Oplus_0

ರೈತರ ಪಹಣಿಯಲ್ಲಿ ನಮೂದಾದ ವಕ್ಫ್ ಹೆಸರು ಕೈಬಿಡುವಂತೆ ಒತ್ತಾಯಿಸಿ ತೆಂಗಳಿ ಕ್ರಾಸ್ ಹತ್ತಿರ ರೈತ ಸಂಘದಿಂದ ಬೃಹತ್ ಪ್ರತಿಭಟನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ನೇತೃತ್ವದಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮೊದಿಸಿರುವ ಹೆಸರು ಕೈಬಿಡಲು ಒತ್ತಾಯಿಸಿ ಚಿತ್ತಾಪುರ ತಾಲೂಕಿನ ತೆಂಗಳಿ ಕ್ರಾಸ್ ರಾಜ್ಯ ಹೆದ್ದಾರಿ ಹತ್ತಿರ ಬೃಹತ್ ಪ್ರತಿಭಟನೆ ನಡೆಸಿದ ರೈತರು ವಕ್ಫ್ ಹಟಾವೋ ಕಿಸಾನ್ ಬಚಾವೋ ಘೋಷಣೆ ಕೂಗುವ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಹೋರಾಟಗಾರ ಜಗದೀಶ ಸಾಗರ ಮಾತನಾಡಿ, ಜಿಲ್ಲೆಯಾದ್ಯಂತ ರೈತರ ಪಹಣಿಯಲ್ಲಿನ ವಕ್ಷ ಮಂಡಳಿ 2012 ರಿಂದ 2016 ಎಂದು ನಮೂದು ಮಾಡಿರುವ ಹೆಸರುಗಳು ತಕ್ಷಣದಲ್ಲಿ ತೆಗೆಯಬೇಕು ಎಂದು ಒತ್ತಾಯಿಸಿದರು.

ಕಲಬುರಗಿ ಜಿಲ್ಲೆಯ ರೈತರ ಪಹಣಿಯಲ್ಲಿ ವಕ್ಷ ಮಂಡಳಿ ಹೆಸರುಗಳು 2012 ರಿಂದ 2016 ರವರೆಗೆ ನಮೂದು ಮಾಡಿ ಕಾಂಗ್ರೆಸ್ ಸರ್ಕಾರ ರೈತ ವೀರೋಧಿ ಎಂದು ಸಾಬೀತು ಮಾಡಿದ್ದಾರೆ. ಸದರಿ ವಿಷಯದ ಬಗ್ಗೆ ಕಲಬುರಗಿ ಜಿಲ್ಲೆಯ ತಾಲೂಕವಾರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು ಆದರೆ ಇಲ್ಲಿಯವರೆಗೆ ರೈತರ ಪಹಣಿಯಲ್ಲಿ ನಮೂದಾದ ವಕ್ಫ್ ಮಂಡಳಿ ಹೆಸರು ತೆಗೆದಿರುವುದಿಲ್ಲ ಎಂದು ಎಂದರು.

ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿರುವ ರೈತರಿಗೆ ಗೊತ್ತಾಗಿನಿಂದ ರೈತರು ಚಿಂತೆಗೀಡಾಗಿ ಅವರ ನಿದ್ದೆಗೆಟ್ಟಿದೆ ಅಲ್ಲದೇ ಕೆಲ ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ ನಡೆದಿರುತ್ತದೆ ಎಂದು ಹೇಳಿದರು.

ರೈತರ ಈ ಸಮಸ್ಯೆ ಎಲ್ಲಿಯವರೆಗೆ ಬಗೆಹರಿಯವುದಿಲ್ಲವೋ ಅಲ್ಲಿಯವರೆಗೆ ನಿರಂತರ ಹೋರಾಟಗಳು ನಡೆಯಲಿದ್ದು, ಕಾರಣ ತಕ್ಷಣದಲ್ಲಿ ರೈತರ ಪಹಣಿಯಲ್ಲಿನ ವಕ್ಫ್ ಬೋರ್ಡ್ 2012 ರಿಂದ 2016 ರವರೆಗೆ ಎಂದು ನಮೂದು ಮಾಡಿರುವ ಹೆಸರು ತೆಗೆಯಬೇಕು ಇಲ್ಲದಿದ್ದಲ್ಲಿ ನಿರಂತರವಾಗಿ ಹೋರಾಟಗಳು ನಡೆಯಲಿವೆ ಮುಂದಿನ ಆಗು ಹೋಗುಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ‌ ಹೊಣೆಗಾರರು ಆಗಲಿದ್ದಾರೆ ಎಂದು ಎಚ್ಚರಿಸಿದರು.

ಚಿಂಚೋಳಿ ತಾಲೂಕಿನ ಸಿದ್ದಸಿರಿ ಸಕ್ಕರೆ ಕಾರ್ಖಾನೆ ತಕ್ಷಣ ಪ್ರಾರಂಭಿಸಬೇಕು, ಜಿಲ್ಲಾದ್ಯಂತ ಅಕ್ರಮ ಮರಳುಗಾರಿಕೆ ತಡೆಹಿಡಿಯಬೇಕು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಜೆಜೆಎಂ ಕಾಮಗಾರಿ ತನಿಖೆ ಮಾಡಬೇಕು, ಸರಕಾರಿ ಜಮೀನು ಅಕ್ರಮದಿಂದ ಸಕ್ರಮ ಮಾಡಬೇಕು, ಜಿಲ್ಲಾದ್ಯಂತ ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ತಡೆಹಿಡಿಯಬೇಕೆಂಬ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಠಲ ಮಾಕಾ, ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ ಜಿ. ಝಳಕಿ, ಜಿಲ್ಲಾ ಸದಸ್ಯ ವಿಜಯಕುಮಾರ ಚವ್ಹಾಣ, ಶಹಾಬಾದ್ ತಾಲೂಕು ಅಧ್ಯಕ್ಷ ಶಿವಯೋಗಿ ಪೂಜಾರಿ, ಗೌರವಾಧ್ಯಕ್ಷ ಮಹಿಬೂಬ ಪಟೇಲ್, ಚಿತ್ತಾಪುರ ತಾಲೂಕು ಅಧ್ಯಕ್ಷ ಪರಮೇಶ್ವರ.ಎಸ್.ಮತ್ತಿಮೂಡ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೀಮನಳ್ಳಿಕರ್, ಉಪಾಧ್ಯಕ್ಷ ಮಕಬೂಲ ಪಟೇಲ್ ಶಂಕರವಾಡಿ, ಚಿಂಚೋಳಿ ಉಪಾಧ್ಯಕ್ಷ ಮರೆಪ್ಪ ನಿಡಗುಂದಾ, ಸೇಡಂ ತಾಲೂಕು ಅಧ್ಯಕ್ಷ ಸದಾಶಿವ ಡಾಕ್ಟರ್, ಮಲ್ಲನಾಥ ಪೂಜಾರಿ ದಿಗ್ಗಾಂವ, ರಾಮರಾವ್ ಕುಲಕರ್ಣಿ, ಸ್ವಸ್ತಿಕ್ ಭಂಡಾರಿ ಸೇರಿದಂತೆ ಅನೇಕ ರೈತರು ಇದ್ದರು. ಸಿಪಿಐಗಳಾದ ಜಗದೇವಪ್ಪ ಪಾಳಾ, ನಟರಾಜ್ ಲಾಡೆ, ಪಿಎಸ್ಐಗಳಾದ ಚೇತನ್ ಪೂಜಾರಿ, ಶೀಲಾ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!