ದಂಡೋತಿಯ ಭೃಂಗಿಮಠ ಕುಟುಂಭ ಸೇಫಾಗಿ ತಾಯಿ ನಾಡಿಗೆ ವಾಪಸ್, ನಿಟ್ಟುಸಿರು ಬಿಟ್ಟ ಬಂಧುಗಳು, ಸ್ನೇಹಿತರು
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದ ಮೂಲತ: ಚಿತ್ತಾಪುರ ತಾಲೂಕಿನ ದಂಡೋತಿಯ ಪ್ರಸಿದ್ದ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರ ಕುಟುಂಭ ಸೇಫಾಗಿ ಮರಳಿ ತಾಯಿನಾಡು ಕರ್ನಾಟಕದ ಬೆಂಗಳೂರಿಗೆ ಆಗಮಿಸಿದ್ದಾರೆ.
ಚಿತ್ತಾಪುರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಪಾಲ್ಗೊಂಡು ಅಲ್ಲಿ ಸನ್ಮಾನ ಸ್ವೀಕರಿಸಿ ದಂಡೋತಿಯ ಗದಿಗಯ್ಯ ಮುತ್ಯಾರ ಗದ್ದುಗೆಯ ಶ್ರೀ ಬಲಭೀಮೇಶ್ವರ ಜಯಶ್ರೀ ಮಾತಾಜಿ ಮತ್ತು ದಿಗ್ಗಾಂವ ಶ್ರೀಗಳ ಆಶೀರ್ವಾದ ಪಡೆದು ಅಲ್ಲಿಂದ ವಿಜಯಪುರ ಮಾರ್ಗವಾಗಿ ತಮ್ಮ ಕುಟುಂಭ ಸಮೇತ ಬೆಂಗಳೂರಿಗೆ ಏಪ್ರಿಲ್ 16 ರಂದು ರೈಲು ಮೂಲಕ ತೆರಳಿದ್ದ ಭೃಂಗಿಮಠ ಅವರು ದಿ. 17 ರಂದು ಸಂಜೆ 7 ಗಂಟೆ 5 ನಿಮಿಷಕ್ಕೆ ವಿಮಾನ ಹತ್ತಿ ಅಲ್ಲಿಂದ ಮಂಗಳೂರು ದೇಹಲಿ ಮೂಲಕ ಶ್ರೀನಗರ ತೆರಳಿ 18 ರ ಬೆಳಿಗ್ಗೆ ಶ್ರೀನಗರದಿಂದ ನೇರವಾಗಿ ಗುಲ್ಮಾರ್ಗ ತೆರಳಿ ಅಲ್ಲಿ ಐಸ್ ಬೆಟ್ಟದಲ್ಲಿ ಕುಟುಂಭ ಸಮೇತ ಹಸಿರು ಪ್ರದೇಶ ವೀಕ್ಷಿಸಿ ಅಂದು ಅಲ್ಲಿ ದಿನ. 18 ಮತ್ತು 19 ರಂದು ರಾತ್ರಿ ಖಾಸಗಿ ಹೊಟೇಲಲ್ಲಿ ವಸತಿ ಮಾಡಿ ಎಪ್ರಿಲ್ 20 ರ ಬೆಳಿಗ್ಗೆ ಗುಲ್ಮಾರ್ಗ ದಿಂದ ಶ್ರೀನಗರ ಮಾರ್ಗವಾಗಿ ಪಹಲ್ಗಾಮ್ ಹೋದರು, ಮದ್ಯದಲ್ಲಿ ಅಲ್ಲಲ್ಲಿ ಇರುವ ವ್ಯಾಲಿಗಳಲ್ಲಿ, ನದಿಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ನಿಸರ್ಗದ ಸವಿ ಅನುಭವಿಸಿದರು. ಅಂದು ರಾತ್ರಿ ಪಹಲ್ಗಾಮ್ ಗೆ ತಲುಪಿ ರಾತ್ರಿ ಖಾಸಗಿ ಹೋಟೇಲಲ್ಲಿ ಇದ್ದರು.
ಎಪ್ರಿಲ್ 21 ರ ಬೆಳಿಗ್ಗೆ ಖಾಸಗಿ ಮಹಾನದ ಮೂಲಕ ಅಲ್ಲಿನ ಅರು ವ್ಯಾಲಿ, ಬೇತಾಬ್ ವ್ಯಾಲಿ, ಚಂದನವರಿ ವ್ಯಾಲಿ ಇತರೆ ವ್ಯಾಲಿಗಳನ್ನು ವೀಕ್ಷಿಸಿ ಮರಳಿ ಹೋಟೇಲ್ಗೆ ಬಂದು ರಾತ್ರಿ ಅಲ್ಲೆ ಉಳಿದರು ಈ ಮದ್ಯ ಬೈಹಿಸರನ್ ವ್ಯಾಲಿ ನೋಡಬೆಕೆಂದಿದ್ದ ಕುಟುಂಭಕ್ಕೆ ಅಲ್ಲಿ ಕುದುರೆ ಹತ್ತಲು ಆಗದು ಅದರಲ್ಲೂ 75 ವರುಷದ ಹಿರಿಯ ಅಜ್ಜಿ ಜೊತೆಗಿರೋದರಿಂದ ಅಜ್ಜಿ ಅಲ್ಲಿಗೆ ಹೋಗೋದು ಬೇಡ ಕುದುರೆ ಹತ್ತೋದು ಆಗದು ಅಂದಿದ್ದ ಆ ಅಜ್ಜಿಯ ಮಾತು ಕೇಳಿದ ಕುಟುಂಭ ಬೈಹಿಸರನ ವ್ಯಾಲಿಯ ಮೇಲೆ ಹೋಗಲಿಲ್ಲ ಈ ಕಾರಣಕ್ಕಾಗಿ ಈ ಕುಟುಂಭ ಅಪಾಯದಿಂದ ಪಾರಾಗಿದೆ.
