ಚಿತ್ತಾಪುರದಲ್ಲಿ ಸಂಗೀತ ವೈಭವ ಕಾರ್ಯಕ್ರಮ, ಸಂಗೀತದಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಲಿದೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಸಿಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವಿರೇಂದ್ರ ಕೊಲ್ಲೂರು ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಸರಸ್ವತಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ಸೇಡಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಕಲೆಗಳಲ್ಲಿ ಸಂಗೀತ ಕಲೆ ಬಹಳ ವಿಶಿಷ್ಟವಾಗಗಿದ್ದು ಸಂಗೀತ ಎಂದರೆ ಎಲ್ಲರೂ ಇಷ್ಟಪಡುತ್ತಾರೆ ಹೀಗಾಗಿ ಸಂಗೀತಕ್ಕೆ ಬಹಳ ಮಹತ್ವ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ನಾಗಾವಿ ಎಕ್ಸ್‌ಪ್ರೆಸ್ ಕನ್ನಡ ದಿನ ಪತ್ರಿಕೆ ಸಂಪಾದಕ ಕಾಶಿನಾಥ ಗುತ್ತೇದಾರ ಮಾತನಾಡಿ, ಸಂಗೀತಕ್ಕೆ ಅದ್ಬುತ ಶಕ್ತಿಯಿದೆ ಈಗ ಅದರ ವ್ಯಾಪ್ತಿ ವಿಸ್ತಾರವಾಗಿದೆ, ಸಂಗೀತ ಕಲಾವಿದರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಕಡೆ ಗಮನ ಹರಿಸಬೇಕು ಹೊರತು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು. ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಸಮಾಜ ತಾಲೂಕು ಅಧ್ಯಕ್ಷ ಪ್ರಲ್ಹಾದ ವಿಶ್ವಕರ್ಮ ಮಾತನಾಡಿ, ಸಂಗೀತ ಕಲಾವಿದರು ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತೆ ಇದ್ದಾರೆ ಅವರನ್ನು ಗುರುತಿಸಿ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಪತ್ರಕರ್ತ ನಾಗಯ್ಯ ಸ್ವಾಮಿ ಅಲ್ಲೂರ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗಲಾ ತಾಂಡಾ ಶಿಕ್ಷಕಿ ವಿಜಯಲಕ್ಷ್ಮೀ ಎನ್, ಅವರಾದ, ಅಳ್ಳೋಳ್ಳಿ ಶಿಕ್ಷಕ ರಮೇಶ್ ಗುತ್ತೇದಾರ, ಸಂಗಮೇಶ ರೋಣದ್, ಸಂಸ್ಥೆಯ ಅಧ್ಯಕ್ಷ ಮನೋಹರ ವಿಶ್ವಕರ್ಮ, ಬ್ರಹ್ಮ ವಿಷ್ಣು ಮಹೇಶ್ವರ ಸಂಸ್ಥೆಯ ಅಧ್ಯಕ್ಷ ನಾಗೇಶ್ ಬುರಬುರೆ, ಕಾರ್ಯದರ್ಶಿ ಮಲ್ಲಿನಾಥ ಪೂಜಾರಿ, ರವಿ ವಿಶ್ವಕರ್ಮ, ಬಸ್ಸಯ್ಯ ಗುತ್ತೇದಾರ, ನಾಗಭೂಷಣ, ಶಿವಲಿಂಗ ಕೆಂಗಾಳೆ, ಪ್ರಶಾಂತ್ ಗೊಲ್ಡಸ್ಮಿತ್, ಶಿವಗಂಗಾ ಜಾದವ, ಶಿಲ್ಪಾ ಪಂಚಾಳ, ಲಕ್ಷ್ಮಣ ಭಜಂತ್ರಿ ಸೇರಿದಂತೆ ಕಲಾವಿದರು ಇದ್ದರು. ವಿನಯಕುಮಾರ್ ಶಿಲ್ಪಿ ಪ್ರಾರ್ಥಿಸಿದರು, ಶ್ರೀಶೈಲ್ ವಿಶ್ವಕರ್ಮ ನಿರೂಪಿಸಿ, ವಂದಿಸಿದರು.