ಅಲ್ಲೂರು.ಕೆ ಗ್ರಾಮದಲ್ಲಿ ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮ, ವಿಶ್ವ ಪರಿಸರ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಲ್ಲೂರ.ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಿಂದ ಎಲ್ಎಲ್ಎಫ್, ಆರ್’ಟಿಎಸ್ ಕಲಬುರಗಿ ವತಿಯಿಂದ ಗ್ರಾಮದಲ್ಲಿ ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮ ಗುರುವಾರ ನಡೆಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯಗಳೊಂದಿಗೆ, ಕುಂಬ ಕಳಸದೊಂದಿಗೆ ಅದ್ದೂರಿಯಾಗಿ ದಾಖಲಾತಿ ಆಂದೋಲನ ಕಾರ್ಯಕ್ರಮದ ಅಭಿಯಾನ ನಡೆಯಿತು.
ಈ ವೇಳೆ ಶಾಲಾ ಮುಖ್ಯಗುರು ಅಂಬಣ್ಣ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಉಚಿತ ಸಮವಸ್ತ್ರ, ಪುಸ್ತಕಗಳು, ಬಿಸಿಯೂಟ, ಮೊಟ್ಟೆ ಬಾಳೆಹಣ್ಣು ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲೆಯ ಮಾಡಿಸಿ ಎಂದು ಕರೆ ನೀಡಿದರು.
ಸಹ ಶಿಕ್ಷಕಿ ಶ್ರೀವಂತಿ, ಎಲ್ಎಲ್ಎಫ್ ಸಂಸ್ಥೆಯ ಎಸ್ಆರ್’ಪಿ ದಿಲೀಪ್ ಕುಮಾರ್, ಸಂಪನ್ಮೂಲ ಶಿಕ್ಷಕರಾದ ಮೈಲಾರಿ, ಕಾಶಿನಾಥ್, ಮಮತಾ ಹಾಗೂ ಮಂಜುನಾಥ, ವಿಜಯಕುಮಾರ್ ಹಾಗೂ ಊರಿನ ಪಾಲಕ ಪೋಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.

