ಶಿಕ್ಷಣ ಮತ್ತು ಕೈಗಾರಿಕೋದ್ಯಮ ವಿಭಾಗದಲ್ಲಿ ಸಾಧನೆಗೈದ ಅಮರೇಶ್ವರಿ ಚಿಂಚನಸೂರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯ ಮಾನ್ಯತೆ ಸಂಸ್ಥೆ (ಲಾವೋ) ಯುಎಸ್ಎ ವತಿಯಿಂದ ಏಪ್ರಿಲ್ 20 ರಂದು ಪುಣೆಯಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಶಿಕ್ಷಣ ಮತ್ತು ಕೈಗಾರಿಕೋದ್ಯಮ ವಿಭಾಗದಲ್ಲಿ ಅಮರೇಶ್ವರಿ ಬಾಬುರಾವ್ ಚಿಂಚನಸೂರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಶಿಕ್ಷಣ ಮತ್ತು ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ನಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವ ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ವಿಶ್ವವಿದ್ಯಾಲಯ ಅವರಿಗೆ ಈ ಮೂಲಕ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದು ಅಮರೇಶ್ವರಿ ಚಿಂಚನಸೂರ ಹೇಳಿದರು.
ಈ ಗೌರವ ಡಾಕ್ಟರೇಟ್ ಪದವಿಯಿಂದ ಹರ್ಷವನ್ನುಂಟು ಮಾಡಿದೆ ಇದರಿಂದ ನನ್ನ ಜವಾಬ್ದಾರಿ ಕೂಡ ಹೆಚ್ಚಿಸಿದೆ, ಮುಂದೆ ಇನ್ನಷ್ಟು ಹೆಚ್ಚು ಸೇವೆ ಸಲ್ಲಿಸಲು ನನಗೆ ಪ್ರೋತ್ಸಾಹ ಸಿಕ್ಕಂತಾಗಿದೆ ಎಂದು ಹೇಳಿದರು.
40 ವರ್ಷದಿಂದ ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ದಾಲ್ ಮಿಲ್, ಕ್ಯಾಮಿಕಲ್ ಫ್ಯಾಕ್ಟರಿ, ಡಿಸ್ಟಿಲರಿ ವ್ಯವಹಾರ ಹಾಗೂ 25 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು, ಸಿಬಿಎಸ್ಇ, ಬಿ.ಇಡಿ ಸೇರಿದಂತೆ ವಿವಿಧ ಶಾಲಾಕಾಲೇಜುಗಳು ನಡೆಸುತ್ತಿರುವ ಅಮರೇಶ್ವರಿ ಚಿಂಚನಸೂರ ಅವರ ಸೇವೆಗೆ ಡಾಕ್ಟರೇಟ್ ಅವಾರ್ಡ್ ಸಿಕ್ಕಿದೆ. ಕೋಲಿ ಸಮಾಜದಲ್ಲಿ ಮಹಿಳೆಯೊಬ್ಬರಿಗೆ ಗೌರವ ಡಾಕ್ಟರೇಟ್ ಲಭಿಸಿರುವುದು ಹೆಮ್ಮೆಯ ವಿಷಯ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.