ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ, ಗುಡಿಸಲು ವಾಸಿಗಳಿಗೆ ಬ್ಲಾಂಕೆಟ್ ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕರು ಗೃಹ, ಐಟಿಬಿಟಿ ಮತ್ತು ಇ-ಅಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ 48 ನೇ ಜನ್ಮದಿನದ ಪ್ರಯುಕ್ತ ಸಾತನೂರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮಲಿಂಗ ಬಾನರ್ ಅವರು ಮೊಗಲಾ ರಸ್ತೆ ಬದಿಯಲ್ಲಿ ಗುಡಿಸಲು ವಾಸಿಗಳಿಗೆ ಬ್ಲಾಂಕೆಟ್ ವಿತರಣೆ ಮಾಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಜನ್ಮದಿನವನ್ನು ಹಲವು ವರ್ಷಗಳಿಂದ ಆಚರಿಸಿಕೊಳ್ಳುತ್ತಿಲ್ಲ, ನನ್ನ ಜನ್ಮದಿನಕ್ಕೆ ಖರ್ಚು ಮಾಡುವ ಹಣವನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ವಿನಿಯೋಗಿಸಿ ಎಂದು ಕರೆ ನೀಡಿದ ಪ್ರಯುಕ್ತ, ಗುಡಿಸಲಿನಲ್ಲಿ ವಾಸ ಮಾಡುವ ಬಡ ಕುಟುಂಬಗಳಿಗೆ ಬ್ಲಾಂಕೆಟ್ ವಿತರಣೆ ಮಾಡಲಾಗಿದೆ, ಪ್ರಸ್ತುತ ಚಳಿಗಾಲ ಇರುವುದರಿಂದ ಇದರ ಉಪಯೋಗ ಆಗಲಿದೆ ಎಂದು ಸಾತನೂರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮಲಿಂಗ ಬಾನರ್ ಹೇಳಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್, ಪಂಚ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೆಣ್ಣೂರಕರ್, ಯುವ ಅಧ್ಯಕ್ಷ ದೇವು ಯಾಬಾಳ, ಮುಖಂಡರಾದ ಸಾಬಣ್ಣ ಡಿಗ್ಗಿ, ಬಸವರಾಜ ಚಿನ್ನಮಳ್ಳಿ, ಮಲ್ಲಿಕಾರ್ಜುನ ಸಂಗಾವಿ, ಭೀಮರಾಯ ಹೊತಿನಮಡಿ, ಸುಭಾಶ್ಚಂದ್ರ ಪವಾರ, ವಿನ್ನುಕುಮಾರ ಜಡಿ, ರವಿಸಾಗರ ಹೊಸಮನಿ, ಬಸವರಾಜ ಕೆಬಿ, ಗಂಗಾಧರ ಡಿಗ್ಗಿ, ಭಾಗೇಶ್ ದೊರೆ, ಬಸವರಾಜ ಮೈನಾಳಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

