Oplus_0

ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ, ಬಂಜಾರ ಸಮಾಜದಿಂದ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸೇವಾ ಕಾರ್ಯಕ್ರಮ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕ್ಷೇತ್ರದ ಶಾಸಕರು ಗೃಹ ಐಟಿಬಿಟಿ ಮತ್ತು ಇ-ಅಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ 48 ನೇ ಜನ್ಮದಿನದ ಪ್ರಯುಕ್ತ, ಬಂಜಾರ ಸಮಾಜದ ಕಾಂಗ್ರೆಸ್ ಮುಖಂಡರಿಂದ ಪಟ್ಟಣದ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ  ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಉತ್ತಮ ಆಯುಷ್ಯ, ಆರೋಗ್ಯ, ಸುಖ-ಶಾಂತಿ ಹಾಗೂ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಯಶಸ್ಸು ಲಭಿಸಲಿ ಎಂದು ತಾಯಿ ನಾಗಾವಿ ಯಲ್ಲಮ್ಮ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅದೇ ರೀತಿ ಸಮಾಜದ ಧಾರ್ಮಿಕ ಸಂಪ್ರದಾಯ ಹಾಗೂ ಸೇವಾ ಮನೋಭಾವವನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಮಾತಂಗಿಯರಿಗೆ ಸೀರೆ ವಿತರಿಸುವ ಪುಣ್ಯ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.

ಸಮಾಜದ ಏಳಿಗೆ, ಬಡವರ ಕಲ್ಯಾಣ ಮತ್ತು ಶೋಷಿತ ಸಮುದಾಯಗಳ ಧ್ವನಿಯಾಗಿ ಸದಾ ನಿಲ್ಲುವ ನಾಯಕತ್ವಕ್ಕೆ ನಮ್ಮೆಲ್ಲರ ಬೆಂಬಲ ಮತ್ತು ಶುಭ ಹಾರೈಕೆಗಳು. ಜನಸೇವೆಯೇ ಜನಾರ್ದನ ಸೇವೆ ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ವಿಶೇಷ ಪೂಜೆ ಮಾಡಿಸಲಾಯಿತು ಬಂಜಾರಾ ಸಮಾಜದ ಕಾಂಗ್ರೆಸ್ ಮುಖಂಡರಾದ ಭೀಮಸಿಂಗ್ ಚವ್ಹಾಣ, ಜಗದೀಶ್ ಚವ್ಹಾಣ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಮನೋಹರ ಚವ್ಹಾಣ, ಅನಿಲ್ ರಾಠೋಡ, ದೇವಿದಾಸ್ ಚವ್ಹಾಣ, ಶಂಕರ್ ಚವ್ಹಾಣ, ಸುಭಾಷ್ ಜಾಧವ್, ಗೋಪಿ ರಾಠೋಡ, ವಿಜಯ ಕುಮಾರ್ ಚವ್ಹಾಣ, ಮಹಾದೇವ ರಾಠೋಡ, ರವಿ ಜಾಧವ್, ಸೋಮುಸಿಂಗ್ ಚವ್ಹಾಣ, ಸಚಿನ್ ಚವ್ಹಾಣ, ಅನಿಲ್ ಚವ್ಹಾಣ,  ಗೋಪಿ ಚವ್ಹಾಣ, ಅಜಯ್ ಚವ್ಹಾಣ, ಭದ್ರು ರಾಠೋಡ್ ಸೇರಿದಂತೆ ಅನೇಕ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!