ಹಲಕರ್ಟಿ ಪಿಕೆಪಿಎಸ್ ನಿರ್ದೇಶಕ ಸ್ಥಾನಕ್ಕೆ ಭಾಗಣ್ಣ ಬುಕ್ಕಾ ರಾಜೀನಾಮೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಹಲಕರ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಭಾಗಣ್ಣ ಬುಕ್ಕಾ ರಾಜೀನಾಮೆ ನೀಡಿದ್ದಾರೆ.
ಕಳೆದ ಮೇ.20 ರಂದು ಪಿಕೆಪಿಎಸ್ ಸಂಘಕ್ಕೆ ಜರುಗಿದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಅವರು, ಕಚೇರಿಗೆ ತೆರಳಿ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಚುನಾವಣೆ ಪೂರ್ವ ಮತ್ತು ಚುನಾವಣೆ ನಂತರ ಬಿಜೆಪಿ ಪಕ್ಷದೊಂದಿಗೆ ನನ್ನ ಹೆಸರು ಅನಗತ್ಯವಾಗಿ ತಳಕು ಹಾಕಲಾಗುತ್ತಿದ್ದು ನಾನು ನಂಬಿರುವ ತತ್ವ ಸಿದ್ದಾಂತಕ್ಕೆ ಇದು ವಿರುದ್ಧವಾಗಿದೆ. ಹೀಗಾಗಿ ಈ ಸ್ಥಾನದಲ್ಲಿ ಮುಂದುವರೆಯದೇ ರಾಜೀನಾಮೆ ನೀಡಿದ್ದೇನೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

