Oplus_131072

ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮೇಲೆ ದೈಹಿಕ ಹಲ್ಲೆ ನಡೆಸಿ ಗೂಂಡಾವರ್ತನೆ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಜ್ಜನಶೆಟ್ಟಿ ಆಗ್ರಹ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣದ ವಾರ್ಡ್ ಸಂಖ್ಯೆ 14 ರಲ್ಲಿ ಅನಧಿಕೃತ ಪೈಪ್ ಜೋಡಿಸಿ ಕೆಲ ಬಿಜೆಪಿ ಮನೆಗಳಿಗೆ ನೀರು ಬಾರದೇ ಇರುವುದರ ಬಗ್ಗೆ, ಸಾಮಾಜಿಕ ಕಳಕಳಿ ವ್ಯಕ್ತಪಡಿಸಿ ಸ್ಟೇಟಸ್ ಹಾಕಿದಕ್ಕೆ ಹಲ್ಲೆ ಮಾಡಿದವರ ವಿರುದ್ಧ ಕಾನೂನಿನ ಕಠಿಣ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂದಾಗಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ವಾಟ್ಸಾಪ್ ಸ್ಟೇಟಸ್ ಹಾಕಿದಕ್ಕೆ ಕಾಂಗ್ರೆಸ್‌ ಮಾಜಿ ಪುರಸಭೆ ಸದಸ್ಯ ಪೃಥ್ವಿರಾಜ ಸೂರ್ಯವಂಶಿ ಹಾಗೂ ಆತನ ಬೆಂಬಲಿಗರೊಂದಿಗೆ ಅವರ ಪತಂಜಲಿ ಅಂಗಡಿಗೆ ಬಂದು ಏಕಾಏಕಿ ದಾಳಿ ಮಾಡಿ ಇನ್ನುಂದೆ ಪ್ರಶ್ನೆ ಮಾಡಿದರೆ ಜೀವ ತೇಗಿಯುತ್ತೇವೆ ಎಂದು ಬೆದರಿಕೆ ಹಾಕಿ ಹಲ್ಲೆ ಮಾಡಿ, ಅಂಗಡಿ ಶೆಟ್ಟರಿಗೆ ದೊಡ್ಡ ದೊಡ್ಡ ಕಲ್ಲುಗಳಿಂದ ಜಖಮ್ ಮಾಡಿದ್ದು ಅಕ್ಷಮ್ಯ ಅಪರಾಧವಾಗಿದೆ ಇದನ್ನು ಇಡೀ ನಾಗರಿಕ ಸಮಾಜ ಖಂಡಿಸುತ್ತಿದೆ. ಇಂತಹ ಕೃತ್ಯಗಳಲ್ಲಿ ಯಾರೇ ತೊಡಗಿದ್ದರೂ ಅಂತಹವರ ವಿರುದ್ಧ ಗುಂಡಾ ಕಾಯ್ದೆ ಅಡಿ ಬಂಧಿಸಿ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸದರಿ ಆರೋಪಿಗಳ ವರ್ತನೆ ಸರಿ ಇರುವುದಿಲ್ಲವೆಂದು ಈಗಾಗಲೇ ವಾಡಿ ಪೋಲಿಸ್ ಠಾಣೆಯ ಅಧಿಕಾರಿಗೆ ಗೊತ್ತಿರುವ ವಿಷಯವಾಗಿರುತ್ತದೆ. ಕಾರಣ ಜಿಲ್ಲಾ ವರಿಷ್ಠಾಧಿಕಾರಿಗಳು ಇದರ ಕುರಿತು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಕಾರ್ಯಕರ್ತರಿಗೆ ಮಾನಸಿಕವಾಗಿ, ದೈಹಿಕವಾಗಿ ಕುಂದಿಸುವಂತ ಕೆಲಸ ನಿರಂತರವಾಗಿ ತಾಲೂಕಿನಲ್ಲಿ ನಡೆಯುತ್ತಿದೆ ಇದನ್ನು ನಮ್ಮ ಜಿಲ್ಲಾ ಹಾಗೂ ರಾಜ್ಯ ನಾಯಕರು ಗಂಭೀರವಾಗಿ ತೆಗೆದುಕೊಂಡಿದ್ದು, ಇದನ್ನು ತಕ್ಷಣ ಮಟ್ಟ ಹಾಕಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು, ಇಲ್ಲದೇ ಇದ್ದರೆ ತಾಲೂಕಿನಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!