ಮುಂದೆ ಎಪ್ರಿಲ್ 22ರ ಮದ್ಯಾಹ್ನ 12.15 ಸುಮಾರಿಗೆ ಭೈಹಿಶ್ರನ್ ವ್ಯಾಲಿಗೆ ಹೋಗದೇ ಎದರಿನ ರಸ್ತೆಯ ಮೂಲಕ ಪಹಲ್ಗಾಮ್ ಬಿಟ್ಟು ವಾಹನದಲ್ಲಿ ತೆರಳಿದ ಕುಟುಂಬ ಶ್ರೀನಗರಕ್ಕೆ ತಲುಪಿ ಅಲ್ಲಿ ಸಾಯಂಕಾಲ ತುಲಿಪ ಗಾರ್ಡನ ನೋಡಿ ಸಿಕಾರ ರೈಡ್ (ಹಡಗು ವಿಹಾರ ) ಮಾಡಿ ರಾತ್ರಿ ಅಲ್ಲಿ ಖಾಸಗಿ ಹೋಟೇಲಲ್ಲಿ ಉಳಿದರು.
23 ರಂದು ಶ್ರೀನಗರ ಸಂಪೂರ್ಣ ಬಂದ ಆಗಿತ್ತು. 24 ರಂದು ಬೆಳಿಗ್ಗೆ 10 ಗಂಟೆಗೆ ಹೋಟೆಲಿಂದ ನಿರ್ಗಮಿಸಿ ಶ್ರೀನಗರದ ಮೊಘಲ್ ಗಾರ್ಡನ ನೋಡಿಕೊಂಡು ನೇರವಾಗಿ ಶ್ರೀನಗರದಿಂದ ಅಲ್ಲಿನ ಏರಪೋರ್ಟಿಗೆ ಬಂದು ಇಂಡಿಗೋ ನೇಶನ್ ವಿಮಾನ ಹತ್ತಿ ದೇಹಲಿ ಮಾರ್ಗವಾಗಿ ತಾಯಿನಾಡಾದ ಬೆಂಗಳೂರಿಗೆ ನಿನ್ನೆ ಬೆಳಿಗ್ಗೆ ಲ್ಯಾಂಡಾಗಿ, ಮದ್ಯಾಹ್ನ ಖಾಸಗಿ ಚನಲ್ಗೆ ಸಂಧರ್ಶನ ನೀಡಿ ರಾತ್ರಿ ಬೆಂಗಳೂರಲ್ಲೇ ಉಳಿದು ಇಂದು ವಿಜಯಪುರ ಮಾರ್ಗವಾಗಿ ಕಲಬುರಗಿಗೆ ಬರುತ್ತಿದ್ದಾರೆ.
ಹೋರಾಟಗಾರರು, ನಾಗಾವಿ ನಾಡಿನ ಸಾಹಿತಿಗಳು, ಚಿಂತಕರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸಮಾಜದ ಆಸ್ತಿಯಾಗಿರುವ ಭೃಂಗಿಮಠ ಅವರು ಸುರಕ್ಷಿತವಾಗಿ ಬರಲೆಂದು ಅಪಾರ ಸಂಖ್ಯೆಯ ಅಭಿಮಾನಿಗಳು ಹಾರೈಸಿದ್ದರು, ಫೋನ್ ಮಾಡಿ ಮಾತಾಡಲು ಪ್ರಯತ್ನಿಸಿದ್ದರು ಆದರೆ ಸಂಪರ್ಕ ಸಿಕ್ಕಿರಲಿಲ್ಲ ಈಗ ಭೃಂಗಿಮಠ ವಕೀಲರ ಎರಡೂ ಫೋನಗಳು ಸೇವೆಯಲ್ಲಿದ್ದು ಅವುಗಳ ನಂಬರ 94480-21625. 8088880588ಅಂತ ಇವೆ. ಅಪಾಯದ ಸ್ಥಳ ಜಮ್ಮುಕಾಶ್ಮೀರ ಪಹಲ್ಗಾಮ್ ನಿಂದ ಸುರಕ್ಷಿತವಾಗಿ ಬಂದ ಕುಟುಂಭಕ್ಕೆ ನೋಡಿ ನಾಡಿನ ಜನತೆ ಮತ್ತು ಅವರ ಬಂಧುಗಳು, ಅಭಿಮಾನಿಗಳು, ಸ್ನೇಹಿತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.