Oplus_0

ಶ್ರಾವಣ ಮಾಸದ ಶರಣ ದರ್ಶನ ಕಾರ್ಯಕ್ರಮ |ವಚನ ಸಾಹಿತ್ಯದ ದೃವತಾರೆ ಮುಕ್ತಾಯಕ್ಕ: ಶಶಿಕಲಾ

ನಾಗಾವಿ ಎಕ್ಸಪ್ರೆಸ್ 

ಚಿಂಚೋಳಿ: ಶರಣೆ ಮುಕ್ತಾಯಕ್ಕನನ್ನು ವಚನ ಸಾಹಿತ್ಯದ ಧೃವತಾರೆ ಎಂದು ಕರೆಯಲಾಗುತ್ತದೆ ಎಂದು ಮುಖ್ಯಗುರು ಶಶಿಕಲಾ ಎಂ.ಎಸ್ ಹೇಳಿದರು.

ಚಂದಾಪೂರದ ಬಸವ ಮಂಟಪದಲ್ಲಿ ಶರಣ ನೀಲಾಂಬಿಕಾ ಟ್ರಸ್ಟ್ ವತಿಯಿಂದ ನಡೆದ ಶ್ರಾವಣ ಸೋಮವಾರದ ಶರಣ ದರ್ಶನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಅಕ್ಕಮಹಾದೇವಿ ಭಕ್ತಿಮಾರ್ಗ, ತಾರ್ಕಿಕ ಜ್ಞಾನಮಾರ್ಗ ಹೊಂದಿದರೆ, ಮುಕ್ತಾಯಕ್ಕ ವೈಚಾರಿಕತೆಯ ದಿಟ್ಟ ನಿಲುವಿನ ಜ್ಞಾನಮಾರ್ಗ ಹೊಂದಿದವಳು. ಈಕೆಯ ಸುಮಾರು 37 ವಚನಗಳು ಈವರೆಗೆ ನಮಗೆ ಲಭ್ಯವಾಗಿವೆ. ಈಕೆಯ ವಚನಗಳ ಅಂಕಿತ ಅಜಗಣ್ಣ ತಂದೆ ಎಂಬುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಬಸವೇಶ ಪಾಟೀಲ, ಬಸವಾದಿ ಶರಣರ ಚಿಂತನೆಗಳು ಅಜ್ಞಾನದಿಂದ ಜ್ಞಾನದೆಡೆ ಸಾಗುವಂತೆ ಮಾಡುತ್ತವೆ. ಮಹಿಳೆಯರು ಜಾಗೃತರಾದರೆ ಸಮಾಜದಲ್ಲಿ ಪರಿವರ್ತನೆ ಕಾಣಬಹುದು ಎಂದರು.

ಸಹಾಯಕ ಇಂಜಿನೀಯರ ಗಿರಿರಾಜ ಸಜ್ಜನ ಮಾತನಾಡಿದರು. ಜಗದೇವಿ ಹಕ್ಯಾಳ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಬೊಮ್ಮಾ, ಸುನಿತಾ ಪಾಲಾಮೂರ್, ಸುಮಂಗಲಾ ಹುಣಜೆ, ರಮಾ ರಡ್ಡಿ, ಶಾರದಾ ಶೆಳ್ಳಿಗಿ, ಶರಣಮ್ಮ ಹಲಚೇರಿ, ವಚನ ಮೇಲಗೆರಿ, ದಾಕ್ಷಾಯಣಿ ಮುಸ್ತರಿ, ಲಕ್ಷ್ಮಿ ಮುಂತಾದವರಿದ್ದರು.

ಜ್ಯೋತಿ ಬೊಮ್ಮಾ ಸ್ವಾಗತಿಸಿದರು, ಮಲ್ಲಿಕಾರ್ಜುನ ಪಾಲಾಮೂರ್ ಪ್ರಾಸ್ತಾವಿಕ ಮಾತನಾಡಿದರು, ಕಾಶಿನಾಥ ಹುಣಜೆ ನಿರೂಪಿಸಿದರು, ಶಂಭುಲಿಂಗ ಶಿವಪೂರಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!