Oplus_0

ಮಲ್ಲಿಕಾರ್ಜುನ ಖರ್ಗೆ ಅವಮಾನ ಖಂಡಿಸಿ ಚಿತ್ತಾಪುರದಲ್ಲಿ ಕಾಂಗ್ರೆಸ್ ಪಕ್ಷದಿಂದ ರಸ್ತೆತಡೆ ಪ್ರತಿಭಟನೆ | ಗಂಗಾಜಲದಿಂದ ಶುದ್ದೀಕರಣ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಖಂಡರ ಆಗ್ರಹ  

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲದ್ವಾನಿಯ ರಾಮಲೀಲಾ ಮೈದಾನದಲ್ಲಿ ಆ.8 ರಂದು ಸಾರ್ವಜನಿಕ ಸಭೆ ನಡೆಸಿದ ನಂತರ ಬಿಜೆಪಿ ಮತ್ತು ಆ‌ರ್.ಎಸ್.ಎಸ್ ಪ್ರೋತ್ಸಾಹಿತ ಮನುವಾದಿಗಳು ಮೈದಾನದ ವೇದಿಕೆ ಸ್ಥಳವನ್ನು ಗಂಗಾಜಲದಿಂದ ಶುದ್ದೀಕರಣ ಮಾಡಿದ್ದು ಅತ್ಯಂತ ಖಂಡನೀಯ. ಅಸ್ಪೃಶ್ಯತೆ ಆಚರಣೆ ಮಾಡಿ ಶುದ್ದೀಕರಣ ಮಾಡಿದವರ, ಮಾಡಿಸಿದವರ ವಿರುದ್ಧ ಕ್ರಮ ಕೈಗೊಂಡು ಸಂವಿಧಾನ ಉಲ್ಲಂಘನೆ, ದೇಶದ್ರೋಹಿ ಕಾನೂನಿನಡಿ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ಒತ್ತಾಯಿಸಿ ಚಿತ್ತಾಪುರ-ವಾಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ಮಂಗಳವಾರ ಮುಖಂಡರು ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಅಧ್ಯಕ್ಷ ಮಹೇಮೂದ್ ಸಾಹೇಬ್ ಅವರು ಮಾತನಾಡಿ, ರಾಮಲೀಲಾ ಮೈದಾನವು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದಾಗಿ ಕಲುಷಿತಗೊಂಡಿದೆ ಎಂದು ಸದರಿ ಮೈದಾನದಲ್ಲಿ ‘ಗಂಗಾಜಲದಿಂದ ಶುದ್ದೀಕರಣ’ ಕಾರ್ಯಕ್ರಮ ಮಾಡಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ. ಶುದ್ದೀಕರಣ ಪ್ರಕರಣವು ಕೇವಲ ಒಬ್ಬ ದಲಿತ ನಾಯಕನಿಗೆ ಮಾಡಿರುವ ಅವಮಾನವಲ್ಲ ದೇಶದ ಇಡೀ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಇದನ್ನು ಚಿತ್ತಾಪುರ ಮತ್ತು ವಾಡಿ ಬ್ಲಾಕ್ ಕಾಂಗ್ರೆಸ್ ಪಕ್ಷವು ಬಲವಾಗಿ ಖಂಡಿಸುತ್ತದೆ ಮತ್ತು ವಿರೋಧಿಸುತ್ತದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, ದಲಿತ ಸಮದಾಯದ ಮಹಾನ್ ನಾಯಕ, ಬುದ್ಧ, ಬಸವ, ಅಂಬೇಡ್ಕರ್ ತತ್ವ, ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ನಿತ್ಯ ಜೀವನದಲ್ಲಿ ಪಾಲಿಸುತ್ತಾ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಹಗಲಿರುಳು ಹೋರಾಡುತ್ತಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದ್ದು ಮತ್ತು ಅಸ್ಪೃಶ್ಯತೆ ಆಚರಣೆ ಮಾಡಿದ್ದು ದೇಶದ ನಾಗರಿಕ ಸಮಾಜವು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದೆ. ಕೇಂದ್ರ ಸರ್ಕಾರ ಸದರಿ ಶುದ್ದೀಕರಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಸುರೇಶ್ ಮೆಂಗನ್, ಮಲ್ಲಿಕಾರ್ಜುನ ಬೊಮ್ಮನಳ್ಳಿ ಅವರು ಮಾತನಾಡಿ, ದೇಶದ ಸಂವಿಧಾನದ ಅನುಚ್ಚೇಧ 17ರ ಪ್ರಕಾರ ದೇಶದಲ್ಲಿ ಅಸ್ಪೃಶ್ಯತೆ ಆಚರಣೆಯು ಸಂಪೂರ್ಣ ನಿಷೇಧವಿದೆ. ಹೀಗಿದ್ದಾಗಲೂ ಜಾತಿವಾದಿ, ಮನುವಾದಿ ಜನರು ಶುದ್ದೀಕರಣ ಕಾರ್ಯಕ್ರಮ ಮಾಡುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ನಾಗರೀಕ ಸಮಾಜವು ತಲೆತಗ್ಗಿಸುವಂತ ಘಟನೆಯಿದು. ಶುದ್ದೀಕರಣ ಪ್ರಕರಣವು ‘ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ-1955 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ- 1989ರ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಸಂವಿಧಾನ ಉಲ್ಲಂಘನೆ ಆರೋಪದಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ದಲಿತ, ಹಿಂದುಳಿದ ನಾಯಕರನ್ನು ಅವಮಾನಿಸುವ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಂವಿಧಾನ ಉಲ್ಲಂಘಿಸಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿಡುವ ಶುದ್ದೀಕರಣ ಕಾರ್ಯಕ್ರಮ ದೇಶಾದ್ಯಂತ ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಚಂದು ಜಾಧವ, ರಮೇಶ್ ಹಡಪದ ಕೊಲ್ಲೂರು, ನಾಗರೆಡ್ಡಿ ಪಾಟೀಲ ಕರದಾಳ, ಶಿವಾನಂದ ಪಾಟೀಲ, ಶ್ರೀನಿವಾಸ ಸಗರ, ಬಸವರಾಜ ಹೊಸಳ್ಳಿ, ಬಸವರಾಜ ಚಿನ್ನಮಳ್ಳಿ, ನಾಗಯ್ಯ ಗುತ್ತೇದಾರ, ಶ್ರೀನಿವಾಸ ಸಗರ, ಶೀಲಾ ಕಾಶಿ, ಭೀಮಾಶಂಕರ ಹೋಳಿಕಟ್ಟಿ ಅವರು ಮಾತನಾಡಿದರು.

