ಅಹಿಂದ ಸಂಘಟನೆಯ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಇಮಾನ್ಯುವೆಲ್ ಡೆವಿಡ್ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟದ (ಅಹಿಂದ) ಇಮಾನ್ಯುವೆಲ್ ಡೆವಿಡ್ ಚಿತ್ತಾಪುರ ಅವರನ್ನು ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಂ ಕರಡಿಕೊಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ನಿಂಗಪ್ಪ ಬಣಕಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಕಳಕಳಿಯ ಅಹಿಂದ ಒಕ್ಕೂಟದ ನಿಯಮಗಳಿಗೆ ಹಾಗೂ ಸಂವಿಧಾನ ಬದ್ಧರಾಗಿ ತಮಗೆ ವಹಿಸಿರುವ ಪದಾಧಿಕಾರದ ಕರ್ತವ್ಯ ಈ ಕೂಡಲೇ ಕಾರ್ಯಪ್ರವೃತ್ತಿಯಲ್ಲಿ ತೊಡಗಬೇಕು ಎಂದು ಸೂಚಿಸಿದ್ದಾರೆ.
ಒಂದು ವೇಳೆ ಸಂವಿಧಾನ ವಿರೋಧಿ ಕೆಲಸ ಹಾಗೂ ಅಹಿಂದ ಒಕ್ಕೂಟದ ಮೂಲ ಉದ್ದೇಶಗಳಿಗೆ ವಿರುದ್ದವಾಗಿ ಕೆಲಸ ಮಾಡಿದರೆ ಅಹಿಂದ ಒಕ್ಕೂಟದ ಪದಾಧಿಕಾರಿ ಹುದ್ದೆ ಮತ್ತು ಸದಸ್ಯತ್ವವು ರದ್ದಾಗುತ್ತದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

