Oplus_0

ಕಲಬುರಗಿ-ನಾಲವಾರ ಸಾರಿಗೆ ಬಸ್ ಪುನಃ ಪ್ರಾರಂಭ ಮಾಡುವಂತೆ ಕೆಕೆಆರ್’ಟಿಸಿ ಅಧ್ಯಕ್ಷರಿಗೆ ಮನವಿ 

ನಾಗಾವಿ ಎಕ್ಸಪ್ರೆಸ್

ವಾಡಿ: ಕಲಬುರಗಿಯಿಂದ ನಾಲವಾರ ಗ್ರಾಮಕ್ಕೆ ಚಾಲ್ತಿಯಲ್ಲಿರುವ ಬಸ್‌ನ್ನು ರದ್ದು ಮಾಡಿದ್ದರಿಂದ ಪ್ರಯಾಣಿಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಆದ್ದರಿಂದ ಪುನ: ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೇಸ್ ಮುಖಂಡ ನಾಗೇಂದ್ರ ಬೊಮ್ಮನಳ್ಳಿ ಜೈಗಂಗಾ ಕೆಕೆಆರ್’ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕಲಬುರಗಿ ಯಿಂದ ನಾಲವಾರ ಕ್ಕೆ ವಿವಿಧ ಇಲಾಖೆಯ ನೌಕರರು ಹಾಗೂ ಶಿಕ್ಷಕರು ಬರುತ್ತಿದ್ದು ನಾಲವಾರಕ್ಕೆ ಬರುವ ಈ ಬಸ್ ರದ್ದು ಮಾಡಿದ್ದು ಪುನ: ಕಲಬುರಗಿಯಿಂದ ಬೆಳಗ್ಗೆ 7.35 ಕ್ಕೆ ಬಸ್ ಬಿಡುವುದರಿಂದ ನಾಲವಾರ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ತಲುಪುವಂತೆ ಮಾಡಬೇಕು ಹಾಗೂ ಸಂಜೆ 4.35 ನಾಲವಾರ ಗ್ರಾಮಕ್ಕೆ ಬರುವುದರಿಂದ ಎಲ್ಲಾ ವಿವಿಧ ಇಲಾಖೆಯ ನೌಕರರಗೆ ಹಾಗೂ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಬರುವ ಭಕ್ತರಿಗೆ ಅನುಕೂಲವಾಗುತ್ತದೆ. ಕುಂಬಾರಹಳ್ಳಿಯಿಂದ 100 ವಿದ್ಯಾರ್ಥಿಗಳು ನಾಲವಾರ ಶಾಲೆಗೆ ಬರುತ್ತಾರೆ. ಈ ಬಸ್ ಬರುವುದರಿಂದ ಮಕ್ಕಳಿಗೆ ಮತ್ತು ನೌಕರರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಶಿಕ್ಷಕರಿಗೆ ಮುಖ ಹಾಜರಾತಿ ಮೋಬೈಲ್ ಮುಖಾಂತರ ಜಿಪಿಎಸ್ ಹಾಜರಾತಿ ಇರುವುದರಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಬೆಳಗ್ಗೆ 9.30 ಮತ್ತು ಸಂಜೆ 4.35 ಕ್ಕೆ ನಾಲವಾರ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿನೋದ್ ಕೆಬಿ, ರಾಜೇಶ್ ಯೆನುಗುಂಟೆಕರ್, ಅಶೋಕ್ ದಹೆಂಡೆ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!