ಈಡಿಗರ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ | ಕರದಾಳ-ಬೆಂಗಳೂರು ಐತಿಹಾಸಿಕ ಪಾದಯಾತ್ರೆಗೆ ಅತೀ ಹಿಂದುಳಿದ ಮಠಾಧೀಶರಿಂದ ಅದ್ದೂರಿ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈಡಿಗ ಸಮಾಜದ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಡಾ. ಪ್ರಣವಾನಂದ ಮಹಾಸ್ವಾಮಿಗಳು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 700 ಕಿ.ಮೀ ಐತಿಹಾಸಿಕ ಪಾದಯಾತ್ರೆಗೆ ಅತೀ ಹಿಂದುಳಿದ ಮಠಾಧೀಶರಿಂದ ಮಂಗಳವಾರ ಅದ್ದೂರಿಯಾಗಿ ಚಾಲನೆಗೊಂಡಿತ್ತು.
ಈ ಸಂದರ್ಭದಲ್ಲಿ ಹಲಕರ್ಟಿ ಶ್ರೀ ಮುನೀಂದ್ರ ಶಿವಾಚಾರ್ಯರು, ಚಿತ್ರದುರ್ಗ ಛಲವಾದಿ ಜಗದ್ಗುರು ಬಸವನಾಗಿದೇವ ಶರಣರು, ಅಖಿಲ ಭಾರತ ಉಪ್ಪಾರ ಗುರುಪೀಠದ ಶ್ರೀ ಜಗದ್ಗುರು ಭಗೀರಥಾನಂದಪುರಿ ಸ್ವಾಮೀಜಿ ರಾಂಪೂರಹಳ್ಳಿ, ಸುಲೆಪೇಟ್ ವಿಶ್ವಕರ್ಮ ಏಕದಂಡಗಿ ಮಠ, ಶ್ರೀ ದೊಡ್ಡಂದ್ರ ಸ್ವಾಮಿಗಳು, ಹಡಪದ ಮಹಾಸಂಸ್ಥಾನ ಶ್ರೀ ಹಡಪದ ಅಪ್ಪಣ್ಣ ಶಹಾಬಾದ ವೀರದೇವರು ಶಹಾಬಾದ, ನದಿಸಿನ್ನೂರ್ ಹೂಗಾರ ಮಾದಯ್ಯ ನವರ ಮಹಾ ಶಕ್ತಿ ಪೀಠದ ಶ್ರೀ ಗುರುರಾಜೇಂದ್ರ ಶಿವಯೋಗಿಗಳು, ಬಾಗಲಕೋಟ್ ಶಿವಸಿಂಬಿ ಸಮಾಜ ಜಗದ್ಗುರು ಪೀಠದ ಶ್ರೀ ಮಹಾಂತದೇವರು, ಕರದಾಳ ಯಲ್ಲಮ್ಮ ದೇವರು ಸಾನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೆಪಿಎಸ್ಸಿ ಮಾಜಿ ಸದಸ್ಯ ಡಾ. ಲಕ್ಷ್ಮಿನರಸಯ್ಯ ತುಮಕೂರು, ಮಹಿಳಾ ಅಧ್ಯಕ್ಷೆ ಪೂರ್ಣಿಮಾ ಹಾವೇರಿ, ತಿಪ್ಪೇಶ್ ಚಿತ್ರದುರ್ಗ, ಡಾ. ಮಂಚೇಗೌಡ, ವೆಂಕಟೇಶ್ ಎಂ ಕಡೇಚೂರ್, ಸದಾನಂದ ಪೆರ್ಲ, ನವೀನ್ ಕುಮಾರ್ ಮಂಗಳೂರು, ನಾಗರಾಜ ನಾಯ್ಕ ಸಾಗರ, ಭೂದಾನಿ ಸುರೇಶ್ ಗುತ್ತೇದಾರ ಕರದಾಳ, ಬಸವರಾಜ ಗುತ್ತೇದಾರ, ಕಾಶಿನಾಥ ಗುತ್ತೇದಾರ, ಕಾಶಣ್ಣ ಗುತ್ತೇದಾರ, ಶ್ರೀಶೈಲ ಗುತ್ತೇದಾರ, ಸುನೀಲ್ ಗುತ್ತೇದಾರ, ರವಿ ಸುಲಹಳ್ಳಿ, ಸಂತೋಷ ಗುತ್ತೇದಾರ, ಅಶೋಕ ಗುತ್ತೇದಾರ, ನರಸಯ್ಯ ಗುತ್ತೇದಾರ, ಹಣಮಯ್ಯ ಗುತ್ತೇದಾರ, ವಿಶ್ವಾರಾಧ್ಯ ಗುತ್ತೇದಾರ, ದೀಪಕ್ ಗುತ್ತೇದಾರ, ಸಂಗಯ್ಯ ಗುತ್ತೇದಾರ ಸೇರಿದಂತೆ ಇತರರು ಇದ್ದರು. ದೇವಪ್ಪ ನಂದೂರಕರ್ ನಿರೂಪಿಸಿದರು.

