ನಾಲವಾರ ಸ್ಟೇಷನ್ ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ, ಅನ್ನದಾಸೋಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ನಾಲವಾರ ಸ್ಟೇಷನ್ ಗ್ರಾಮದ ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ನಿಮಿತ್ತ ಶನಿವಾರ ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲ ಜನಾಂಗದವರು ಸೇರಿಕೊಂಡು ವಿಶೇಷ ಪೂಜೆ ಹಾಗೂ ಅನ್ನದಾಸೋಹ ಬಹು ವಿಜೃಂಭಣೆಯಿಂದ ನಡೆಯಿತು.
ಕೊನೆಯ ಶನಿವಾರ ಶ್ರಾವಣ ಮಾಸದಲ್ಲಿ ಎಲ್ಲರೂ ಸೇರಿ ಖಾಂಡ್ ಮಾಡಲಾಗುವುದು ಇದು ಈ ಭಾಗದಲ್ಲಿ ವಿಶೇಷವಾಗಿದೆ. ಯಾವುದನ್ನಾದರೂ ಮರೆಯಬಹುದು ಆದರೆ ಶ್ರಾವಣ ಮಾಸ ಬಂದಾಗ ಕೊನೆ ಶನಿವಾರದ ಖಾಂಡ್ ಮಾಡುವುದು ಮಾತ್ರ ಯಾರೂ ಮರೆಯುವುದಿಲ್ಲ, ಎಲ್ಲರೂ ಹಬ್ಬದಂತೆ ಆಚರಿಸುತ್ತಾರೆ, ಹೀಗಾಗಿ ಇದು ಬಹಳ ಮಹತ್ವ ಪಡೆದುಕೊಂಡಿದೆ ಎಂದು ರಾಜೇಶ್ ಗುತ್ತೇದಾರ ತಿಳಿಸಿದ್ದಾರೆ.
ಶ್ರಾವಣ ಮಾಸದಲ್ಲಿ ಭಜನೆ ಮತ್ತು ಪೂಜೆ ಮಾಡಿಕೊಂಡು ಬರುವ ಪದ್ದತಿ ಮೊದಲಿನಿಂದಲೂ ಇದೆ. ಈಗ ಅದನ್ನು ಮುಂದುವರಿಸಿಕೊಂಡು ಬಂದಿರುವ ಇಲ್ಲಿನ ಹಿರಿಯರು ಹಾಗೂ ಯುವಕರು ವಿಜ್ರಂಭಣೆಯಿಂದ ಮಾಡುತ್ತಿದ್ದಾರೆ ಎಂದು ರಾಜೇಶ್ ಗುತ್ತೇದಾರ, ವಸಂತ್ ಭಂಡಾರಿ, ನಾಗೇಶ್ ರಾಠೋಡ ಅವರು ತಿಳಿಸಿದ್ದಾರೆ.

