ಸಚಿವ ಪ್ರಿಯಾಂಕ್ ಖರ್ಗೆ ಏಟಿಗೆ ಭಾಗವತ್ ಬಾಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹೆಸರು: ಶಿವರುದ್ರ ಭೀಣಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಒಂದೇ ಏಟಿಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರ ಬಾಯಲ್ಲಿ ಭಾರತ ದೇಶ ರಾಮ, ಕೃಷ್ಣನಿಂದ ಹೆಸರಿನಿಂದ ಗುರುತಿಸಿಲ್ಲ. ಬುದ್ದ ನಾಡು ಭಾರತ, ಬಸವ ನಾಡು ಭಾರತ, ಅಂಬೇಡ್ಕರ ನಾಡು ಭಾರತ ಗುರುತಿಸುತ್ತದೆ ಎಂದು ಭಾಷಣ ಮಾಡಿದ್ದಾರೆ. ಈಗ ಭಾಗವತ್ ಅವರಿಗೆ ಜ್ಞಾನೋದಯ ಆಗಿದೆ ಎಂದು ದಿಗ್ಗಾಂವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರ ಭೀಣಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೋಹನ ಭಾಗವತ್ ಬಾಯಿಂದ ಬುದ್ಧ, ಬಸವ, ಅಂಬೇಡ್ಕರ್ ಭಾರತ ದೇಶ ಎಂದು ಹೇಳುವವರೆಗೂ ಬಿಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅದರಂತೆ ಈಗ ಭಾಗವತ ಅವರು ಬುದ್ಧ, ಬಸವ, ಅಂಬೇಡ್ಕರ ಎಂಬುದು ನೆನಪಾಗಿದೆ ಎಂದು ಹೇಳಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದಂತೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ಅಮೇರಿಕಾದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಬುದ್ದ, ಬಸವ, ಅಂಬೇಡ್ಕರ್ ಹೆಸರು ತೆಗೆದುಕೊಂಡಿದ್ದು ಭಾಗವತ್ ಅವರಿಗೆ ಈಗ ಜ್ಞಾನೋದಯವಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ಖರ್ಗೆ ಅವರ ಒಂದೇ ಏಟಿಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರ ಬಾಯಲ್ಲಿ ಭಾರತ ದೇಶ ರಾಮ, ಕೃಷ್ಣನಿಂದ ಹೆಸರಿನಿಂದ ಗುರುತಿಸಿಲ್ಲ. ಬುದ್ದ ನಾಡು ಭಾರತ, ಬಸವ ನಾಡು ಭಾರತ, ಅಂಬೇಡ್ಕರ ನಾಡು ಭಾರತ ಗುರುತಿಸುತ್ತದೆ ಎಂದು ಭಾಷಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದ್ವೇಷದ ರಾಜಕಾರಣಕ್ಕೆ ಆಕ್ರೋಶ:
ಕೆಪಿಎಸ್ಸಿಯಲ್ಲಿ ಅನಾವಶ್ಯಕವಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಎಳೆದು ತರಲಾಗುತ್ತಿದೆ. ಮುಡಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸುಖಾಸುಮ್ಮನೆ ಎಳೆದಂತೆ ಖರ್ಗೆ ಅವರನ್ನು ಬಲಿ ಪಶು ಮಾಡಲಾಗುತ್ತಿದೆ. ಖರ್ಗೆ ಅವರು ಆರ್ಎಸ್ಎಸ್ ಬಗ್ಗೆ ಮಾತನಾಡಿರುವುದಕ್ಕೆ ಬಿಜೆಪಿಯವರು ವೈಯಕ್ತಿಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೇಲ್ಕೂರ್, ಬಗಲಿ ವಿರುದ್ಧ ಕ್ರಮಕ್ಕೆ ಆಗ್ರಹ:
ಕಲಬುರಗಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ದ್ವಿಚಕ್ರ ವಾಹನ ಸವಾರನ ಮೇಲೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಹಲ್ಲೆ ಮಾಡಿ ಹೆಲ್ಮೇಟ್ ನೆಲಕ್ಕೆ ಒಡೆದು ಹಾಕಿ ಅವಮಾನ ಮಾಡಿದ ಘಟನೆ ಮಾನವ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಒಬ್ಬ ರಾಜಕಾರಣಿ, ಜನಪ್ರತಿನಿಧಿ ಹೀಗೆ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಶಾಸಕ ತೇಲ್ಕೂರ್ ಅವರು ಪ್ರತಿಯೊಂದು ವಿಷಯದಲ್ಲಿ ಅವರು ಬಾಯಿ ಹರಿದುಬಿಟ್ಟು ಮಾತನಾಡುತ್ತಾರೆ. ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಅವರ ಗುಂಡಾ ಹಾಗೂ ರೌಡಿಸಂ ರೀತಿಯಲ್ಲಿ ಅವರು ವರ್ತಿಸುತ್ತಾರೆ. ಇತ್ತಿಚೇಗೆ ಸೇಡಂ ತಾಲೂಕಿನ ರಂಜೋಳ ಗ್ರಾಮದಲ್ಲಿ ಸಹ ದೇವಸ್ಥಾನದ ವಿಷಯದಲ್ಲಿ ಬೇಕಾಬಿಟ್ಟಿ ಮಾತನಾಡಿದ್ದಾರೆ. ಪ್ರಚೋದನಕಾರಿ ಹಾಗೂ ಶಾಂತಿ ಭಂಗ ಮಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇವರ ವರ್ತನೆಯಿಂದ ಜನರು ಬೇಸತ್ತಿದ್ದಾರೆ. ರಾಜಕೀಯ ಇಚ್ಛಾಶಕ್ತಿಯಿದ್ದರೆ ತೇಲ್ಕೂರ್ ಅವರು ಅಭಿವೃದ್ದಿಗೆ ಕೈಜೋಡಿಸುವುದನ್ನು ರೂಢಿಸಿಕೊಳ್ಳಬೇಕು. ಪ್ರಕರಣ ದಾಖಲಿಸಿದ ಮಾಜಿ ಶಾಸಕ ರಾಜಕುಮಾರ ತೇಲ್ಕೂರ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

