Oplus_131072

ಸುಟ್ಟ ಟಿಸಿ ಬದಲಾವಣೆಗೆ ವಿಳಂಬ, ಕತ್ತಲೆಯಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿ |  ಜೆಸ್ಕಾಂ ವಿರುದ್ಧ ನಿವಾಸಿಗಳು ಆಕ್ರೋಶ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಯರಗರ್ ರಸ್ತೆಯಲ್ಲಿ ಇರುವ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಿದ್ಯುತ್ ಪರಿವರ್ತಕ (ಟಿಸಿ) ಸುಟ್ಟು ನಾಲ್ಕೈದು ದಿನಗಳಾದರೂ ಇಲ್ಲಿವರೆಗೆ ದುರಸ್ತಿ ಮಾಡದೇ ಅಥವಾ ಹೊಸ ಟಿಸಿ ಅಳವಡಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ ಜೆಸ್ಕಾಂ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೂನ್ 30 ರಂದು ಟಿಸಿ ಸುಟ್ಟು ಹೋಗಿದೆ, ಈ ಕುರಿತು ಜೆಸ್ಕಾಂ ಕಚೇರಿಗೆ ದೂರು ನೀಡಲಾಗಿದೆ ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಹಾಗೂ 1912ಗೆ ಕರೆ ಮಾಡಿ ದೂರ ದಾಖಲಿಸಿದ್ದರೂ ಸಹ ಇಲ್ಲಿವರೆಗೆ ಯಾರೊಬ್ಬರೂ ಸ್ಪಂದಿಸಿಲ್ಲ ಅಲ್ಲದೇ ನಿತ್ಯ ಜೆಸ್ಕಾಂ ಕಚೇರಿಗೆ ಅಲೆದಾಡಿದರೂ ಸಹ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ನಿವಾಸಿ ರಾಮಣ್ಣ ಡೋಣಗಾಂವ ಆರೋಪಿಸಿದ್ದಾರೆ.

ಟಿಸಿಗಳು ಸುಟ್ಟು ದೂರು ದಾಖಲಿಸಿ 24 ಗಂಟೆಯೊಳಗೆ ಬದಲಾವಣೆ ಮಾಡಿ, ಬೇರೊಂದು ಟಿಸಿ ಹಾಕಬೇಕು ಎಂಬ ನಿಯಮವಿದೆ. ವಾಸ್ತವದಲ್ಲಿ ಈ ನಿಯಮ ಜಾರಿಗೆ ಬರುತ್ತಿಲ್ಲ. ಕಾಲೋನಿಯ ನಿವಾಸಿಗಳು ದೂರು ಕೊಟ್ಟು ನಾಲ್ಕೈದು ದಿನಗಳು ಕಳೆದಿವೆ. ಸ್ಥಳೀಯ ಅಧಿಕಾರಿಗಳು ನಾಳೆ ಬರುತ್ತದೆ, ನಾಡಿದ್ದು ಬರುತ್ತದೆ ನಮ್ಮಲ್ಲಿ ಸಿಬ್ಬಂದಿ ಹಾಗೂ ಟಿಸಿಗಳ ಕೊರತೆಯಿದೆ ಎಂದು ನೆಪ ಹೇಳಿ ದಿನಗಳನ್ನು ದೂಡುತ್ತಿದ್ದಾರೆ ಎನ್ನುತ್ತಾರೆ ಹೌಸಿಂಗ್ ಬೋರ್ಡ್ ನಿವಾಸಿಗಳು.

ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿಗಳ ಹಿತದೃಷ್ಟಿಯಿಂದ ಕೂಡಲೇ ಹೊಸ ಟಿಸಿ ಅಳವಡಿಸಿ ಬೆಳಕಿನ ಭಾಗ್ಯ ಒದಗಿಸುವ ಕಡೆ ಜೆಸ್ಕಾಂ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

“ಟಿಸಿ ಸುಟ್ಟಿದ್ದರಿಂದ ನಾಲ್ಕೈದು ದಿನಗಳಿಂದ ಕಾಲೋನಿಯ ನಿವಾಸಿಗಳು ಕತ್ತಲೆಯಲ್ಲಿಯೇ ಜೀವನ ಕಳೆಯಬೇಕಾಗಿದೆ ಈ ಕುರಿತು ಜೆಸ್ಕಾಂ ಅಧಿಕಾರಿಗಳ‌ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ”.-ರಾಮಣ್ಣ ಡೋಣಗಾಂವ ಕಾಲೋನಿ ನಿವಾಸಿ.

Spread the love

Leave a Reply

Your email address will not be published. Required fields are marked *

error: Content is protected !!