ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ದಿಗ್ಗಾಂವ ಶ್ರೀಗಳು ಸಂತಾಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ರಾಜಕೀಯ ಧುರೀಣರು, ಸೋಲಿಲ್ಲದ ಸರದಾರರು, ಖ್ಯಾತ ಉದ್ಯಮಿದಾರರು ಹಾಲಿ ಶಾಸಕರಾದ ಶಿವಶಂಕರಪ್ಪ ಶಾಮನೂರು ಶಿವಾಧೀನರಾದದ್ದು ಕೇಳಿ ಅತೀವ ನೋವು ಎನಿಸಿತು, ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಅವರ ಕುಟುಂಬ ಪರಿವಾರಕ್ಕೆ ಭಗವಂತನು ಧೈರ್ಯ ತುಂಬಲೆಂದು ಪ್ರಾರ್ಥಿಸುತ್ತೇವೆ ಎಂದು ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ.

