ಬಿಜೆಪಿ ಕಾರ್ಯಕಾರಿಣಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಬೂತ್ ಅಧ್ಯಕ್ಷರುಗಳಿಗೆ ಸನ್ಮಾನ | ಕೆಲವೇ ದಿನಗಳಲ್ಲಿ ಚಿತ್ತಾಪುರ ಕ್ಷೇತ್ರಕ್ಕೆ ಸೂಕ್ತ ನಾಯಕನಿಗೆ ಜವಾಬ್ದಾರಿ: ಮತ್ತಿಮುಡ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವ ವಹಿಸುವ ನಾಯಕರು ಇಲ್ಲ ಎಂಬುವ ಕೊರಗನ್ನು ಕೆಲವೇ ದಿನಗಳಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದೂರ ಮಾಡಲಿದ್ದಾರೆ. ಬರುವ ಕೆಲವೇ ದಿನಗಳಲ್ಲಿ ಕ್ಷೇತ್ರಕ್ಕೆ ಹಾಗೂ ಪಕ್ಷಕ್ಕೆ ಹಗಲಿರುಳು ಸಮಯ ನೀಡುವ ಸೂಕ್ತ ನಾಯಕನನ್ನು ಗುರುತಿಸಿ ಜವಾಬ್ದಾರಿ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಹೇಳಿದರು.
ಪಟ್ಟಣದ ಬಾಪುರಾವ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕಾರಿಣಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಬೂತ್ ಅಧ್ಯಕ್ಷರುಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಚಿತ್ತಾಪುರ ಕ್ಷೇತ್ರದಲ್ಲಿ ಹಗಲಿರುಳು ದುಡಿಯುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ. ಬಿಜೆಪಿ ಅಭ್ಯರ್ಥಿ ಯಾರೇ ಇರಲಿ 70 ಸಾವಿರ ಮತದಾರರು ಮಾತ್ರ ಬಿಜೆಪಿ ಪರ ಗಟ್ಟಿಯಾಗಿ ಇದ್ದಾರೆ ಎಂದು ಹೇಳಿದರು.
ಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನಲೆ ಪಕ್ಷದ ನೂತನ ಪದಾಧಿಕಾರಿಗಳು ಹಾಗೂ ಬೂತ್ ಅಧ್ಯಕ್ಷರುಗಳು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಸದೃಢರಾಗಿ ಎಂದು ಕಿವಿಮಾತು ಹೇಳಿದರು.
ಮಾಜಿ ಎಂಎಲ್ಸಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಿ ಮಾತನಾಡಿ, ಭಾರತೀಯ ಜನತಾ ಪಕ್ಷದ ಸಂಘಟನೆಗೆ ಕಾರ್ಯಕರ್ತರೇ ಪ್ರಮುಖ ಅಡಿಪಾಯ ಹೀಗಾಗಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸುವ ನಿಟ್ಟಿನಲ್ಲಿ ಅವರು ಮಾಡಿದ ಸಾಧನೆಗಳನ್ನು ಮನೆ ಮನೆಗೂ ತಿಳಿಯಪಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಸಂಘಟನೆಯ ಮೂಲಕ ಬಿಜೆಪಿ ಬೆಳೆದು ಬಂದಿದೆ ಇಂದು ದೇಶದ ಚುಕ್ಕಾಣಿ ಹಿಡಿದಿದೆ. ಪಕ್ಷದ ಜವಾಬ್ದಾರಿ ವಹಿಸಿಕೊಂಡ ನೂತನ ಪದಾಧಿಕಾರಿಗಳು ಪಕ್ಷದ ಸಂಘಟನೆಯಲ್ಲಿ ನಿರತರಾಗಿ ಮತ್ತೇ ರಾಜ್ಯದಲ್ಲಿ ಹಾಗೂ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಅವರು ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮುಖಂಡರಾದ ಲಿಂಗರಾಜ್ ಬಿರಾದಾರ, ಲಿಂಗಾರೆಡ್ಡಿ ಭಾಸರೆಡ್ಡಿ, ವಿಠಲ್ ನಾಯಕ, ಶಶಿಕಲಾ ತೆಂಗಳಿ, ಚಂದ್ರಶೇಖರ ಅವಂಟಿ, ಬಸವರಾಜ ಬೆಣ್ಣೂರಕರ್, ಸೋಮಶೇಖರ ಪಾಟೀಲ ಬೆಳಗುಂಪಾ, ಶಿವಲಿಂಗಪ್ಪ ವಾಡೆದ್, ಶಂಕರ ಚವ್ಹಾಣ, ಶರಣಗೌಡ ಭೀಮನಳ್ಳಿ, ನೀಲಕಂಠ ಪಾಟೀಲ, ನಾಗರಾಜ್ ಭಂಕಲಗಿ, ಶರಣು ಜ್ಯೋತಿ, ಗೋಪಾಲ ರಾಠೋಡ, ಅಯ್ಯಪ್ಪ ರಾಮತೀರ್ಥ, ಅಣ್ಣಾರಾವ್ ಪಾಟೀಲ, ಆನಂದ ಪಾಟೀಲ ನರಿಬೋಳ, ವೀರಣ್ಣ ಯಾರಿ, ಗುಂಡು ಮತ್ತಿಮುಡ್, ಶರಣಪ್ಪ ಸಣ್ಣಮೋ, ಬಸವರಾಜ ಭೀಮನಳ್ಳಿ, ದೇವರಾಜ್ ಬೆಣ್ಣೂರ, ನಾಗುಬಾಯಿ ಜಿತುರೆ, ರಾಮರೆಡ್ಡಿ ಕೊಳ್ಳಿ, ಪೋಮು ಚವ್ಹಾಣ, ಮಹೇಂದ್ರ ಕೋರಿ, ಬಾಲಾಜಿ ಬುರಬುರೆ, ಮಲ್ಲಿನಾಥ ಇಂದೂರ, ದೇವಿದಾಸ ಕುಲಕರ್ಣಿ, ಮಲ್ಲಿಕಾರ್ಜುನ ಮಾಲಗತ್ತಿ, ಶಾಂತಕುಮಾರ್ ಮಳಖೇಡ ಅಶೋಕ ನಿಪ್ಪಾಣಿ, ಅಶ್ವಥ್ ರಾಠೋಡ, ಸುರೇಶ್ ಬೆನಕನಳ್ಳಿ, ಹೀರು ರಾಠೋಡ, ಸಾಬಣ್ಣ ಜಾಲಗಾರ, ಅಕ್ಕಮಹಾದೇವಿ, ಶಿವರಾಮ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಒಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ ನಿರೂಪಿಸಿದರು.

