ನಗರಸಭೆ ಜೆ.ಇ. ಮೌಲಾಲಿ ಪಟೇಲ್ ಅವರಿಗೆ ಬೀಳ್ಕೊಡುಗೆ | ಆರು ವರ್ಷಗಳ ಪ್ರಾಮಾಣಿಕ ಸೇವೆ ಸಲ್ಲಿಸಿ ಕೆಪಿಸಿಎಲ್‌ಗೆ ನೇಮಕ: ಗಣ್ಯರಿಂದ ಪ್ರಶಂಸೆ, ಮುಂದಿನ ಭವಿಷ್ಯಕ್ಕೆ ಶುಭಹಾರೈಕೆ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ನಗರದ ನಗರಸಭೆಯಲ್ಲಿ ಕಿರಿಯ ಅಭಿಯಂತರರಾಗಿ (ಜೆ.ಇ.) ಸೇವೆ ಸಲ್ಲಿಸಿ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್)ಗೆ ನೇಮಕಗೊಂಡಿರುವ ಮೌಲಾಲಿ ಪಟೇಲ್ ಅವರಿಗೆ ನಗರಸಭೆ ವತಿಯಿಂದ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ಆಯೋಜಿಸಲಾಯಿತು.

ಸಮಾರಂಭದಲ್ಲಿ ದಸಂಸ ರಾಜ್ಯ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಮೌಲಾಲಿ ಪಟೇಲ್ ಅವರು 2020ರಿಂದ ಸತತ ಆರು ವರ್ಷಗಳ ಕಾಲ ನಗರಸಭೆಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ಜವಾಬ್ದಾರಿಯಿಂದ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದುಕೊಂಡೇ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿ ಕೆಪಿಸಿಎಲ್‌ಗೆ ನೇಮಕಗೊಂಡಿರುವುದು ಸಂತಸದ ಸಂಗತಿಯಾಗಿದೆ. ಅವರ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದ್ದು, ನಗರಸಭೆಯ ಅಭಿವೃದ್ಧಿ ಕಾರ್ಯಗಳಿಗೆ ಉತ್ತಮ ಕೊಡುಗೆ ನೀಡಿದ್ದಾರೆ. ಮುಂದಿನ ಸೇವೆಯಲ್ಲಿಯೂ ಇದೇ ರೀತಿಯ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿ ಉತ್ತಮ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.

ನಗರಸಭೆಯ ಮಾಜಿ ಸದಸ್ಯ ಅರುಣ ಪಟ್ಟಣಕರ್ ಮಾತನಾಡಿ, ನಗರೋತ್ಥಾನ ಯೋಜನೆಯಡಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮೌಲಾಲಿ ಪಟೇಲ್ ಅವರು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಶಹಾಬಾದ ನಗರದ ಕುಡಿಯುವ ನೀರಿನ ಯೋಜನೆ ಪ್ರತಿಯೊಬ್ಬರಿಗೂ ತಲುಪುವಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರ ಸೇವಾವಧಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿರುವುದು ಶ್ಲಾಘನೀಯ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪೌರಾಯುಕ್ತ ಮನೋಜಕುಮಾರ ಗುರಿಕಾರ ಅವರು ಮಾತನಾಡಿ, ಮೌಲಾಲಿ ಪಟೇಲ್ ಅವರ ಸೇವೆ ಮತ್ತು ಕಾರ್ಯನಿಷ್ಠೆಯನ್ನು ಪ್ರಶಂಸಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮೌಲಾಲಿ ಪಟೇಲ್ ಅವರು, ಶಹಾಬಾದ ನಗರದ ಕುಡಿಯುವ ನೀರಿನ ಯೋಜನೆಯಲ್ಲಿ ಅನಗತ್ಯ ವೆಚ್ಚವನ್ನು ನಿಯಂತ್ರಿಸುವ ಮೂಲಕ ಪ್ರತಿ ವರ್ಷ ಹಲವಾರು ಲಕ್ಷ ರೂಪಾಯಿಗಳನ್ನು ಉಳಿತಾಯ ಮಾಡಿರುವುದು ನನಗೆ ಆತ್ಮತೃಪ್ತಿ ತಂದಿದೆ. ನಗರದ ಜನತೆಗೆ ಉತ್ತಮ ಸೇವೆ ಸಲ್ಲಿಸಿದ ಸಂತೋಷವಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಈ ಸಂದರ್ಭದಲ್ಲಿ ನಗರಸಭೆಯ ಶರಣಗೌಡ, ರಘುನಾಥ ನರಸಾಲೆ, ಮೈನುದ್ದಿನ್, ಪ್ರಭಾಕರ, ನಾರಾಯಣರೆಡ್ಡಿ, ಮೊಹಮ್ಮದ್ ಬಾಕ್ರುದ್ದೀನ್, ಡಾ. ಅಹಮದ್ ಪಟೇಲ್, ಶರಣು ಪಗಲಪುರ, ಅಬ್ದುಲ್ ಗಣಿ ಸಾಬೀರ, ಶಿವು ನಾಟಿಕರ್, ಪಾರ್ವತಿ ಪವಾರ್, ಅಂಬಿಕಾ ದೊಡ್ಡಮನಿ ಸೇರಿದಂತೆ ನಗರಸಭೆಯ ಸಿಬ್ಬಂದಿ, ಗಣ್ಯರು ಹಾಗೂ ಅನೇಕರು ಉಪಸ್ಥಿತರಿದ್ದು, ಮೌಲಾಲಿ ಪಟೇಲ್ ಅವರಿಗೆ ಶುಭ ಹಾರೈಸಿದರು.

“ಆರು ವರ್ಷಗಳಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಹಕಾರ ಕೋಟ್ಟಿದ್ದಾರೆ, 1948ರ ಘಟನೆ ನಮ್ಮ ಪೂರ್ವಜನರನ್ನು ರಕ್ಷಿಸಿದ ಗ್ರಾಮದವರ ಹಾಗೆ ಶಹಾಬಾದ ನಗರದ ಜನರು ಕೂಡ ದಯಾಮಯಗಳಾಗಿದ್ದಾರೆ ಜಾತಿ, ಧರ್ಮ ಎನ್ನದೇ ಸಹಕರಿಸಿದ್ದಾರೆ, ಕೆಲಸ ಮಾಡಿದ ತೃಪ್ತಿ ಇದೆ”.ಮೌಲಾಲಿ ಪಟೇಲ್ ಜೆ.ಇ, ನಗರಸಭೆ ಶಹಾಬಾದ.

Spread the love

Leave a Reply

Your email address will not be published. Required fields are marked *

You missed

error: Content is protected !!