ಭೋವಿ ( ವಡ್ಡರ ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ: ಡಾ. ಶರಣಪ್ಪ ಗುಂಡಗುರ್ತಿ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಕಲಬುರ್ಗಿ ಜಿಲ್ಲೆಯ ಭೋವಿ ( ವಡ್ಡರ ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿದ್ದರಾಮೇಶ್ವರ ಸರ್ಕಾರಿ ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಶರಣಪ್ಪ ಬಿ. ಗುಂಡಗುರ್ತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಿಸೆಂಬರ್ 25 ರಂದು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರಥಮ ಬಾರಿಗೆ ಶೇ. 75 ರಷ್ಟು ಹಾಗೂ 2022-23 ಮತ್ತು 2023-24 ನೇ ಸಾಲಿನ ಸ್ನಾತಕ, ಸ್ನಾತಕೋತ್ತರ, ಡಿಪ್ಲೋಮಾ ಹಾಗೂ ವೃತ್ತಿಪರ ಕೋರ್ಸ್ ಗಳ ಎಲ್ಲಾ ಸೆಮಿಸ್ಟರ್ ಗಳು ಸೇರಿ ಶೇ.65 ರಷ್ಟು ಅಂಕಗಳನ್ನು ಪಡೆದಿರುವ ಪ್ರತಿಭಾವಂತ ಭೋವಿ ವಡ್ಡರ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದರು.
ಅರ್ಹ ಅಭ್ಯರ್ಥಿಗಳು ತಮ್ಮ ತಮ್ಮ ಶಾಲಾ, ಕಾಲೇಜಿನ ಮುಖ್ಯಸ್ಥರಿಂದ ದೃಢಿಕೃತ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಖುದ್ದಾಗಿ ಸಲ್ಲಿಸತಕ್ಕದ್ದು ಶ್ರೀನಿವಾಸ್ ಜಾಧವ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮಿನಿ ವಿಧಾನಸೌಧ ಎದುರುಗಡೆ ಕಲಬುರ್ಗಿ ಮತ್ತು ಶ್ರೀಶೈಲ್ ಜಾಧವ್, ಜಿಲ್ಲಾ ತೋಟಗಾರಿಕೆ ಇಲಾಖೆ ರಾಜಪುರ ರಸ್ತೆ ಕಲಬುರ್ಗಿ. ಅರ್ಜಿಗಳನ್ನು ಸಲ್ಲಿಸುವುದು ಡಿ.10 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 9741733156, 9900171030, 7619389217 ಸಂಪರ್ಕಿಸತಕ್ಕದ್ದು ಶ್ರೀ ಸಿದ್ದರಾಮೇಶ್ವರ ಸರ್ಕಾರಿ, ಅರೆ ಸರಕಾರಿ ಮತ್ತು ನಿವೃತ್ತ ನೌಕರರ ಸಂಘ(ರಿ). ಕಲಬುರಗಿ ಇವರಿಗೆ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಸಲಹೆಗಾರರಾದ ಸಿದ್ರಾಮ್ ದಂಡಗುಲಕರ್, ಅಮರಯ್ಯ ಕುಮಸಿ, ನಾಗೇಂದ್ರಪ್ಪ ಪೋಲಕಪಲ್ಲಿ , ತಿಮ್ಮಯ್ಯ ಒಡೆಯರಾಜ, ರಾಜು ಒಡೆಯರಾಜ, ಸಾವಿತ್ರಿ ಒಡೆಯರಾಜ, ಅನೀಲಕುಮಾರ ಒಡೆಯರಾಜ ಸೇರಿದಂತೆ ಇತರರು ಇದ್ದರು.

