Oplus_131072

ಚಿತ್ತಾಪುರ ಪ್ರಜಾ ಸೌಧ ಉದ್ಘಾಟನೆ, ಸರ್ಕಾರದ ಕಚೇರಿಗಳು ಜನಸ್ನೇಹಿಯಾಗಿರಬೇಕು ಅಂದಾಗ ಉತ್ತಮ ಆಡಳಿತ ಕೊಡಲು ಸಾಧ್ಯ: ಸಚಿವ ಪ್ರಿಯಾಂಕ್ ಖರ್ಗೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಸರ್ಕಾರಿ ಕಚೇರಿಗಳು ಜನಸ್ನೇಹಿ ಆಗಿರಬೇಕು. ಅಂದಾಗ ಮಾತ್ರ ಜನರಿಗೆ ಉತ್ತಮ ಆಡಳಿತ ಕೊಡಲು ಸಾಧ್ಯವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ರೂ.18.41 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಜಾ ಸೌಧ ಉದ್ಘಾಟನೆ ಹಾಗೂ ಫಲಾನುಭವಿಗಳ ಹಕ್ಕು ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಮಿನಿ ವಿಧಾನಸೌಧ ಎಂದು ಕರೆಯುತ್ತಿದ್ದ ಕಟ್ಟಡಗಳಿಗೆ ಪ್ರಜಾ ಸೌಧ ಎಂದು ಹೆಸರಿಸಲಾಗುತ್ತಿದೆ. ಕಾರಣ ಆಡಳಿತ ಜನರಿಗೆ ಹತ್ತಿರವಾಗಬೇಕು. ಸರ್ಕಾರ ಜನರಿಗೆ ಸೇರಿದ್ದು ಅವರ ಕೆಲಸಗಳು ನಿರಾಂತಕವಾಗಿ ನಡೆಯಬೇಕು ಎನ್ನುವ ಉದ್ದೇಶವಾಗಿದೆ ಎಂದರು.

ಇನ್ನು ಮೂರು ವಾರದಲ್ಲಿ ಸಮೃದ್ಧಿ ಯೋಜನೆಯಡಿಯಲ್ಲಿ ರೂ.150 ಕೋಟಿ ಅನುದಾನವನ್ನು ಚಿತ್ತಾಪುರದ ಮತಕ್ಷೇತ್ರಕ್ಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಂದಾಯ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿಯೂ ಕಂದಾಯ‌ ಇಲಾಖೆಗೆ ಸಂಬಂಧಿಸಿದಂತೆ ದಾಖಲೆಗಳನ್ನು‌ ಸಾರ್ವಜನಿಕರಿಗೆ ತ್ವರಿತಗತಿಯಾಗಿ ಒದಗಿಸಲಾಗುತ್ತಿದೆ. ಜುಲೈ ಅಂತ್ಯದ ಒಳಗೆ ಅಥವಾ ಅಗಸ್ಟ್ ಮೊದಲ ವಾರದಲ್ಲಿ ಗ್ರಾಮೀಣ ಮಟ್ಟದ ಅಕ್ರಮ ಜಾಗಗಳನ್ನು ಸಕ್ರಮ ಮಾಡಿ ಇ-ಸ್ವತ್ತು ದಾಖಲೆ ಒದಗಿಸಲಾಗುವುದು ಹಾಗೂ ಪಾವತಿ ಖಾತಾ ಮುಕ್ತ ಜಿಲ್ಲೆಯಾಗಿ ಮಾಡಲಾಗುವುದು ಎಂದರು.

371 ಜೆ ವಿಧಿ ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಚುರುಕುಗೊಂಡಿದೆ. ಪ್ರತಿವರ್ಷ 5,000 ಕೋಟಿ ಅನುದಾನ ಮಂಡಳಿಗೆ ಬರುತ್ತಿದೆ. ಕಳೆದ ಒಂದು ದಶಕದಲ್ಲಿ 30,000 ಕಾಮಗಾರಿಗಳು ನಡೆದಿವೆ. 6,795 ಮೆಡಿಕಲ್ ಹಾಗೂ 22,219 ಎಂಜಿನಿಯರಿಂಗ್ ಸೀಟುಗಳು ಆರ್ಟಿಕಲ್ 371ಜೆ ಅಡಿಯಲ್ಲಿ ದೊರಕಿವೆ. ಈವರೆಗೂ 1.10 ಲಕ್ಷ ಜನರಿಗೆ ಉದ್ಯೋಗ ಹಾಗೂ 37,600 ನೌಕರರಿಗೆ ಬಡ್ತಿ ಸಿಕ್ಕಿದೆ ಎಂದು ಹೇಳಿದರು.

