ರಟಕಲ್ ಗ್ರಾಮದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಜನ್ಮದಿನಾಚರಣೆ | ಚಿಂಚೋಳಿ-ಕಾಳಗಿ ತಾಲೂಕುಗಳಿಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೊಡುಗೆ ಅಪಾರ: ಗಂಗಾಣಿ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಚಿಂಚೋಳಿ ಹಾಗೂ ಕಾಳಗಿ ತಾಲೂಕುಗಳಿಗೆ ವಿಜಯಪುರ ಶಾಸಕ, ಚಿಂಚೋಳಿ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಕೊಡುಗೆ ಅಪಾರವಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್ ಹೇಳಿದರು.
ತಾಲೂಕಿನ ರಟಕಲ್ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜಯಪುರ ಶಾಸಕ, ಚಿಂಚೋಳಿ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಕೇಕ್ ಕತ್ತರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಚಿಂಚೋಳಿ ಪಟ್ಟಣದಲ್ಲಿ ಹೆಮ್ಮರವಾಗಿ ಬೆಳೆದು ನಿಂತ ಸಿದ್ಧ ಸಿರಿ ಅಂಡ್ ಪವರ್ ಕಾರ್ಖಾನೆ ತಾಲೂಕಿನ ರೈತರಿಗೆ, ರೈತನ ಮಕ್ಕಳಿಗೆ ಮತ್ತು ಕೂಲಿ ಕಾರ್ಮಿಕರಿಗೆ ವರದಾನವಾಗಿದ್ದು, ದುಡಿಯುವ ಕೈಗಳಿಗೆ ಉದ್ಯೋಗ ಕೊಟ್ಟ ಯತ್ನಾಳ್ ಅವರು ಈ ಭಾಗದ ಅನ್ನದಾತರಾಗಿದ್ದಾರೆ ಎಂದು ಬಣ್ಣಿಸಿದರು.
ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಅನೇಕ ಕಡೆ ಸಿದ್ದಸಿರಿ ಬ್ಯಾಂಕ್ ಶಾಖೆ ಪ್ರಾರಂಭಿಸಿ ಹಳ್ಳಿಗಳಲ್ಲಿ ನೂರಾರು ಜನರಿಗೆ ಉದ್ಯೋಗವಕಾಶ ಮಾಡಿಕೊಟ್ಟ ಸಂಸ್ಥೆ ಇದಾಗಿದ್ದು. ರೈತರಿಗೆ ಮತ್ತು ಕಾರ್ಮಿಕರಿಗೆ ವ್ಯಾಪಾರಸ್ಥರಿಗೆ ಸುಮಾರು ಜನರಿಗೆ ಈ ಸಂಸ್ಥೆ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.
ಮುಂದಿನ ದಿನಮಾನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ ರವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಭಾಗ್ಯ, ಸಿರಿ ಸಂಪತ್ತು ಕೊಟ್ಟು ಆ ಭಗವಂತ ಕಾಪಾಡಲೆಂದು ಮತ್ತು ರಾಜ್ಯದ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಪೂಜ್ಯ ಶ್ರೀ ರೇವಣಸಿದ್ಧ ಶಿವಾಚಾರ್ಯರು ವಹಿಸಿದ್ದರು, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್ ಪಾಟೀಲ್ ಗೊಣಗಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರೇವಣಸಿದ್ದೇಶ್ವರ ಶಾಲೆಯ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ 400 ಕ್ಕೂ ಹೆಚ್ಚು ಮಕ್ಕಳಿಗೆ ಪೆನ್ನು, ನೋಟ್ ಬುಕ್ ಮತ್ತು ಚಾಕಲೇಟ್ ವಿತರಣೆ ಮಾಡಲಾಯಿತು. ನಂತರ ಕಾಳಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಮೊಟ್ಟೆ ವಿತರಣೆ ಮಾಡಲಾಯಿತು
ಈ ಕಾರ್ಯಕ್ರಮದಲ್ಲಿ ಮುಖ್ಯ ಗುರು ಲಕ್ಷ್ಮಣ ದೇಸಾಯಿ, ನಾಗಯ್ಯ ಸಾಲಿಮಠ, ಶರಣು ಸೀಗಿ, ವೀರೇಶ್ ಬುಕ್ಕಟಿಗಿ, ವಿಜಯ್ ಕುಮಾರ್ ಜಡಗಿ, ರಮೇಶ ಸಿದ್ದನಾಕ, ಮಲ್ಲು ಹೂಗಾರ, ಜಗ್ಗು ಹೆಬ್ಬಾಳ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ಅಹ್ಮದ್ ಖಾನ್, ಸಹ ಶಿಕ್ಷಕ ಶಿವಲಿಂಗಪ್ಪ, ಸಿ ಆರ್ ಸಿ ದಯಾನಂದ ಹುಲಸುಗೂಡ, ಅತಿಥಿ ಶಿಕ್ಷಕ ಭೀಮರಾವ್ ಕುಡ್ದಳ್ಳಿ ಮತ್ತು ಸಹ ಶಿಕ್ಷಕಿಯರಿದ್ದರು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸಂದರ್ಭದಲ್ಲಿ ಡಾ.ವೈಶಾಲಿ ಎಸ್ ಕೆ, ಸ್ಟಾಪ್ ನರ್ಸ್ ಮಾದೇವಿ, ಮುಖಂಡರಾದ ಸುಂದರ್ ಡಿ ಸಾಗರ, ದೇವಿಂದ್ರ ಕದಂ ಕಾಳಗಿ, ತಿಮ್ಮಯ್ಯ ಆರ್ ಒಡೆಯರಾಜ, ಕರಣ ರಾಜಾಪುರ, ಸುಭಾಷ್ ಕಾಳಗಿ, ಸಿದ್ದು ರಾಮನ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಇದ್ದರು. ಮಲ್ಲಯ್ಯ ಮಾಸ್ಟರ್ ಕಿಣ್ಣಿ ನಿರೂಪಿಸಿದರು.

