ಕೊತ್ಲಾಪೂರ ಯಲ್ಲಮ್ಮ ದೇವಿಯ ನೂತನ ಮೂರ್ತಿಯ ಭವ್ಯ ಮೆರವಣಿಗೆ ನ.17 ಕ್ಕೆ, ಮೂರ್ತಿ ಪ್ರತಿಷ್ಠಾಪನೆ ನ.20 ಕ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಾಹರಪೇಟ್ ಏರಿಯಾದ ಶ್ರೀ ಕೊತ್ಲಾಪೂರ ಯಲ್ಲಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದ ನಿಮಿತ್ತ ನ. 17 ರಂದು ಬೆಳಗ್ಗೆ 8.30ಕ್ಕೆ ಶ್ರೀ ಹಿಂಗುಲಾಂಬಿಕಾ ದೇವಿ ದೇವಸ್ಥಾನ (ಕೆ.ಇ.ಬಿ ಹತ್ತಿರ) ದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶ್ರೀ ಕೊತ್ಲಾಪೂರ ಯಲ್ಲಮ್ಮದೇವಿ ದೇವಸ್ಥಾನದ ವರೆಗೆ ಸಕಲ ವಾದ್ಯಮೇಳಗಳೊಂದಿಗೆ ನೂತನ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ನ. 18 ರಿಂದ 20 ವರೆಗೆ ಪ್ರತಿ ನಿತ್ಯ ಬೆಳಿಗ್ಗೆ 4.5 ನಿಮಿಷಕ್ಕೆ ಅರ್ಚಕ ಪುರೋಹಿತರಿಂದ ಧಾರ್ಮಿಕ ಪದ್ಧತಿಯಂತೆ ವಿವಿಧ ಪೂಜೆಗಳು ನೇರವೇರುವವು, ನ. 20 ರಂದು ಬೆಳಗ್ಗೆ 5.5 ನಿಮಿಷಕ್ಕೆ ಬ್ರಾಹ್ಮಿ ಮೂಹುರ್ತದಲ್ಲಿ ಶಾಸ್ತ್ರೋಕ್ತವಾಗಿ ನೂತನ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಪರಮ ಪೂಜ್ಯರಿಂದ ಪ್ರಾಣಪ್ರತಿಷ್ಠಾಪನೆ ನಡೆಯಲಿದ್ದು ಬೆಳಗ್ಗೆ 10.45 ಕ್ಕೆ ಧರ್ಮಸಭೆ ನಂತರ ಮಹಾಪ್ರಸಾದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸೇಡಂ ಶ್ರೀ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ದಿಗ್ಗಾಂವ ಶ್ರೀ ಸಿದ್ಧವೀರ ಶಿವಾಚಾರ್ಯರು, ಹಲಕರ್ಟಿ ಶ್ರೀ ರಾಜಶೇಖರ ಶಿವಾಚಾರ್ಯರು, ನದಿಶಿನೂರ ಶ್ರೀ ಗುರು ರಾಜೇಂದ್ರ ಶಿವಯೋಗಿಗಳು, ಬೆನಕನಳ್ಳಿ ಶ್ರೀ ಕೇದಾರಲಿಂಗ ಮಹಾಸ್ವಾಮಿಗಳು, ಯರಗೋಳ ಶ್ರೀ ಸಂಗಮೇಶ ಮಹಾಸ್ವಾಮಿಗಳು ಅವರ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದ್ದಾರೆ.

