ಚಿತ್ತಾಪುರ ವೀರಶೈವ ಸಮಾಜದ ಹೆಸರು ಹೇಳಿ ಅಧಿಕಾರ ದುರುಪಯೋಗ | ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಗೆ ಅನುದಾನ ಬಿಡುಗಡೆ ಮಾಡದಂತೆ ತಡೆಹಿಡಿಯುವಂತೆ ಒತ್ತಾಯಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ (ರಿ) ಚಿತ್ತಾಪುರನ ಮೇಲೆ ಅನುದಾನ ಬಿಡುಗಡೆ ಮಾಡದಂತೆ ತಡೆಹಿಡಿಯಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ ನಾಲವಾರ, ಪ್ರಧಾನ ಕಾರ್ಯದರ್ಶಿ ಆನಂದ ಪಾಟೀಲ್ ನರಬೋಳ ನೇತೃತ್ವದಲ್ಲಿ ಮುಖಂಡರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನ ಸರ್ಕಾರಿ ವಸತಿ ಗೃಹದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಚಿತ್ತಾಪುರ ಪಟ್ಟಣದಲ್ಲಿ ತಾಲೂಕು ವೀರಶೈವ ಸಮಾಜ ಟ್ರಸ್ಟ್ (ರಿ) ನೊಂದಾಯಿತ ಟ್ರಸ್ಟ್ ಆಗಿದ್ದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಇದ್ದು ಕೆಲ ಪಟ್ಟಭದ್ರ ಗುಂಪು ಚಿತ್ತಾಪುರ ವೀರಶೈವ ಸಮಾಜದ ಹೆಸರು ಹೇಳಿಕೊಂಡು ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ (ರಿ) ಚಿತ್ತಾಪುರ ಅನ್ನು ನೋಂದಣಿ ಮಾಡಿ ವೀರಶೈವ ಸಮಾಜದ ಹೆಸರಿನ ಮೇಲೆ ಕೆಲವರಿಂದ ಹಣವನ್ನು ಸಂಗ್ರಹ ಮಾಡಿ 2 ಎಕರೆ ಭೂಮಿಯನ್ನು ಖರೀದಿಸಿ ಸರ್ಕಾರದ ಅನುದಾನವನ್ನು ವೀರಶೈವ ಸಮಾಜದ ಹೆಸರಿನ ಮೇಲೆ ಪಡೆಯಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಿದರು.
ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ (ರಿ) ಚಿತ್ತಾಪುರನ ಯಾವುದೇ ಒಬ್ಬ ಸದಸ್ಯರು ಕೂಡ ಸಮಾಜದ ಸಭೆಯಲ್ಲಿ ಈ ಟ್ರಸ್ಟ ನೊಂದಣಿ ಕುರಿತು ಚರ್ಚೆ ಮಾಡಿರುವುದಿಲ್ಲಾ. ಚಿತ್ತಾಪುರ ವೀರಶೈವ ಸಮಾಜಕ್ಕೂ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಚಿತ್ತಾಪುರಕ್ಕೂ ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ (ರಿ) ಚಿತ್ತಾಪುರ ಸಂಬಂಧವಿರುವುದಿಲ್ಲಾ. ಹಾಗಾಗಿ ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ (ರಿ) ಚಿತ್ತಾಪುರ ಸರಕಾರದ ಯಾವುದೇ ರೀತಿಯ ಅನುದಾನ ನೀಡಿದ್ದಲ್ಲಿ ಆ ಅನುದಾನ ಚಿತ್ತಾಪುರ ವೀರಶೈವ ಸಮಾಜಕ್ಕೂ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಶಿವರಾವ್ ಪಾಟೀಲ ಬೆಳಗುಂಪಾ, ಶಿವಲಿಂಗಪ್ಪ ವಾಡೆದ್, ಚಂದ್ರಶೇಖರ ಅವಂಟಿ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಸೋಮಶೇಖರ ಪಾಟೀಲ ಬೆಳಗುಂಪಾ, ಜಗಣ್ಣಗೌಡ ರಾಮತೀರ್ಥ, ಮಲ್ಲಿನಾಥ ಇಂದೂರ, ಶಾಂತಣ್ಣ ಚಾಳೀಕಾರ, ನಾಗರೆಡ್ಡಿ ಗೋಪಸೇನ್, ಬಸವರಾಜ ಪಾಟೀಲ ಬೆಳಗುಂಪಾ, ಓಂಕಾರ್ ರೇಷ್ಮಿ, ಮಹಾಂತಗೌಡ ಪಾಟೀಲ, ಸಿದ್ದಣ್ಣಗೌಡ ಮಾಲಿ ಪಾಟೀಲ್, ಸಿದ್ದಣ್ಣಗೌಡ ಆರ್.ಡಿ, ಅಣ್ಣಾರಾವ ಬಾಳಿ, ರಾಜಶೇಖರ್ ತಿಮ್ಮನಾಯಕ, ರಾಮರೆಡ್ಡಿ ಪಾಟೀಲ, ಮಲ್ಲು ಇಂದೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಚಿತ್ತಾಪುರ ವೀರಶೈವ ಸಮಾಜದ ಹೆಸರು ಹೇಳಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕೆಲ ಪಟ್ಟಭದ್ರ ಗುಂಪು ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಗೆ ಸರ್ಕಾರದ ಅನುದಾನ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಇದಕ್ಕೆ ಅವಕಾಶ ನೀಡಬಾರದು”.-ಲಿಂಗಾರೆಡ್ಡಿ ಭಾಸರೆಡ್ಡಿ ನಾಲವಾರ ತಾಲೂಕು ಗೌರವಾಧ್ಯಕ್ಷರು.

