Oplus_131072

ನಾಲವಾರದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ನಾಲವಾರ ವಲಯದ ಕಾರ್ಯಕ್ಷೇತ್ರದ ಜೈ ಗಣೇಶ ಜ್ಞಾನವಿಕಾಸ ಕೇಂದ್ರದಲ್ಲಿ ಮಂಗಳವಾರ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು. ಈ ಶಿಬಿರದಲ್ಲಿ ಬಿಪಿ ಮತ್ತು ಕಣ್ಣಿನ ತಪಾಸಣೆ ನಡೆಯಿತು.

ಈ ವೇಳೆ ವಿ.ಎಸ್.ಎಸ್.ಎನ್ ನಿರ್ದೇಶಕ ಭೀಮಾಶಂಕರ. ಜಿ. ಸುಣಗಾರ ಮಾತನಾಡಿ, ಧರ್ಮಸ್ಥಳ ಯೋಜನೆಯು ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಇನ್ನು ಮುಂದೆಯು ಇದೇ ರೀತಿ ಒಳ್ಳೆಯ ಸಮಾಜ ಸೇವೆ ಕೆಲಸ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅರ್ಚನಾ ಪ್ರಾಸ್ತಾವಿಕ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಮಾಡುತ್ತಿರುವ ಕಾರ್ಯಕ್ರಮಗಳು ಜನಮಂಗಳ. ಜ್ಞಾನ ದೀಪಾ ಶಿಕ್ಷಕರ, ಕೃಷಿ ಕಾರ್ಯಕ್ರಮ, ಮಾಶಾಸನ, ಮದ್ಯ ವರ್ಜನ ಶಿಬಿರ, ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಮಾಜ ಸೇವಕ ಚಂದ್ರಕಾಂತ ವಿಶ್ವಕರ್ಮ, ಕಾಳೀಕಾದೇವಿ ಟ್ರಸ್ಟ್ ಅಧ್ಯಕ್ಷ ಶ್ರೀಧರ ವಿಶ್ವಕರ್ಮ, ಕಾರ್ಯದರ್ಶಿ ಅನೀಲ ವಿಶ್ವಕರ್ಮ ಮುಖ್ಯ ಅತಿಥಿಗಳಾಗಿದ್ದರು. ಮೀನಾಕ್ಷಿ ಹೋಸ್ಪಿಟಲ್ ವೈದ್ಯ ಡಾ ಶರಣುಗೌಡ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭೆಯಲ್ಲಿ ಆರೋಗ್ಯ ತಪಾಸಣಾ ತಂಡದವರು, ಶೌರ್ಯ ತಂಡದ ನಾಯಕ ಮಹೇಶ್ ಮಲಬಾ ಹಾಗೂ ತಂಡದವರು, ಸ್ಥಳೀಯ ಸೇವಾ ಪ್ರತಿನಿಧಿ ರಾಜೇಶ್ವರಿ, ನವಜೀವನ ಸದಸ್ಯರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಅರ್ಚನಾ ನಿರೂಪಿಸಿದರು, ಕೇಂದ್ರ ಸದಸ್ಯೆ ಈರಮ್ಮ ಪ್ರಾರ್ಥನೆ ಗೀತೆ ಹಾಡಿದರು, ವಲಯ ಮೇಲ್ವಿಚಾರಕ ಶಿವಕುಮಾರ ಸ್ವಾಗತಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!