Oplus_0

ಅಲ್ಲೂರ.ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ಮುಖ್ಯ ದ್ವಾರದ ಉದ್ಘಾಟನೆ | ಎಸ್ಡಿಎಂಸಿ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಅಲ್ಲೂರ.ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಜೊತೆಗೆ ಎಸ್ಡಿಎಂಸಿ ವತಿಯಿಂದ ನಿರ್ಮಿಸಿದ ಹೊಸ ಪ್ರವೇಶ ಮುಖ್ಯ ದ್ವಾರದ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಎಸ್ಡಿಎಂಸಿ ಅಧ್ಯಕ್ಷ ಸಿದ್ದಲಿಂಗ ಮಾಸಬೋ ಮಾತನಾಡಿ, ಎಸ್ಡಿಎಂಸಿ ಪದಾಧಿಕಾರಿಗಳ ಸ್ವಂತ ಹಣದಿಂದ 45 ಸಾವಿರ ರೂಪಾಯಿ ವೆಚ್ಚದಲ್ಲಿ ಶಾಲೆಯ ಪ್ರವೇಶದ್ವಾರ (ಕಮಾನು) ವನ್ನು ನಿರ್ಮಿಸಲಾಗಿದೆ. ಇದರಿಂದ ಶಾಲೆಯ ಸೌಂದರ್ಯ ಹೆಚ್ಚಿಸಿದಂತಾಗಿದೆ. ಈ ನಿಟ್ಟಿನಲ್ಲಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಸ್ಡಿಎಂಸಿ ಬದ್ಧವಾಗಿದೆ ಎಂದು ಹೇಳಿದರು.

ನೂತನ ಪ್ರವೇಶ ದ್ವಾರವನ್ನು ಶಾಲಾಮಕ್ಕಳು ಉದ್ಘಾಟಿಸಿರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಗುರು ಆದಪ್ಪ ಬಗಲಿ ರವರು ವಹಿಸಿದ್ದರು. ಎಸ್ಡಿಎಂಸಿ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ಡಿಎಂಸಿ ಅಧ್ಯಕ್ಷ ಸಿದ್ಧಲಿಂಗ ಮಾಸಭೋ, ಉಪಾಧ್ಯಕ್ಷೆ ರೇಣುಕಾ ಮಲ್ಲಿಕಾರ್ಜುನ, ಸೂರಪ್ಪ ಗಮಗ, ಮಲ್ಲಪ್ಪ ದುರಗಪ್ಪ ನಾಟೇಕಾರ್, ಬಸವರಾಜ ಬಣಗಾರ, ಬಸವರಾಜ ಜಾಡರ್, ಬಸವರಾಜ ಪುರನ್, ಪರಶುರಾಮ್ ವಡ್ಡರ, ರಾಜು ಹೊರಗಿನಮನಿ, ಪೀರಪ್ಪ ಹಳೇಗಿಡ, ದೇವಮ್ಮ ದುರ್ಗಪ್ಪ ನರಿಬೋಳ, ಮಲ್ಲಮ್ಮ ಶಿವಶರಣಪ್ಪ ಬುಸೆರಿ, ಉಮಾದೇವಿ ಸಾಬಣ್ಣ ತಳವಾರ್, ಸಾಬಮ್ಮ ಸೋಮಪ್ಪ ತೆಲುಗರ್, ದೇವಮ್ಮ ಮಹಾದೇವ ಬೈನಾರ್, ಕಾಸಿಂಬೀ ಬಾಶಾಖಾನ್, ಕವಿತಾ ಕಾಶೀನಾಥ ಗುತ್ತೇದಾರ, ಅನಂತಮ್ಮ ದೇವಪ್ಪ ಫಿಟ್ಲಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಗೆ ಸಿಹಿ ಊಟ ಹಾಕಲಾಯಿತು.

Spread the love

Leave a Reply

Your email address will not be published. Required fields are marked *

You missed

error: Content is protected !!