ಮುಂದಿನ ಮೂರು ವರ್ಷದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀಲ ನಕ್ಷೆ ತಯಾರಿಸಲಾಗಿದೆ. ಕಲಬುರಗಿ ಹಾಗೂ ಚಿತ್ತಾಪುರ ಮತ್ತು ವಾಡಿ ಪಟ್ಟಣಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಚಿತ್ರಣವನ್ನೇ ಬದಲಿಸುವ ಐತಿಹಾಸಿಕ ಯೋಜನೆಗಳು ಕಾರ್ಯಗತಗೊಳ್ಳಲಿವೆ. ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಿಸಲು ನಮ್ಮ ಗ್ಯಾರಂಟಿ ಸರ್ಕಾರ ಬದ್ಧವಾಗಿದೆ ಎಂದರು.

ಉದ್ಯೋಗ ಖಾತ್ರಿ ವೇತನ ಪಾವತಿಸುವಲ್ಲಿ ಕೇಂದ್ರ ವಿಫಲವಾಗಿದೆ ಹೆಚ್ಚಿನ ಯೋಜನೆಗಳು ನಮ್ಮವು ಫೋಟೋ ಅವರದ್ದು, ಕೆಲಸ, ದುಡ್ಡು, ಶ್ರಮ, ಬೆವರು ನಮ್ಮದು ಪ್ರಚಾರ ಮಾತ್ರ ಅವರದ್ದು ಎಂದು ಕೇಂದ್ರ ಸರ್ಕಾರದ ವಿರುದ್ಧ ಹಾರಿಹಾಯ್ದರು.

ಸ್ಥಳೀಯ ನಾಯಕರಿಂದ ಬಿಜೆಪಿ ಹಾಳು: 

ವಿಜಯೇಂದ್ರ ಸ್ಥಳೀಯ ನಾಯಕರನ್ನು ನಂಬಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ. ಅದನ್ನು ನಾನು ಅವರಿಗೆ ನೇರವಾಗಿ ಹೇಳಿದ್ದೇನೆ. ಇಲ್ಲಿನ ಒಬ್ಬ ವ್ಯಕ್ತಿಯನ್ನು ನಂಬಿ ಅವರು ಬಂದಿದ್ದರು. ಈಗ ಅವನು ಎಲ್ಲಿದ್ದಾನೋ ಗೊತ್ತಿಲ್ಲ. ಹೆಣದ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಬೀದರ್ ನಲ್ಲಿ ಯುವಕನೋರ್ವನ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಿದ್ದರು. ಮಂಗಳೂರು ಹಾಗೂ ಕರಾವಳಿ ಭಾಗವನ್ನು ಪ್ರಯೋಗ ಶಾಲೆ ಮಾಡಿದಂತೆ ನಮ್ಮ ಭಾಗದಲ್ಲಿ ಮಾಡಲು ಸಾಧ್ಯವಿಲ್ಲ.ಇದು ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಬಿಜೆಪಿಯವರ ಯಾವ ಪ್ರಯೋಗ ನಡೆಯುವುದಿಲ್ಲ. ವಾಡಿಯಲ್ಲಿ ನಡೆದ ಒಂದು ವಾಟ್ಸಪ್ ಸ್ಟೇಟಸ್‌ ಹಾಕಿದ್ದಕ್ಕೆ ಜಗಳವಾದರೆ ವಿರೋಧಪಕ್ಷದ ನಾಯಕರು ಬರುತ್ತಾರೆ ಎಂದರೆ ಅವರ ಭೌದ್ದಿಕ ದಿವಾಳಿತನ ತೋರಿಸುತ್ತದೆ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಹಾಳಾಗಲು ರವಿಕುಮಾ‌ರ್ ಕಾರಣ. ಅವರ ಕಂಪನಿಗೆ ಸಂವಿಧಾನದಲ್ಲಿ ನಂಬಿಕೆಯ ಇಲ್ಲ ಮನುಸ್ಮೃತಿಯ ಮೇಲೆ ನಂಬಿಕೆ ಇದೆ ಎಂದು ತಿವಿದರು.

