ಡಿ.9 ರಂದು ಕುಂಬಾರಹಳ್ಳಿ ಮಾರುತೇಶ್ವರ ಜಾತ್ರಾ ಮಹೋತ್ಸವ, ಡಿ.10 ರಂದು ಕೈ ಕುಸ್ತಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕುಂಭಾರಹಳ್ಳಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಪ್ರತಿವರ್ಷದಂತೆ ಈ ವರ್ಷವೂ ಡಿ.9 ರಂದು ಅದ್ದೂರಿಯಾಗಿ ನಡೆಯಲಿದೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವೆಂಕಟೇಶ ಬಿ ದುರ್ಗದ್ ಕುಂಬಾರಹಳ್ಳಿ ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಅಡಿವೆರ್ ಪೂಜಾರಿ ಮನೆಯಿಂದ ಆರತಿಯೊಂದಿಗೆ ಶ್ರೀ ಮಾರುತೇಶ್ವರ ಮೂರ್ತಿ ಶ್ರೀ ಹನುಮಾನ್ ದೇವಸ್ಥಾನ ಕ್ಕೆ ಬಂದು ದೇವಸ್ಥಾನ ದಿಂದ ಕುಂಭಾರಹಳ್ಳಿ ಕೆರೆಯಲ್ಲಿ ಪವಿತ್ರಾ ಗಂಗಸ್ನಾನ ಪಲ್ಲಕ್ಕಿ ಮುಖಾಂತರ ಭಜನೆ ಮೇಳದೊಂದಿಗೆ ನಂತರ 11 ಗಂಟೆಗೆ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಹೋಮ ಕಾರ್ಯಕ್ರಮ ಶ್ರೀ ನಾಗಣಗೌಡ ಮಾಲಿಪಾಟೀಲ ಪರಿವಾರ ಹಾಗೂ ಸಕಲ ಭಾಕ್ತಾದಿಗಳ ಸಮ್ಮುಖದಲ್ಲಿ ಅಭಿಷೇಕ ನಡೆಯುವದು. ಅಂದು ರಾತ್ರಿ 8 ಗಂಟೆಯಿಂದ ಶ್ರೀ ಮಾರುತೇಶ್ವರ ಮೂರ್ತಿಯೊಂದಿಗೆ ಪಲ್ಲಕ್ಕಿ ಮೆರವಣಿಗೆ ಭಜನೆ ನೃತ್ಯ ಹಾಗೂ ಸುಮಂಗಳೆಯರಿಂದ ಆರತಿಯೊಂದಿಗೆ ದೇವಸ್ಥಾನದಿಂದ ಗ್ರಾಮ ದೇವತೆ ಮುಖಾಂತರ ಶ್ರೀ ಸಿದ್ದೇಶ್ವರ ದೇವಸ್ಥಾನದೊಂದಿಗೆ ಶ್ರೀ ನಂದಿ ಬಸವಣ್ಣ ದೇವಸ್ಥಾನದವರೆಗೆ ಅದ್ದೂರಿಯಾಗಿ ಜರುಗುವುದು, ರಾತ್ರಿ ಭಜನೆ ಸಂಸ್ಕೃತಿ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಪ್ರಭುಗೌಡ ಬಿ ಮಾಲಿ ಪಾಟೀಲ, ಶರಣಗೌಡ ಎಸ್ ಮಾಲಿಪಾಟೀಲ, ಪ್ರದೀಪಗೌಡ ಎಸ್ ಮಾಲಿ ಪಾಟೀಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪ ಕುಂಬಾರ, ವಾಡಿ ಪಿಎಸ್ಐ ತಿರುಮಲೇಶ್ ಕುಂಬಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದ್ರಮ್ಮ ಎಚ್ ಭಾಗವಹಿಸಲಿದ್ದು, ಪ್ರಭುಗೌಡ ಬಿ ಮಾಲಿಪಾಟೀಲ ಪರಿವಾರದವರಿಂದ ಭಕ್ತಾದಿಗಳಿಗೆ ಅನ್ನ ಪ್ರಸಾದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಡಿ.10 ರಂದು ಸಾಯಂಕಾಲ 5 ಗಂಟೆಗೆ ಕೈ ಕುಸ್ತಿ ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುವುದು. ಕೈ ಕುಸ್ತಿಯಲ್ಲಿ 3 ಜನರಿಗೆ ಗೆದ್ದವರಿಗೆ 1 ಟೆಂಗಿನಕಾಯಿ ಬಹುಮಾನ ಕೊಡಲಾಗುವುದು. 4 ಜನ ಗೆದ್ದವರಿಗೆ ಕಲ್ಲಬೆಳ್ಳಿ ಖಡ್ಗ ಬಹುಮಾನ ಕೊಡಲಾಗುವುದು. 5 ಜನ ಗೆದ್ದವರಿಗೆ ಅಸಲಿ ಬೆಳ್ಳಿ ಖಡ್ಗ (ಬೆಳ್ಳಿ ಲಾಕಿಟ್) ಬಹುಮಾನ ಕೊಡಲಾಗುವುದು. ಶ್ರೀ ಯಂಕಣ್ಣಗೌಡ ಎ. ಮಾಲಿ ಪಾಟೀಲ್ ಸಂಕನೂರ ಇವರಿಂದ ಬಹುಮಾನಗಳು ಕೊಡಲಾಗುವುದು.
ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ರೇಣುಕಾ ಯಲ್ಲಮ್ಮ ನಾಟ್ಯ ಸಂಘ ಉಟಗಿ ವತಿಯಿಂದ ಶ್ರೀ ರೇಣುಕಾ ಯಲ್ಲಮ್ಮ ಬಯಲಾಟ ಅರ್ಥಾತ್ ಹೆತ್ತ ಮಗನಿಂದ ಹಡದ ತಾಯಿಯ ಕೊಲೆ ಆಯೋಜಿಸಲಾಗಿದೆ. ಜಾತ್ರೆಗೆ ಬಂದ ಸಾರ್ವಜನಿಕರು ಶಾಂತಿ ಸುವ್ಯವಸ್ಥೆಯೊಂದಿಗೆ ಸಹಕರಿಸಬೇಕಾಗಿ ಎಂದು ಮನವಿ ಮಾಡಿದ್ದಾರೆ.

