ಮರಳು ಮಾಫಿಯಾ ಹಣ ಯಾರ ಜೇಬಿಗೆ ಹೊಗುತ್ತಿದೆ ? ಇದು ರಿಪಬ್ಲಿಕ್ ಆಪ್ ಕಲಬುರಗಿ: ಛಲವಾದಿ ನಾರಾಯಣಸ್ವಾಮಿ ಆರೋಪ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ರಾಜ್ಯದ ಗೃಹಸಚಿವರು ಗುಲ್ಬರ್ಗಕ್ಕೆ (ಕಲಬುರಗಿ) ಬರುವುದೇ ಇಲ್ಲ. ರಾಜ್ಯದ ಇಲ್ಲಿಗೆ ಬೇರೆ ಕಾನೂನು ಇದೆ. ಇದು ರಿಪಬ್ಲಿಕ್ ಆಪ್ ಗುಲ್ಬರ್ಗ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ಇಂದು ಇಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದ ಬೇರೆಲ್ಲೂ ಝೀರೊ ಟ್ರಾಫಿಕ್ ಇಲ್ಲ. ಇಲ್ಲಿ ಇದೆ. ಇದು ರಿಪಬ್ಲಿಕ್ ಅಲ್ವಾ ಎಂದು ಪ್ರಶ್ನಿಸಿದರು. ಚಿತ್ತಾಪುರದಲ್ಲಿ ಮರಳು ಮಾಫಿಯಾ ನಡೆದಿದೆ. ಕೆಆರ್‍ಐಡಿಎಲ್ ಹೆಸರಿನಲ್ಲಿ ದಿನಕ್ಕೆ 700 ರಿಂದ 800 ಲೋಡ್ ಮರಳು ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದೆ ಎಂದು ಟೀಕಿಸಿದರು.
ದಿನಕ್ಕೆ 3 ರಿಂದ 4 ಕೋಟಿ ವ್ಯವಹಾರ ನಡೆಯುತ್ತಿದೆ. ಇದರ ಹಣ ದೆಹಲಿ ಎಐಸಿಸಿಗೆ ಹೋಗುತ್ತಿದೆಯೇ? ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೋಗುತ್ತಿದೆಯೇ? ಇಲ್ಲ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಜೋಬಿಗೆ ಹೋಗುತ್ತದೆಯೇ ಎಂದು ನಾರಾಯಣ ಸ್ವಾಮಿ ಅವರು ಪ್ರಶ್ನಿಸಿದ್ದಾರೆ.