Oplus_0

ಜನಪದ ಕಲಾವಿದರಿಗೆ ಸನ್ಮಾನ, ಜನಪದ ಸಾಹಿತ್ಯ ಪುರಾತನವಾದದ್ದು: ಸೇಡಂ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಜನಪದ ಸಾಹಿತ್ಯವು ಜನರ ಬಾಯಿಯಿಂದ ಬಾಯಿಗೆ ಸಾಗಿಬಂದ ಅಧ್ಬುತ ಸಾಹಿತ್ಯವಾಗಿದೆ. ಇದು ಪುರಾತನ ಕಾಲದಿಂದ ಬೆಳೆದು ಬಂದಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಸೇಡಂ ಹೇಳಿದರು.

ಪಟ್ಟಣದ ಬೆಥನಿ ಪ್ರೌಢಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡ ಶಾಲಾ ಕಾಲೇಜಿಗೊಂದು ಜನಪದ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಕಲೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿಭಿನ್ನವಾಗಿ ಇರುತ್ತದೆ. ಆ ಕಲೆಯಲ್ಲಿ ನಾಡಿನ ವೈಭವ ಪರಂಪರೆ ಅಡಗಿರುತ್ತದೆ. ಜನಪದ ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ, ಜಾನಪದ ಕಲೆಯನ್ನು ಉಳಿಸಲು ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನಾಕಟ್ಟಿ ಅವರು ಉಪನ್ಯಾಸ ನೀಡಿ, ಪಾಶ್ಚಿಮಾತ್ಯ ಸಂಸ್ಕೃತಿಗಿಂತ ನಮ್ಮ ಜನಪದ ಸೊಬಗಿನ ಬಗ್ಗೆ ಇಂದಿನ ವಿದ್ಯಾರ್ಥಿಗಳು ಹೆಚ್ಚು ತಿಳಿದುಕೊಳ್ಳಬೇಕು ಹಿರಿಯರು ಹೇಳಿದ ಗಾದೆಮಾತುಗಳು, ಒಗಟುಗಳು ಸಂಪ್ರದಾಯ ಬಿಂಬಿಸುವ ಗೀ ಗೀ ಪದಗಳು, ಮೊಹರಂ ಹಾಡುಗಳು, ಭಜನಾ ಗೀತೆಗಳಲ್ಲಿ ಬದುಕಿಗೆ ಪೂರಕವಾಗುವ ಸಂದೇಶಗಳಿವೆ ಅವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತು ತಾಲುಕು ಅದ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಕಾಲೇಜು ಮಕ್ಕಳಲ್ಲಿ ಜನಪದದ ಆಸಕ್ತಿ ಮೂಡಿಸಲು ಮತ್ತು ಸ್ಥಳೀಯ ಕಲಾವಿದರನ್ನು ಶಾಲೆಗಳಿಗೆ ಕರೆದುಕೊಂಡು ಹೋಗಿ ಕಲಾವಿದರಿಂದ ವಿವಿಧ ಕಲೆಗಳ ಪ್ರದರ್ಶನ ಮಾಡಿಸಲಾಗುತ್ತಿದೆ. ಇದರಿಂದ ಕಲೆಯ ಅರಿವು ಮತ್ತು ಕಲಾವಿದರ ಬಗ್ಗೆ ಗೌರವ ಹೆಚ್ಚಿಸುತ್ತದೆ ಎಂದರು.

ಅಧ್ಯಕ್ಷತೆಯನ್ನು ಬೆಥನಿ ಪ್ರೌಢಶಾಲೆಯ ಮುಖ್ಯ ಗುರು ಭಗಿನಿ ಕವಿತಾ ಲೋಬೋ ವಹಿಸಿ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಅನೇಕ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದೆ ಇದರಿಂದ ಮಕ್ಕಳಲ್ಲಿ ದೇಶಿ ಕಲೆಯ ಬಗ್ಗೆ ಜಾಗೃತಿ ಮೂಡುವುದು ಎಂದರು.

ಇದೆ ಸಂಧರ್ಭದಲ್ಲಿ ವಿವಿಧ ಕಲೆಗಳ ಪ್ರದರ್ಶನ ನೀಡಿದ ಕಲಾವಿದರಾದ ಮಲ್ಲಯ್ಯಾ ಗುತ್ತೇದಾರ, ವಿಜಯಕುಮಾರ ಲೋಮಟಿ , ಸಿದ್ದು ಸ್ವಾಟಿ, ಶಾಂತಮ್ಮ ಶಿರವಾಟಿ, ನಿರ್ಮಲಾ ಶಿರವಾಟಿ, ಬಸ್ಸಮ್ಮ ಭಾರತಕೊಳ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಾಹಿತಿ ಲಿಂಗಣ್ಣ ಮಲ್ಕನ್, ಶ್ವೇತಾ ಪಾಟೀಲ, ಕಸಾಪ ಗೌರವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ್, ಶಿಕ್ಷಕರಾದ ಶೇಷಪ್ಪ ಬಡಿಗೇರ, ಸಾಬಣ್ಣ ಮಳಖೇಡಕರ್, ಶಿಕ್ಷಕಿಯರಾದ ಅರ್ಚನಾ, ಸುಷ್ಮಾ, ನಿಖತ್ ಪರ್ವಿನ್, ಆಶಾರಾಣಿ , ಬಸ್ಸಮ್ಮ, ಶ್ರೀದೇವಿ, ಲಲಿತಾ ಇದ್ದರು. ವಿದ್ಯಾರ್ಥಿಗಳಾದ ಸುಧಾ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು, ದೇವಪ್ಪ ಯರಗಲ್ ಸ್ವಾಗತಿಸಿದರು, ಮಲ್ಲಿಕಾರ್ಜುನ ಮದನಕರ್ ನಿರೂಪಿಸಿದರು, ವಿಶ್ವನಾಥ ಕುಂಬಾರ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!