ಹಾಲುಮತ ಸಮಾಜದವರಿಂದ ಅಧಿಕಾರ ಬಿಡಿಸುವುದು ಸುಲಭವಲ್ಲ: ಕೋಡಿಶ್ರೀ ಮಹತ್ವದ ಭವಿಷ್ಯ
ನಾಗಾವಿ ಎಕ್ಸ್ಪ್ರೆಸ್
ಯಾದಗಿರಿ: ಹಾಲುಮತ ಸಮಾಜದವರಿಂದ ಅಧಿಕಾರ ಬಿಡಿಸುವುದು ಅಷ್ಟು ಸುಲಭವಲ್ಲ ಎಂದು ಕೋಡಿ ಮಠದ ಡಾ.ಶಿವಯೋಗಿ ಶಿವನಾಂದ ಸ್ವಾಮೀಜಿ ಅವರು ಮಹತ್ವದ ಭವಿಷ್ಯ ನುಡಿದಿದ್ದಾರೆ.
ಯಾದಗಿರಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಎಂಬ ಭವಿಷ್ಯವಾಣಿ ನುಡಿದಿದ್ದಾರೆ.
ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವದಾರಾಧನೆ ಮಾಡುವ ಸಮಾಜ. ಹಾಲು ಕೆಟ್ಟರೂ ಹಾಲು ಕೆಡದು, ಹಕ್ಕು ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು, ಹಾಲುಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ. ಸಿಎಂ ಕುರ್ಚಿಯಿಂದ ಬಿಡಿಸುವುದು ಅಷ್ಟು ಸುಲಭವಲ್ಲ, ಸಿಎಂ ಸಿದ್ದರಾಮಯ್ಯ ಅವರು ಅವರಾಗೆ ಸಿಎಂ ಸ್ಥಾನ ಬಿಡಬೇಕು, ಹೊರತು ನೀವು ಬಿಡಿಸಿಕೊಳ್ಳುವದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಮುಂಬರುವ ಸಂವತ್ಸರದಲ್ಲಿ ರಾಜ್ಯಕ್ಕೆ ತೊಂದರೆ ತಾಪತ್ರೆವಿಲ್ಲ. ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಸುಭೀಕ್ಷತೆ ಇರುತ್ತದೆ, ನಾಡಿನಲ್ಲಿ ಯಾವುದೇ ಕೊರತೆ ಕಾಣುತ್ತಿಲ್ಲ. ಯುಗಾದಿ ನಂತರ ಕರ್ನಾಟಕ ಬಗ್ಗೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.