಚ್ ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಬೇಕೆಂದು ಬಹುಕಾಲದ ಬೇಡಿಕೆಗೆ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಸ್ಪಂದಿಸಿದ್ದಕ್ಕೆ ಮಾದಿಗ ಸಮುದಾಯಕ್ಕೆ ಸಂತಸ ಗೌರವ ಮತ್ತು ಹೊಸ ವಿಶ್ವಾಸವನ್ನು ತಂದಿದೆ ಎಂದು ತಿಳಿಸಿದ್ದಾರೆ.

ಇದು ಒಬ್ಬ ವ್ಯಕ್ತಿಗೆ ನೀಡಿದ ಖಾತೆ ಅಷ್ಟೇ ಅಲ್ಲ ಸಮಾಜಿಕ ನ್ಯಾಯದ ಆಶಯದಂತೆ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಸಿಕ್ಕಂತಾಗಿದೆ. ಈ ಮಹತ್ವದ ನಿರ್ಧಾರಕ್ಕೆ ಎಐಊ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆಗಳು ಸಲ್ಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!