ಚಿತ್ತಾಪುರ ತಾಲೂಕು ಪಂಚ್ ಗ್ಯಾರಂಟಿ ಸಮಿತಿಗೆ 14 ಸದಸ್ಯರ ನಾಮನಿರ್ದೇಶನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ಈ ಕೆಳಕಂಡಂತೆ ಅಧ್ಯಕ್ಷರು /ಸದಸ್ಯರನ್ನು 2 ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿ ಆದೇಶಿಸಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ರಾಹುಲ್ ಸಂಕನೂರ ತಿಳಿಸಿದ್ದಾರೆ.
ಸರ್ಕಾರದಿಂದ ಜಾರಿಗೊಳಿಸಲಾದ ಪಂಚ ಗ್ಯಾರೆಂಟಿ ಯೋಜನೆಗಳು ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಕಲಬುರಗಿ ಜಿಲ್ಲಾ ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ಸರ್ಕಾರದಿಂದ ನೇಮಕಗೊಳಿಸಿ ಈಗಾಗಲೇ ಆದೇಶಿಸಲಾಗಿರುತ್ತದೆ. ಮುಂದುವರೆದು, ತಾಲೂಕು ಮಟ್ಟದಲ್ಲಿ ಗ್ಯಾರೆಂಟಿ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಸರ್ಕಾರದ ಆದೇಶದಲ್ಲಿ ತಾಲೂಕು ಸಮಿತಿಯನ್ನು ರಚಿಸುವಂತೆ ಸೂಚನೆ ನೀಡಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಚಿತ್ತಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಸದಸ್ಯರುಗಳ ಹೆಸರುಗಳನ್ನು ಶಿಫಾರಸ್ಸು ಮಾಡಿರುತ್ತಾರೆ. ಹೀಗಾಗಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಪ್ರಜಾಸೇವಾ ಇಲಾಖೆ(ತಪಾಸಣೆ) ಬೆಂಗಳೂರು ರವರು ಚಿತ್ತಾಪುರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ರಚಿಸಿ ಆದೇಶಿಸಲು ಅನುಮೋದನೆ ನೀಡಿರುತ್ತಾರೆ.
ನಾಮನಿರ್ದೇಶನಗೊಂಡವರ ವಿವರ:
ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಎಸ್ ಬೊಮ್ಮನಳ್ಳಿಕರ್, ಸದಸ್ಯರಾಗಿ ವೆಂಕಟೇಶ್ ಕುಲಕರ್ಣಿ ಅಲ್ಲೂರ (ಕೆ), ರವೀಂದರೆಡ್ಡಿ ಭಂಕಲಗಿ, ಸೋಮಶೇಖರ ಟೋಕಾಪೂರ, ವಿನ್ನುಕುಮಾರ ಜೈಪಾಲ ದೊಡ್ಡಮನಿ, ಭೀಮಸಿಂಗ್ ಚವ್ಹಾಣ, ರಾಮಲಿಂಗಪ್ಪ ಹಡಪದ ಕೊಲ್ಲೂರ, ಮಹ್ಮದ ಇಸಾಕ್ ಅಬ್ದುಲ್ ನಬಿ ದಂಡೋತಿ, ಸುರೇಶ ಗುತ್ತೇದಾರ ಕರದಾಳ, ಶರಣಬಸಪ್ಪ ಅರಣಕಲ್ ಭಾಗೋಡಿ, ಮಲ್ಲಿಕಾರ್ಜುನ ಅಣ್ಣಾರಾವ ಗುಂಡಗುರ್ತಿ, ಸಿದ್ಧಲಿಂಗ ಮುಗಟಿ ಮರಗೋಳ, ಉಯಕುಮಾರ ಹಂಪಣ್ಣ ಚಿತ್ತಾಪುರ, ಗುರುಪಾದ ಬಸಲಿಂಗಪ್ಪ ವಾಡಿ, ಸುಭಾಶ್ಚಂದ್ರ ಪವಾರ ದಿಗ್ಗಾಂವ ಅವರು ನಾಮನಿರ್ದೇಶನಗೊಂಡಿದ್ದಾರೆ.

