ಜಿಪಿಟಿ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸಂಗಣ್ಣಗೌಡ ನಾಲವಾರ ಪೆನಲ್ ಗೆ ಭರ್ಜರಿ ಗೆಲವು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಮಟ್ಟದ ಜಿಪಿಟಿ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸಂಗಣ್ಣಗೌಡ ನಾಲವಾರ ಪೆನಲ್ ಗೆ ಭರ್ಜರಿ ಗೆಲವು ಆಗಿದೆ.
2022-23 ಬ್ಯಾಚನ ಮೂರಕ್ಕೆ ಮೂರು ಮತ್ತು ಅದಕ್ಕಿಂತ ಪೂರ್ವದ ಬ್ಯಾಚಿನ ಅಭ್ಯರ್ಥಿಗಳಲ್ಲಿ 9 ರಲ್ಲಿ 6 ಜನ ಶಿಕ್ಷಕರು ಆಯ್ಕೆ ಆಗಿ ಒಟ್ಟು 12 ಜನ ಅಭ್ಯರ್ಥಿಗಳಲ್ಲಿ 9 ಜನ ಆಯ್ಕೆ ಆಗಿ ಭರ್ಜರಿ ಗೆಲವು ಸಾಧಿಸಿದ್ದಾರೆ.
ವಿರೋಧ ಪೆನಲ್ ದ ಸಾಬಣ್ಣ ಭೀಮನಳ್ಳಿ ಅವರ ಪೆನಲ್ ದಿಂದ ಕೇವಲ 3 ಜನ ಶಿಕ್ಷಕರು ಮಾತ್ರ ಆಯ್ಕೆಯಾಗಿ ಹೀನಾಯವಾಗಿ ಸೋಲು ಕಂಡಿದ್ದಾರೆ. ಮಹಿಳಾ ಮೀಸಲಾತಿಯಲ್ಲಿ 3 ಜನರಲ್ಲಿ ಸಂಗಣ್ಣಗೌಡ ಪೆನಲ್ ದಿಂದ ಇಬ್ಬರು 2 ಸಾಬಣ್ಣ ಪೆನಲ್ ದಿಂದ ಒಬ್ಬರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಶಿಕ್ಷಕರು:
ಸಂಗಣ್ಣ ಗೌಡ, ಅಮರನಾಥ, ಸುರೇಶ ಓಂಕಾರ್, ಸಿದ್ದಣ್ಣ ಕಮರವಾಡಿ, ಸಂತೋಷ ಷಣ್ಮುಖ, ಇರ್ಫಾನ್, ಸಾಬಣ್ಣ ಭೀಮನಳ್ಳಿ, ಅಂಬಣ್ಣ, ಪವನ ಕುಮಾರ, ಗೀತಾ, ದೀಪಿಕಾ, ಮರೆಮ್ಮ.
ಸಾಬಣ್ಣ ಭೀಮನಳ್ಳಿ ಪೆನಲ್ ಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಇವರು ಪ್ರತಿ ಶಾಲೆಗೆ ಹೋಗಿ ಭರ್ಜರಿ ಪ್ರಚಾರ ಕೈಕೊಂಡು ಭಾನುವಾರ ಬೆಳಿಗ್ಗೆ ಚುನಾವಣೆ ಪ್ರಾರಂಭ ದಿಂದ ಸಾಯಂಕಾಲ 5 ಗಂಟೆಯವರೆಗೆ ಅಲ್ಲೆ ಠಿಕಾಣಿ ಹೂಡಿ ಮತ ಯಾಚನೆ ಮಾಡಿದ್ದಾರೆ ಮತ್ತು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಅವರು ಕೂಡ ಕಲಬುರಗಿಯಿಂದ ಬಂದು ಚುನಾವಣೆ ಮುಗಿಯುವವರೆಗೂ ಅಲ್ಲೆ ಠಿಕಾಣಿ ಹೂಡಿದ್ದರು. ಆದರೂ ಸಂಗಣ್ಣಗೌಡ ಪೆನಲ್ ಗೆ ಭರ್ಜರಿ ಗೆಲವು ಆಗಿದೆ, ಹೀಗಾಗಿ ನಾಲವಾರ ಮತ್ತು ಬಳೂಂಡಗಿ ಅವರಿಗೆ ತೀವ್ರ ಮುಖಭಂಗ ಆದಂತಾಗಿದೆ.
