Oplus_0

ಚಿತ್ತಾಪುರದಲ್ಲಿ ನಾಳೆ ಭಾಷಣ ಮತ್ತು ಬರವಣಿಗೆ ಕೌಶಲ್ಯ ಕಾರ್ಯಾಗಾರ: ಕೆ.ಎಂ.ವಿಶ್ವನಾಥ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ನಾಗಾವಿ ಶಿಕ್ಷಣ ಸಂಸ್ಥೆಯ ಎನ್.ಇ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಸಿಂಹವಾಣಿ ಕರ್ನಾಟಕ ತಂಡದಿಂದ ಭಾಷಣ ಮತ್ತು ಬರವಣಿಗೆ ಕೌಶಲ್ಯ ಕಾರ್ಯಾಗಾರವನ್ನು ನ.15 ರಂದು ಬೆಳಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ತಜ್ಞ ಹಾಗೂ ಬರಹಗಾರ ಕೆ.ಎಂ.ವಿಶ್ವನಾಥ ಮರತೂರ ತಿಳಿಸಿದ್ದಾರೆ.

ಪ್ರಸ್ತುತ ಪದವಿ ಪೂರ್ವ ಓದುತ್ತಿರುವ ಮಕ್ಕಳಲ್ಲಿ ಒತ್ತಡ ನಿವಾರಣೆ, ಬದುಕಿನ ಕನಸುಗಳನ್ನು ಕಟ್ಟಿಕೊಡುವುದು ಅತ್ಯಂತ ಪ್ರಮುಖವಾಗಿದೆ. ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ತಯಾರಿ ಮಾಡಿಕೊಳ್ಳಲು ಇದು ಅತ್ಯಂತ ಸೂಕ್ತವಾದ ಕಾಲವಾಗಿದೆ. ವಿದ್ಯಾರ್ಥಿಗಳನ್ನು ಅವರ ಬದುಕಿನ ಕನಸುಗಳನ್ನು ಪ್ರೋತ್ಸಾಹಿಸುವುದು ಅವಶ್ಯಕ ಈ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸಿಂಹವಾಣಿ ಕರ್ನಾಟಕ ತಂಡದ ಶಿಕ್ಷಣ ತಜ್ಞ ಹಾಗೂ ಬರಹಗಾರ ಕೆ.ಎಂ.ವಿಶ್ವನಾಥ ಮರತೂರ, ವಾಗ್ಮಿ ತರಬೇತುದಾರರಾದ ಸಲೀಂ ಭಾಷಾ ಆಗಮಿಸಲಿದ್ದಾರೆ. ಉದ್ಘಾಟನೆಯನ್ನು ಪ್ರಾಚಾರ್ಯ ವೀರಾರಡ್ಡಿ ಶೇರಿ ನೆರವೇರಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!