Oplus_0

ಕಾಲೇಜು ಅಂಗಳದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಿಂತನೆ ಕಾರ್ಯಕ್ರಮ | ಶರಣ ಪರಂಪರೆಯ ಮೌಲ್ಯಗಳನ್ನು ಬಿತ್ತಿದ ಕಾಯಕ ಯೋಗಿ ಚರಬಸವೇಶ್ವರ: ಡಾ. ಜ್ಯೋತಿಲತಾ

ನಾಗಾವಿ ಎಕ್ಸಪ್ರೆಸ್ 

ಶಹಾಪುರ: ಶರಣ ಪರಂಪರೆಯ ಜೀವ ಕಾರುಣ್ಯದ ಮೌಲ್ಯಗಳನ್ನು ತತ್ವ ವಿಚಾರಗಳನ್ನು ಸಗರನಾಡಿನಲ್ಲಿ ಬಿತ್ತಿದ ಚರಬಸವೇಶ್ವರರು ಕಾಯಕಯೋಗಿ ಆಗಿದ್ದರು ಎಂದು ಮಹಿಳಾ ಚಿಂತಕಿ, ಸಾಹಿತಿ ಹಾಗೂ ಗುರಮಿಠಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಜ್ಯೋತಿಲತಾ ತಡಿಬಿಡಿಮಠ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಕನ್ಯಾ ಪದವಿ ಪೂರ್ವ ಕಾಲೇಜಿನಲ್ಲಿ ಶಹಾಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿದ ಕಾಲೇಜು ಅಂಗಳದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಿಂತನೆ ಕಾರ್ಯಕ್ರಮದಲ್ಲಿ ಕಾಯಕಯೋಗಿ, ಆಧ್ಯಾತ್ಮಿಕ ಚೇತನ ಚರಬಸವೇಶ್ವರ ” ಎಂಬ ವಿಶೇಷ ಉಪನ್ಯಾಸ ನೀಡಿದ ಅವರು ಚರಬಸವೇಶ್ವರರು ಭಕ್ತರ ಅಪಾರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿ ಎಲ್ಲರಿಗೂ ಬೇಕಾದ ಶರಣ, ಸಂತರಾಗಿದ್ದರು. ಭಕ್ತರ ವಾತ್ಸಲ್ಯ ಮೂರ್ತಿಗಳಾಗಿ, ಶ್ರೇಷ್ಠ ಕಾಯಕಯೋಗಿಯಾಗಿ ಚರಬಸವೇಶ್ವರರು ಭಕ್ತರೊಂದಿಗೆ ಸಮರಸವಾಗಿ ಬೆರೆಯುವ ಸ್ವಭಾವ, ನೊಂದವರ ಬಗ್ಗೆ, ಅಪಾರ ಕರುಣೆ ಹೊಂದಿದ್ದ ಚರಬಸವೇಶ್ವರರು ನಾಡಿನಲ್ಲಿ ಆಧ್ಯಾತ್ಮಿಕ ಮಾನದ್ಯೋತಕವಾಗಿ ಬೆಳಗಿದ್ದಾರೆ ಎಂದು

ಬಡವ ಬಲ್ಲಿದರಾಗಿ ಸಂಸ್ಕಾರಗೊಂಡು ಭಕ್ತರ ಕುಲದ ಶ್ರೇಷ್ಠತೆಗೆ ಶ್ರಮಿಸಿದ ಮಹಾತ್ಮರಾಗಿದ್ದರು ಎಂದು ಹಲವಾರು ನಿರ್ದೇಶನಗಳನ್ನು ಮೂಲಕ ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವೇದಮೂರ್ತಿ ಪೂಜ್ಯ ಬಸವಯ್ಯ ಶರಣರು ಮಾತನಾಡಿ, ಚರಬಸವೇಶ್ವರರು ಸರ್ವವು ಶಿವಾರ್ಪಣಮಸ್ತು ಎಂಬ ಭಾವ, ನಡೆ-ನುಡಿ, ನಂಬಿಕೆ ಈ ಮೂರರ ತ್ರೀವೇಣಿ ಸಂಗಮವಾಗಿದ್ದರು. ಭಕ್ತರ ಬದುಕಿನ ಸಾರ್ಥಕತೆಗಾಗಿ, ಉದ್ದಾರಕ್ಕಾಗಿ, ಅವರ ಒಳತೆಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದರು ಎಂದು ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಪ್ರಾಚಾರ್ಯ ವಾಯ್. ಎಚ್. ವಜ್ಜಲ್ ಅವರು ಸಗರನಾಡಿಗೆ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಕೊಡುಗೆ ಕುರಿತು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕ.ಸಾ.ಪ ಅಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಅವರು,  ಚರಬಸವೇಶ್ವರ ತಾತನವರು ಅನ್ನದಾಸೋಹ, ಕಾಯಕ ದಾಸೋಹ ಮತ್ತು ಅಧ್ಯಾತ್ಮಿಕ ದಾಸೋಹ ಮಾಡುವದರೊಂದಿಗೆ ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ಬದುಕು ಸಾಗಿಸಿ ಇತರರಿಗೆ ಮಾದರಿಯಾಗಿದ್ದಾರೆ, ಪ್ರಥಮ ಬಾರಿಗೆ ಅನ್ನ ದಾಸೋಹವನ್ನು ಪ್ರಾರಂಭಿಸಿದ ಹೆಗ್ಗಳಿಕೆ ಶ್ರೀಗಳದಾಗಿದೆ ಎಂದು ಅಭಿಪ್ರಾಯಪಟ್ಟರು.

ಕ.ಸಾ.ಪ ಗೌರವ ಕಾರ್ಯದರ್ಶಿ ಸುರೇಶಬಾಬು ಅರುಣಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಾಹಿತಿ ಗುರುಬಸಯ್ಯ ಗದ್ದುಗೆ, ವಿಶ್ರಾಂತ ಮುಖ್ಯಗುರು ವಿಶ್ವನಾಥ ಗದ್ದುಗೆ, ಮಹ್ಮದ್ ಮಷಾಕ್ , ಕವಿ ಈರಣ್ಣ ಸಾಹಿತ್ಯಗಾರ ಬೀರನೂರ, ಉಪನ್ಯಾಸಕರಾದ ನಾಗವೇಣಿ ಗೋಗಿ, ರಾಜೇಶ್ವರಿ ಅನವಾರ, ಈರಣ್ಣ ಕೊಳ್ಳಿ ಮುಂತಾದವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!