Oplus_131072

ನಾಗಾವಿ ಎಕ್ಸಪ್ರೆಸ್ ಫಲಶೃತಿ | ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಹೊಸ ಟಿಸಿ ಅಳವಡಿಕೆ, ನಿವಾಸಿಗಳು ಸಂತಸ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಯರಗರ್ ರಸ್ತೆಯಲ್ಲಿ ಇರುವ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಿದ್ಯುತ್ ಪರಿವರ್ತಕ (ಟಿಸಿ) ಸುಟ್ಟು ನಾಲ್ಕೈದು ದಿನಗಳಾದರೂ ಇಲ್ಲಿವರೆಗೆ ದುರಸ್ತಿ ಮಾಡದೇ ಅಥವಾ ಹೊಸ ಟಿಸಿ ಅಳವಡಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ ಜೆಸ್ಕಾಂ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಶುಕ್ರವಾರ ಜೆಸ್ಕಾಂ ಅಧಿಕಾರಿಗಳು ಹೊಸ ಟಿಸಿ ಅಳವಡಿಸಿ ಕೊನೆಗೂ ಬೆಳಕಿನ ಭಾಗ್ಯ ಒದಗಿಸಿದ್ದಾರೆ.

ಈ ಸಮಸ್ಯೆ ಕುರಿತು ನಾಗಾವಿ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಗುರುವಾರ ಬಿತ್ತರವಾದ “ಸುಟ್ಟ ಟಿಸಿ ಬದಲಾವಣೆಗೆ ವಿಳಂಬ, ಕತ್ತಲೆಯಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿ, ಜೆಸ್ಕಾಂ ವಿರುದ್ಧ ನಿವಾಸಿಗಳು ಆಕ್ರೋಶ” ಸುದ್ದಿಗೆ ಸ್ಪಂದಿಸಿದ ಜೆಸ್ಕಾಂ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಹೊಸ ಟಿಸಿ ಅಳವಡಿಸಿದ್ದಾರೆ ಇದರಿಂದ ಕಾಲೋನಿ ನಿವಾಸಿಗಳು ಸಂತಸ ವ್ಯಕ್ತಪಡಿಸಿ ಪತ್ರಿಕೆಗೆ ಹಾಗೂ ಜೆಸ್ಕಾಂ ಅಧಿಕಾರಿಗಳಿಗೆ ಕೃತಜ್ಞತೆಗಳು ಸಲ್ಲಿಸಿದ್ದಾರೆ.

ಜೂನ್ 30 ರಂದು ಟಿಸಿ ಸುಟ್ಟು ಹೋಗಿದೆ, ಈ ಕುರಿತು ಜೆಸ್ಕಾಂ ಕಚೇರಿಗೆ ದೂರು ನೀಡಲಾಗಿದೆ ಮತ್ತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಹಾಗೂ 1912ಗೆ ಕರೆ ಮಾಡಿ ದೂರ ದಾಖಲಿಸಿದ್ದರೂ ಸಹ ಇಲ್ಲಿವರೆಗೆ ಯಾರೊಬ್ಬರೂ ಸ್ಪಂದಿಸಿಲ್ಲ ಅಲ್ಲದೇ ನಿತ್ಯ ಜೆಸ್ಕಾಂ ಕಚೇರಿಗೆ ಅಲೆದಾಡಿದರೂ ಸಹ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.

ಟಿಸಿ ಸುಟ್ಟಿದ್ದರಿಂದ ನಾಲ್ಕೈದು ದಿನಗಳಿಂದ ಕಾಲೋನಿಯ ನಿವಾಸಿಗಳು ಕತ್ತಲೆಯಲ್ಲಿಯೇ ಜೀವನ ಕಳೆದಿದ್ದೇವೆ ಇಂದು ಬೆಳಗ್ಗೆ ಜೆಸ್ಕಾಂ ಅಧಿಕಾರಿಗಳು ಗಮನ ಹರಿಸಿ ಹೊಸ ಟಿಸಿ ಅಳವಡಿಸಿ ಬೆಳಕಿನ ಭಾಗ್ಯ ಒದಗಿಸಿದ್ದಾರೆ ಅವರಿಗೆ ಕೃತಜ್ಞತೆಗಳು”.-ರಾಮಣ್ಣ ಡೋಣಗಾಂವ ಕಾಲೋನಿ ನಿವಾಸಿ.

Spread the love

Leave a Reply

Your email address will not be published. Required fields are marked *

error: Content is protected !!