Oplus_0

ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಚಿತ್ತಾಪುರ ಪಟ್ಟಣಕ್ಕೆ ಬರದಂತೆ ನಿರ್ಭಂದಿಸಿ ತಹಸೀಲ್ದಾರ್ ಆದೇಶ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನವೆಂಬರ್ 16 ರಂದು ಬೆಳಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಣಿಕಂಠ ರಾಠೋಡ ಇವರು ಚಿತ್ತಾಪುರ ಪಟ್ಟಣಕ್ಕೆ ಪ್ರವೇಶ ಮಾಡದಂತೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 152, 162, 163 ರಸ್ತೆಯ ನಿರ್ಬಂಧನೆ ಜಾರಿಗೊಳಿಸಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಆದೇಶಿಸಿದ್ದಾರೆ.

ಆರಕ್ಷಕ ಉಪನಿರೀಕ್ಷಕರ ವರದಿ ಆಧಾರದ ಮೇಲೆ, ಪಟ್ಟಣದಲ್ಲಿ ನವೆಂಬರ್ 16  ರಂದು ನಡೆಯುವ ಆರ್.ಎಸ್.ಎಸ್ ಸಂಘಟನೆಯ ಪಥಸಂಚಲನಾ ಕಾರ್ಯಕ್ರಮಕ್ಕೆ ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಪಕ್ಷದ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಇವರು ಬರುವುದಾಗಿ ತಿಳಿದು ಬಂದಿರುತ್ತದೆ. ಸದರಿಯವರು ಈ ಕ್ಷೇತ್ರದ ಶಾಸಕರು ಹಾಗೂ ಮಂತ್ರಿ ಪ್ರಿಯಾಂಕ್ ಖರ್ಗೆ ರವರ ವಿರುದ್ಧ ಯಾವಾಗಲೂ ಪ್ರಚೋದನಾಕಾರಿ ಮಾತುಗಳು ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಮತ್ತು ಇತ್ತೀಚೆಗೆ ಅವರಿಗೆ ಜೀವ ಬೆದರಿಕೆ ಹಾಕಿದ್ದರಿಂದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಮಣಿಕಂಠ ರಾಠೋಡ ರವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇರುತ್ತದೆ. ಇದಲ್ಲದೇ ಹಾಗೂ ಮಂತ್ರಿ  ಪ್ರಿಯಾಂಕ್ ಖರ್ಗೆ ರವರಿಗೆ ತಾಲೂಕಿನಾದ್ಯಂತ ಬಹಳಷ್ಟು ಅಭಿಮಾನಿ ಹಾಗು ಹಿತೈಷಿಗಳಿದ್ದು ಒಂದು ವೇಳೆ ಮಣಿಕಂಠ ರಾಠೋಡ ರವರು ಚಿತ್ತಾಪುರ ಪಟ್ಟಣಕ್ಕೆ ಬಂದಿದ್ದೆ ಆದಲ್ಲಿ ಅವರ ವಿರುದ್ಧವಾಗಿ ಗಲಾಟೆಗಳಾಗುವ ಸಾಧ್ಯತೆಗಳು ಇರುತ್ತವೆ.

ಸದರಿ ಮಣಿಕಂಠ ರಾಠೋಡ ರವರು ಪ್ರಚೋದನಾಕಾರಿ ಭಾಷಣಗಳು ಮಾಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ. ಈ ಹಿಂದೆ ಅವರು ಹಲವು ಪ್ರಚೋದನಾಕಾರಿ ಹಾಗೂ ದ್ವೇಷದ ಮಾತುಗಳನ್ನು ಮಾತನಾಡಿದ್ದರ ಬಗ್ಗೆ, ಕಲಬುರಗಿ ಜಿಲ್ಲೆ ಹಾಗು ಕಲಬುರಗಿ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿರುತ್ತವೆ.

ಕಾರಣ 16 ರಂದು ಚಿತ್ತಾಪುರ ಪಟ್ಟಣಕ್ಕೆ ಮಣಿಕಂಠ ರಾಠೋಡ ಇವರು ಬಂದಲ್ಲಿ ಏನಾದರೂ ಪ್ರಚೋದನಕಾರಿ ಹಾಗೂ ದ್ವೇಷದ ಹೇಳಿಕೆಗಳನ್ನು ನೀಡಿ ಸಾರ್ವಜನಿಕರಲ್ಲಿ ಹಾಗೂ ಸಂಘಟನೆಗಳ ಬಗ್ಗೆ ಮಾತನಾಡಿ ಕೋಮುಗಳ ಮದ್ಯದಲ್ಲಿ ಗಲಾಟೆಗಳು ಆಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಂಭವ ಕಂಡು ಬಂದಿರುತ್ತದೆ. ಆದ್ದರಿಂದ ಮಣಿಕಂಠ ರಾಠೋಡ ಇವರಿಗೆ ನ.16 ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಚಿತ್ತಾಪುರ ಪಟ್ಟಣಕ್ಕೆ ಬರದಂತೆ ನಿರ್ಬಂದಿಸಬೇಕೆಂದು ಉಲ್ಲೇಖಿತ ಪತ್ರದ ಮೂಲಕ ಕೋರಿರುತ್ತಾರೆ.

ಪ್ರಯುಕ್ತ ಚಿತ್ತಾಪುರ ಪಟ್ಟಣದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರಲು 16 ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಣಿಕಂಠ ರಾಠೋಡ ಚಿತ್ತಾಪುರ ಪಟ್ಟಣಕ್ಕೆ ಪ್ರವೇಶ ಮಾಡದಂತೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 152, 162, 163 ರಸ್ತೆಯ ನಿರ್ಬಂಧನೆ ಜಾರಿಗೊಳಿಸಿ ಆದೇಶಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!