ಅಫಜಲಪುರ ಶಾಸಕ ಎಂ.ವೈ.ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿದರು. ಸಂಸಧ ರಾಧಾಕೃಷ್ಣ ದೊಡ್ಡಮನಿ, ಎಂಎಲ್ಸಿ ಜಗದೇವ ಗುತ್ತೇದಾರ, ಎಸ್.ಪಿ ಅಡ್ಡೂರು ಶ್ರೀನಿವಾಸಲು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್, ತಹಸೀಲ್ದಾರ್ ನಾಗಯ್ಯ ಹಿರೇಮಠ, ಉಣ್ಣಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ಹೇರೂರು, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಸತ್ಯಬ್ರತ್ ಶರ್ಮಾ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ನಾಗರೆಡ್ಡಿ ಪಾಟೀಲ ಕರದಾಳ, ಶ್ರೀನಿವಾಸ ಸಗರ, ಅಜೀಜ್ ಸೇಟ್, ಶಿವರುದ್ರಪ್ಪ ಭೀಣ್ಣಿ, ಜಗಣ್ಣಗೌಡ ರಾಮತೀರ್ಥ, ಜಯಪ್ರಕಾಶ್ ಕಮಕನೂರ, ಸಿದ್ದುಗೌಡ ಅಫಜಲಪುರ, ಬಸವರಾಜ ಬಳೂಂಡಗಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ್ ಪಟೇಲ್, ಶೀಲಾ ಕಾಶಿ, ಮಹಿಮೂದ್ ಸಾಹೇಬ್, ಟೋಪಣ್ಣ ಕೊಮಟೆ, ವೀರಣ್ಣಗೌಡ ಪರಸರೆಡ್ಡಿ, ಸುನೀಲ್ ದೊಡ್ಡಮನಿ, ಮನ್ಸೂರ್ ಪಟೇಲ್, ನಾಗಯ್ಯ ಗುತ್ತೇದಾರ, ಶರಣಪ್ಪ ನಾಟೀಕಾರ, ಮಲ್ಲಪ್ಪ ಹೊಸಮನಿ, ಜಫಾರುಲ್ ಹಸನ್, ದೇವು ಯಾಬಾಳ, ಸಂಜಯ ಬುಳಕರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸೇಡಂ ಎಸಿ ಪ್ರಭು ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಶಂಕರ ಕಣ್ಣಿ ಸ್ವಾಗತಿಸಿದರು, ಸಂತೋಷ ಶಿರನಾಳ ನಿರೂಪಿಸಿದರು.

ಕರ್ನಾಟಕ ರಾಜ್ಯದ ಪ್ರಭಾವಿ ಸಚಿವರಾಗಿ ಹೊರಹೊಮ್ಮಿದ್ದ ಪ್ರಿಯಾಂಕ್ ಖರ್ಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಆಗುವುದು ಶತಸಿದ್ಧ”.-ತಿಪ್ಪಣ್ಣಪ್ಪ ಕಮಕನೂರ ಎಂಎಲ್ಸಿ.

“ಹಿಡಿದ ಕೆಲಸವನ್ನು ಹಾಗೂ ಗುರಿ ಸಾಧಿಸುವುತನಕ ಬಿಡದ ದಿಟ್ಟತನ ಹೊಂದಿರುವ ಪ್ರಿಯಾಂಕ್ ಖರ್ಗೆ ಪ್ರಭಾವಿ ಮಂತ್ರಿಯಾಗಿದ್ದು ಅವರನ್ನು ಪಡೆದ ಚಿತ್ತಾಪುರ ಜನರೇ ಪುಣ್ಯವಂತರು”.-ಬಾಬುರಾವ್ ಚಿಂಚನಸೂರ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರು.

Spread the love

Leave a Reply

Your email address will not be published. Required fields are marked *

error: Content is protected !!