ಎಟಿ ಮತ್ತು ಟಿ ಕಂಪೆನಿಯ ಸಹಯೋಗದೊಂದಿಗೆ ಯುತ್ ಫಾರ್ ಸೇವಾ ಸಂಸ್ಥೆಯಿಂದ ಹಣಿಕೇರಾ ಸರ್ಕಾರಿ ಶಾಲೆಗೆ ಶಿಕ್ಷಣ ಸಾಮಗ್ರಿಗಳ ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಹಣಿಕೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಟಿ ಮತ್ತು ಟಿ ಕಂಪೆನಿಯ ಸಹಯೋಗದೊಂದಿಗೆ ಸಿಎಸ್ಆರ್ ಯೋಜನೆ ಮೂಲಕ ಯುತ್ ಫಾರ್ ಸೇವಾ ಸಂಸ್ಥೆಯಿಂದ ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ನಲಿ ಕಲಿ ಮಕ್ಕಳಿಗೆ ಟೇಬಲ್ ಮತ್ತು ಕುರ್ಚಿಗಳು, ಆಟದ ಸಾಮಗ್ರಿಗಳು, ಶಿಕ್ಷಕರಿಗೆ ಟೇಬಲ್ ಮತ್ತು ಕುರ್ಚಿಗಳ ಸೌಲಭ್ಯಗಳನ್ನು ಒದಗಿಸಲಾಯಿತು.
ಈ ಸಂದರ್ಭದಲ್ಲಿ ಯುತ್ ಫಾರ್ ಸೇವಾ ಸಂಸ್ಥೆಯಿಂದ ಸಂತೋಷ್ ಶಾನಬಾಗ್, ಎಟಿ ಮತ್ತು ಟಿ ಸಂಸ್ಥೆಯಿಂದ ರಮೇಶ್, ಆನಂದ್, ರಾಮಕುಮಾರ್ ಹಾಗೂ ಸ್ವಗ್ರಾಮ ಸಂಯೋಜಕ ಗಿರೀಶ್. ಪಿ ತುಮಕೂರು ಅವರು ಇದ್ದರು.
ಹಣಿಕೇರಾ ಗ್ರಾಮವನ್ನು ಮಾದರಿ ಗ್ರಾಮ ಮಾಡಬೇಕೆಂದು youth for Seva ಸಂಸ್ಥೆ ಮತ್ತು ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಗ್ರಾಮ ಅಭಿವೃದ್ಧಿಯ ಮಾದರಿಯನ್ನು ಹುಟ್ಟು ಹಾಕಬೇಕೆನ್ನುವ ದೃಷ್ಟಿಯಿಂದ ಪರಸ್ಪರ ಸಹಕಾರ, ಸಾಮರಸ್ಯ ಸಹಬಾಳ್ವೆ ಮೂಲಕ ಗ್ರಾಮವನ್ನು ವಿಕಾಸ ಮಾಡುವ ಪ್ರಕ್ರಿಯೆಯನ್ನು ಶುರು ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮಸ್ಥರು ತೆಗೆದುಕೊಳ್ಳುವ ತೀರ್ಮಾನಕ್ಕೆ ಸರ್ಕಾರಗಳು ಒಳಗೊಳ್ಳಬೇಕು ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದು, ಕಳೆದ ನಾಲ್ಕು ವರ್ಷದಿಂದ ಸ್ವಗ್ರಾಮ ಮಿತ್ರರಾಗಿ ಶಿವರಾಜ್ ಬಳಗಾರ್, ಜಗದೀಶ್ ಪಾಟೀಲ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ನಮ್ಮ ಶಾಲೆಗೆ 20 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸಾಮಗ್ರಿಗಳು ಸಿಕ್ಕಿರುವುದರಿಂದ ಶಾಲೆಯ ಮಕ್ಕಳ ತಾಂತ್ರಿಕ ಕಲಿಕೆಗೆ ಹೆಚ್ಚಿನ ಪ್ರಯೋಜನವಾಗಿದೆ. ನಮ್ಮ ಶಾಲೆ ಇಡೀ ತಾಲೂಕಿನಲ್ಲಿ ಹೆಚ್ಚಿನ ಪ್ರಯೋಜನ ಪಡೆದಿರುವ ಮೊದಲ ಶಾಲೆಯಾಗಿರೋದು ನಮಗೆ ಹೆಮ್ಮೆಯ ಸಂಗತಿ ಎಂದು ಹಿರಿಯ ಮುಖ್ಯ ಗುರು ನಿರ್ಮಲಾ. ಸಿ. ಎಸ್ ತಿಳಿಸಿದರು.
ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ಕ್ಲಾಸ್ ಇರುವುದರಿಂದ ಇನ್ನಷ್ಟು ನಮ್ಮ ಶಾಲೆಯ ಪ್ರಗತಿಗೆ ಅನುಕೂಲವಾಗಿದೆ. ಈ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ನಮ್ಮ ಶಾಲೆಯನ್ನು KPS ಶಾಲೆಯಾಗಿ ಸರ್ಕಾರ ಘೋಷಣೆ ಮಾಡಿರುವುದು ಇನ್ನಷ್ಟು ಸಂತಸದ ಸಂಗತಿಯಾಗಿದೆ. ಇನ್ನು ಮುಂದೆ ಸಂಸ್ಥೆಯವರು ನೀಡಿರುವ ಸೌಲಭ್ಯಗಳ ಅನುಷ್ಠಾನವನ್ನು ಚೆನ್ನಾಗಿ ನಿರ್ವಹಿಸುತ್ತೇವೆ ಎಂದು ಶಿಕ್ಷಕರಾದ ಚಂದ್ರಕಾಂತ ಕಟ್ಟಿಮನಿ, ನಳಿನಿ ಅವರು ಭರವಸೆ ನೀಡಿದರು.

