Oplus_0

ಡೋಣಗಾಂವ ಗ್ರಾಪಂ ಪಂಪ್ ಆಪರೇಟರ್ ಮಾರ್ಥಂಡಪ್ಪ ಹಾವು ಕಡಿತದಿಂದ ನಿಧನ, ಸರ್ಕಾರದ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ: ತಾಪಂ ಇಒ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮ ಪಂಚಾಯತ್ ಪಂಪ್ ಆಪರೇಟರ್ ಮಾರ್ಥಂಡಪ್ಪ ವಿಶ್ವಕರ್ಮ ರಾಜೋಳ್ಳಾ (44) ಹಾವು ಕಡಿತದಿಂದ ಶುಕ್ರವಾರ ಮೃತಪಟ್ಟಿದ್ದು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃತ ದೇಹ ತಂದಾಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಸಹಾಯಕ ನಿರ್ದೇಶಕ ಪಂಡಿತ್ ಶಿಂಧೆ ಸೇರಿದಂತೆ ಡೋಣಗಾಂವ ಮತ್ತು ರಾಜೋಳ್ಳಾ ಗ್ರಾಮದ ಮುಖಂಡರು ಭೇಟಿ ನೀಡಿದರು.

ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ ಮಾತನಾಡಿ, ಡೋಣಗಾಂವ ಗ್ರಾಮ ಪಂಚಾಯತ್ ಪಂಪ್ ಆಪರೇಟರ್ ಮಾರ್ಥಂಡ ವಿಶ್ವಕರ್ಮ ಹಾವು ಕಡಿತದಿಂದ ಮೃತಪಟ್ಟಿದ್ದಾನೆ. ಸರ್ಕಾರದ ವತಿಯಿಂದ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಸಿಗುವ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಿಗಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಮೃತ ಮಾರ್ಥಂಡಪ್ಪ ವಿಶ್ವಕರ್ಮ ಪತ್ನಿ ಕಾಳಮ್ಮ ಮಾತನಾಡಿ, ನಮ್ಮ ಕುಟುಂಬಕ್ಕೆ ನಮ್ಮವರು ಆಧಾರಸ್ತಂಭ ಆಗಿದ್ದರು.‌ ತೀರಾ ಬಡತನದಲ್ಲಿ ನಮ್ಮ ಜೀವನ ನಡೆಯುತ್ತಿದೆ ಯಾವುದೇ ಸಂಪನ್ಮೂಲ ಇಲ್ಲ ಹೀಗಾಗಿ ನಮ್ಮ ಕುಟುಂಬ ನಿರ್ವಹಣೆಗೆ ಸರ್ಕಾರದ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿದ್ರಾಮ ರೆಡ್ಡಿ ಪಾಟೀಲ, ಮಲ್ಲಿಕಾರ್ಜುನ ರಾಜೋಳ್ಳಾ, ಶರಣಪ್ಪ ಹೊನ್ನಪೂರ, ಮಂಜುನಾಥ ಚೂರಿ, ಶಂಕರ್ ಕ್ಯಾಲಬಾ, ಭೀಮು ಸಾಲಿ, ಸುರೇಶ್ ಕುಲಕರ್ಣಿ, ಬಸು ಪರ್ಮಾ, ಶರಣಪ್ಪ ಪೂಜಾರಿ, ರಾಮು ಸಾಲಿ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!