ಕೊಲ್ಲೂರು ಗ್ರಾಪಂ ಕಚೇರಿಗೆ ಬಾರದ ಅಧ್ಯಕ್ಷರು, ಪಿಡಿಒ | ಅಭಿವೃದ್ಧಿ ಕುಂಠಿತ, ಹತ್ತಾರು ಸಮಸ್ಯೆಗಳು ಉದ್ಭವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕೊಲ್ಲೂರು ಗ್ರಾಮ ಪಂಚಾಯತ್ ಪಿಡಿಒ ಹಾಗೂ ಅಧ್ಯಕ್ಷರು ಪಂಚಾಯಿತಿ ಕಾರ್ಯಾಲಯಕ್ಕೆ ಕಳೆದ ಮೂರು ತಿಂಗಳಿಂದ ಬಾರದೇ ಇರುವುದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಹಾಗೂ ಗ್ರಾಮದಲ್ಲಿ ಹತ್ತಾರು ಸಮಸ್ಯೆಗಳು ಉದ್ಭವಿಸಿವೆ ಎಂದು ಗ್ರಾಮದ ಸಾಗರ ದೇವಿಂದ್ರಕರ್ ಆರೋಪಿಸಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷರು ಇಲ್ಲಿವರೆಗೆ ಒಂದೂ ಸಭೆ ಮಾಡಿಲ್ಲ ಇನ್ನೊಂದೆಡೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂರು ತಿಂಗಳಿಂದ ಪಂಚಾಯಿತಿಗೆ ಬಂದಿಲ್ಲ ಹೀಗಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಹಾಗೂ ಒಳಚರಂಡಿ, ಬೀದಿ ದೀಪ ಅವ್ಯವಸ್ಥೆಯಿಂದ ಗ್ರಾಮಸ್ಥರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಜಂಗಲ್ ಕಟಿಂಗ್ ಮಾಡದೇ ಇರುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇಷ್ಟಾದರೂ ಗ್ರಾಮ ಪಂಚಾಯತ್ ಅಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಪಿಡಿಒ ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
“ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಡಿಕಲ್ ರಜೆಯಲ್ಲಿ ಇದ್ದರು ಅವರು ಈಗ ಭಡ್ತಿ ಆಗಿದ್ದಾರೆ ಹೀಗಾಗಿ ಸೋಮವಾರ ಹೊಸ ಪಿಡಿಒ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಸಮಸ್ಯೆ ಬಗೆಹರಿಯಲಿದೆ.”-ಮೊಹ್ಮದ್ ಅಕ್ರಂ ಪಾಷಾ ಇಓ ತಾಪಂ ಚಿತ್ತಾಪುರ.

