ನೀರಿಗಾಗಿ ಮೋಟಾರ್ ಬಳಕೆ ಮಾಡುವುದನ್ನು ನಿಲ್ಲಿಸಿ ಇಲ್ಲದಿದ್ದರೆ ದಂಡ ವಿಧಿಸಲಾಗುವುದು: ಮುಖ್ಯಾಧಿಕಾರಿ ಎಚ್ಚರಿಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಸಾರ್ವಜನಿಕರು ಮನೆಗಳಿಗೆ ಅಕ್ರಮ ಮೋಟಾರ್ ಬಳಕೆ ಮಾಡಿ ನೀರು ಪಡೆಯುತ್ತಿರುವ ವಿಷಯ ಗಮನಕ್ಕೆ ಬಂದಿದ್ದು ಕೂಡಲೇ ಮೋಟಾರ್ ಬಳಕೆ ಮಾಡುವುದನ್ನು ನಿಲ್ಲಿಸಿ ಇಲ್ಲದಿದ್ದರೆ ಪುರಸಭೆ ವತಿಯಿಂದ ದಂಡ ವಿಧಿಸಬೇಕಾಗುತ್ತದೆ ಎಂದು ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಎಚ್ಚರಿಕೆ ನೀಡಿದ್ದಾರೆ.
ನಿಯಮದ ಪ್ರಕಾರ ಮೋಟಾರ್ ಬಳಕೆ ಮಾಡುವುದು ನಿಷೇಧ ಇದೆ, ಆದರೂ ಸಾರ್ವಜನಿಕರು ಬಳಕೆ ಮಾಡಿ ನೀರು ಪಡೆಯುತ್ತಿದ್ದಾರೆ ಇದರಿಂದ ಬೇರೆಯವರಿಗೆ ನೀರಿನ ಕೊರತೆ ಉಂಟಾಗಿದೆ ಹೀಗಾಗಿ ತಾವೇ ಸ್ವಯಂ ಪ್ರೇರಿತರಾಗಿ ಮೋಟಾರ್ ಬಳಸುವುದು ನಿಲ್ಲಿಸಿ ಎಲ್ಲರಿಗೂ ನೀರು ಸಿಗುವಂತೆ ಮಾಡಿ ಎಂದು ತಿಳಿಸಿದ್ದಾರೆ.
ಪಟ್ಟಣದಲ್ಲಿ ಅಕ್ರಮ ನಳಗಳ ಸಂಪರ್ಕ ಹೊಂದಿರುವ ಸಾರ್ವಜನಿಕರು ಇದೇ ನ.25 ರೊಳಗಾಗಿ ಪುರಸಭೆ ಗೆ ನಿಗದಿಪಡಿಸಿದ ಶುಲ್ಕ ಪಾವತಿಸಿ ಸಕ್ರಮ ಮಾಡಿಕೊಳ್ಳಬೇಕು ಎಂದು ಮುಖ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.