ಬರ ಘೋಷಣೆಗೆ ಆಗ್ರಹಿಸಿ ಸೆ. 7 ರಂದು ಯಾದಗಿರಿ ಜಿಲ್ಲೆ ಬಂದ್, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಸರ್ವ ಸಂಘಟನೆಗಳ ಹೋರಾಟ ಸಮಿತಿಯು ಸೆಪ್ಟೆಂಬರ್ 7ರಂದು ಯಾದಗಿರಿ ಜಿಲ್ಲಾ ಕೇಂದ್ರ ಬಂದ್ ಗೆ ಕರೆ ನೀಡಿದೆ ಹೀಗಾಗಿ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಸರ್ವ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ್ ರಾಮಸಮುದ್ರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಘೋಷಣೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಕೇವಲ ಶಹಾಪುರ ತಾಲೂಕು ಮಾತ್ರ ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಿದೆ, ಜಿಲ್ಲೆಯ ಉಳಿದ ಐದು ತಾಲೂಕುಗಳಾದ ಯಾದಗಿರಿ, ವಡಗೇರಾ, ಗುರುಮಿಠಕಲ್, ಸುರಪುರ, ಹುಣಸಗಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಮಳೆ ಕೊರತೆಯಿಂದ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಬರಗಾಲ ಘೋಷಣೆ ಮಾಡುವಲ್ಲಿ ತಾಲೂಕು ಆಡಳಿತ, ಜಿಲ್ಲಾ ಆಡಳಿತ ಹಾಗೂ ಸಂಬಂಧಪಟ್ಟ ಕ್ಷೇತ್ರದ ಶಾಸಕರು ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಸೆಪ್ಟೆಂಬರ್ 7 ರಂದು ಬಂದ್ ನಡೆಸಲಾಗುತ್ತಿದೆ ಅಂದು ಬೃಹತ್ ಮೆರವಣಿಗೆಯು ಮೈಲಾಪುರ್ ಅಗಸಿಯಿಂದ ಪ್ರಾರಂಭವಾಗಿ ಗಾಂಧಿ ವೃತ್ತ, ಡಾ ಬಾಬು ಜಗಜೀವನ್ ರಾಮ್ ವೃತ್ತ, ಕನಕ ವೃತ್ತ, ಡಾ ಬಿ.ಆರ್ ಅಂಬೇಡ್ಕರ್ ವೃತ್ತ, ಶಾಸ್ತ್ರಿ ವೃತ್ತ ಮೂಲಕ ತೆರಳಿ ಸುಭಾಷ್ ವೃತದಲ್ಲಿ ಕೊನೆಗೊಳ್ಳಲಿದೆ ಅಲ್ಲಿ ಬಹಿರಂಗ ಸಭೆಯನ್ನು ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಬಸ್ ಆಟೋ ಸೇರಿದಂತೆ ಸಾರ್ವಜನಿಕ ಸಂಚಾರದಲ್ಲಿ ವ್ಯಥೆಯ ಉಂಟಾಗುವ ಸಾಧ್ಯತೆ ಇದೆ ಅದ್ದರಿಂದ ಮುಂಜಾಗ್ರತವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ವ ಸಂಘಟನೆಯ ಗೌರವಾಧ್ಯಕ್ಷ ಮರೆಪ್ಪ ನಾಯಕ್ ಮಗದಮಪುರ್, ಮೈಲಾರಿ ಜಾಗೀರದಾರ್, ರವಿ ಮುದ್ನಾಳ, ವಿಶ್ವರಾಧ್ಯ ದಿಮ್ಮಿ, ಶಿವರಾಜ್ ದಾಸನಕೇರಿ, ಅನಿಲ್ ಕರಾಟೆ, ಕಾಶಿನಾಥ್ ನಾಟಿಕರ್, ರಾಜಶೇಖರ್ ಎದುರುಮನಿ, ಸೈದಪ್ಪ ಕೊಯಿಲುರ, ಚಂದ್ರಶೇಖರ್ ಕಡೆಸೂರ್, ಭೀಮು ಪೂಜಾರಿ ಉಪಸ್ಥಿತರಿದ್ದರು.