ವೀರಣ್ಣಗೌಡ ಪರಸರೆಡ್ಡಿ, ಸುನೀಲ್ ದೊಡ್ಡಮನಿ, ಮುಕ್ತಾರ್ ಪಟೇಲ್, ಜಯಪ್ರಕಾಶ್ ಕಮಕನೂರ, ಶಿವರುದ್ರಪ್ಪ ಭೀಣ್ಣಿ, ಅರವಿಂದ ಚವ್ಹಾಣ, ರಾಜಶೇಖರ್ ತಿಮ್ಮನಾಯಕ, ಸಿದ್ದಮ್ಮ ಕಾಶನೂರ, ಸೂರ್ಯಕಾಂತ ರದ್ದೇವಾಡಿ, ಶಿವಯ್ಯ ಗುತ್ತೇದಾರ, ದೇವಿಂದ್ರ ಅರಣಕಲ್, ಶಿವುಕುಮಾರ ಯಾಗಾಪೂರ, ಚಂದ್ರಶೇಖರ ಕಾಶಿ, ಹಣಮಂತ ಸಂಕನೂರ, ಜಗಣ್ಣಗೌಡ ರಾಮತೀರ್ಥ, ವೀರುಪಾಕ್ಷಪ್ಪ ಗಡ್ಡದ್, ಮಲ್ಲಪ್ಪ ಹೊಸಮನಿ, ಮಲ್ಲಿಕಾರ್ಜುನ ಕಾಳಗಿ, ರಾಮಲಿಂಗ ಬಾನರ್, ಸಿದ್ದುಗೌಡ ಅಫಜಲಪುರ, ನಾಗರೆಡ್ಡಿ ಗೋಪಸೇನ್, ನಿಂಗಣ್ಣ ಹೆಗಲೇರಿ, ಭೀಮಸಿಂಗ ಚವ್ಹಾಣ, ಶಿವುಕುಮಾರ ಸುಲ್ತಾನಪೂರ, ಜಗದೀಶ್ ಚವ್ಹಾಣ, ಯಲ್ಲಾಲಿಂಗ ಪೂಜಾರಿ, ಶಿವಕಾಂತ ಬೆಣ್ಣೂರಕರ್, ದೇವಿಂದ್ರ ಯಾಬಾಳ, ಬಸವರಾಜ ಪೂಜಾರಿ, ಮಲ್ಲಿಕಾರ್ಜುನ ಬೆಣ್ಣೂರಕರ್, ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಮುಡಬೂಳಕರ್, ಶೇಖ್ ಬಬ್ಲು, ಸಂಜಯ್ ಬುಳಕರ್, ಬಾಬು ಕಾಶಿ, ಸಂತೋಷ ಪೂಜಾರಿ, ಕಾಶಪ್ಪ ಡೋಣಗಾಂವ, ದಶರಥ್ ಭಂಡಿ, ಮಾಣಿಕ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!