Oplus_0

ಧಾರವಾಡ ಕೃಷಿ ಮೇಳಕ್ಕೆ ಚಿತ್ತಾಪುರ ಪ್ರಗತಿಪರ ರೈತರ ಪ್ರವಾಸ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಇಲ್ಲಿನ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಹಳ್ಳಿಗಳ ಪ್ರಗತಿಪರ ರೈತರನ್ನೊಳಗೊಂಡ ತಂಡವು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಬೃಹತ್ ಕೃಷಿ ಮೇಳಕ್ಕೆ ಭೇಟಿ ನೀಡಲು ಪ್ರಯಾಣ ಬೆಳೆಸಿದೆ. ಈ ಭಾಗದ ರೈತರಲ್ಲಿ ಜ್ಞಾನಾಭಿವೃದ್ಧಿ ಮತ್ತು ತಾಂತ್ರಿಕ ಪ್ರಗತಿ ಮೂಡಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇಡಲಾಗಿದೆ.

ಪ್ರವಾಸದ ಕುರಿತು ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ಕೃಷಿ ಕಾರ್ಮಿಕರ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ವೆಚ್ಚವನ್ನು ತಗ್ಗಿಸಿ ಆದಾಯವನ್ನು ದ್ವಿಗುಣಗೊಳಿಸಲು ಆಧುನಿಕ ತಂತ್ರಜ್ಞಾನದ ಅಳವಡಿಕೆ ಅನಿವಾರ್ಯವಾಗಿದೆ. ಧಾರವಾಡ ಕೃಷಿ ಮೇಳದಲ್ಲಿ ಪ್ರದರ್ಶಿಸಲಾಗುತ್ತಿರುವ ಡ್ರೋನ್ ತಂತ್ರಜ್ಞಾನ, ಕೀಟ ನಿರ್ವಹಣೆಯ ವೈಜ್ಞಾನಿಕ ಕ್ರಮಗಳು ಮತ್ತು ತೋಟಗಾರಿಕಾ ತಳಿಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಅಧ್ಯಯನ ಮಾಡಲು ನಮ್ಮ ತಂಡ ತೆರಳುತ್ತಿದೆ ಎಂದು ತಿಳಿಸಿದರು.

ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ದೇವೇಂದ್ರ ಅರಣಕಲ್ ಮಾತನಾಡಿ, ಈ ಮೇಳದಲ್ಲಿ ರೈತರು ಒಣಭೂಮಿ ಬೇಸಾಯಕ್ಕೆ ಒಪ್ಪುವ ಸುಧಾರಿತ ಬೀಜಗಳು, ಕಡಿಮೆ ಖರ್ಚಿನ ಸಣ್ಣ ಯಂತ್ರೋಪಕರಣಗಳು ಮತ್ತು ಹೈನುಗಾರಿಕೆ ಉಪಕಸುಬುಗಳ ಕುರಿತು ಮಾಹಿತಿ ಪಡೆಯಲಿದ್ದಾರೆ. ಈ ಅಧ್ಯಯನ ಪ್ರವಾಸದ ಮೂಲಕ ಪಡೆದ ಜ್ಞಾನವನ್ನು ತಾಲೂಕಿಗೆ ಮರಳಿದ ನಂತರ ಇತರೆ ರೈತ ಬಾಂಧವರಿಗೂ ತಲುಪಿಸುವ ಗುರಿಯನ್ನು ಹೊಂದಿದೆ ಎಂದರು.

ಈ ಸಂಧರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ , ವೀರಣ್ಣ ಸುಲ್ತಾನಪುರ್, ನಿಂಗಣ್ಣ ಹೆಗಲೇರಿ, ಶಿವಶರಣರೆಡ್ಡಿ ಭಂಕಲಗಿ, ಪ್ರಮುಖ ರೈತರಾದ ಶರಣಪ್ಪ ಅವಂಟಿ , ಬಸಪ್ಪ ಕುಸ್ನೂರ್, ಶಿವು ಸಣ್ಣೂರ್ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳ ಪ್ರಗತಿಪರ ರೈತರು ಹಾಗೂ ಕೃಷಿ ಇಲಾಖೆಯ ಸ್ಥಳೀಯ ಸಿಬ್ಬಂದಿ ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!