ಪ್ರಣವಾನಂದ ಶ್ರೀಗಳ ಎರಡನೇ ದಿನದ ಪಾದಯಾತ್ರೆ, ರಾವೂರ ಗ್ರಾಮದಲ್ಲಿ ಅದ್ದೂರಿ ಸ್ವಾಗತ | ಸಮಾಜಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ: ಪ್ರಣವಾನಂದ ಸ್ವಾಮೀಜಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈಡಿಗ ಸಮಾಜದ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಡಾ. ಪ್ರಣವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಮಂಗಳವಾರ ಪ್ರಾರಂಭವಾದ 700 ಕಿ.ಮೀ ಐತಿಹಾಸಿಕ ಪಾದಯಾತ್ರೆ ಬುಧವಾರ ರಾವೂರ ಗ್ರಾಮದಲ್ಲಿ ಕುಲ ಬಾಂಧವರು, ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲ ಸೂಚಿಸಿದರು.
ದಾರಿ ಉದ್ದಕ್ಕೂ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದ್ದು ಸರ್ವ ಸಮುದಾಯದವರು ಸ್ವಾಮೀಜಿಯವರ ಪಾದಯಾತ್ರೆಯನ್ನು ಸ್ವಾಗತಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು.
ಗ್ರಾಮದ ತೇಗನೂರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿಗಳು, ಸಮಾಜದ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಬೆಂಗಳೂರು ಪಾದಯಾತ್ರೆ ಎಷ್ಟೇ ಅಡೆತಡೆಗಳು ಬಂದರೂ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಸರ್ಕಾರ 18 ಬೇಡಿಕೆಗಳಲ್ಲಿ ಪ್ರಮುಖವಾಗಿ ಐದಾರು ಬೇಡಿಕೆಗಳ ಈಡೇರಿಸುವ ಲಿಖಿತವಾಗಿ ಭರವಸೆ ನೀಡಿದ್ದಾಗ ಮಾತ್ರ ಹೋರಾಟ ಕೈಬಿಡುವ ಬಗ್ಗೆ ಯೋಚನೆ ಮಾಡಲಾಗುವುದು, ಇಲ್ಲದಿದ್ದರೆ ಸಮಾಜಕ್ಕಾಗಿ ನಾನು ಪ್ರಾಣತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಮಠದ ಶ್ರೀ ವೀರದೇವರು ಸ್ವಾಮಿಜಿ, ಡಾ.ಗುಂಡಣ್ಣ ಬಾಳಿ, ಬಸವರಾಜ ಸೂಗುರ, ಅಶೋಕ ಗುತ್ತೇದಾರ ವಾಡಿ, ರವಿ ಸೂಲಹಳ್ಳಿ, ಶ್ರೀಮಂತ ಗುತ್ತೇದಾರ, ಭೂದಾನಿ ಸುರೇಶ್ ಗುತ್ತೇದಾರ ಕರದಾಳ ಅವರು ಮಾತನಾಡಿದರು.
ರಾವೂರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಪ್ರಣವಾನಂದ ಸ್ವಾಮೀಜಿಗಳಿಗೆ ಗೌರವಿಸಿ ಹೋರಾಟಕ್ಕೆ ಶುಭ ಹಾರೈಸಿದರು. ಪಾದಯಾತ್ರೆಯಲ್ಲಿ ಮುಖಂಡರಾದ ಶಿವಲಿಂಗಪ್ಪ ವಾಡೇದ್, ಶರಣು ಜ್ಯೋತಿ, ಗುರು ಗುತ್ತೇದಾರ, ಅಮೃತ್ ಗುತ್ತೇದಾರ, ದತ್ತು ಗುತ್ತೇದಾರ, ಸುನೀಲ್ ಗುತ್ತೇದಾರ, ಸಂತೋಷ ಗುತ್ತೇದಾರ, ದೀಪಕ್ ಗುತ್ತೇದಾರ, ಸಂಗಯ್ಯ ಗುತ್ತೇದಾರ, ಬಾಬು ಗುತ್ತೇದಾರ, ಪಂಕಜ್ ಗೌಡ್, ಯಲ್ಲಯ್ಯ ಕಲಾಲ್, ಮೇಘರಾಜ ಗುತ್ತೇದಾರ, ಸುನೀಲ್ ಗುತ್ತೇದಾರ, ನರಸಯ್ಯ ಗುತ್ತೇದಾರ, ಬಸವರಾಜ ಗುತ್ತೇದಾರ, ದೇವಪ್ಪ ನಂದೂರಕರ್, ರಕ್ಷಿತ್ ಗುತ್ತೇದಾರ, ರಾಜು ಗುತ್ತೇದಾರ, ಅಶೋಕ ಭೀಮಳ್ಳಿ ಸೇರಿದಂತೆ ಇತರರು ಇದ್ದರು. ಕಾಶಿನಾಥ ಗುತ್ತೇದಾರ ನಿರೂಪಿಸಿದರು. ವಾಡಿ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಬುಧವಾರ ಶಹಾಬಾದ ನಗರದಲ್ಲಿ ವಾಸ್ತವ್ಯ ಮಾಡಿ, ನಂತರ ಗುರುವಾರ ಬೆಳಗ್ಗೆ ಶಹಾಬಾದ ನಿಂದ ಹೊರಟು ತೊನಸನಳ್ಳಿ, ಶಹಾಬಾದ ಕ್ರಾಸ್, ಕಟ್ಟಿಸಂಗಾವಿ ಮಾರ್ಗವಾಗಿ ಸಜ್ಜನ ಕಲ್ಯಾಣ ಮಂಟಪಕ್ಕೆ ತಲುಪಲಿದ್ದು, ಸಂಜೆ 7 ಗಂಟೆಗೆ ಬಹಿರಂಗ ಸಭೆ ನಡೆಯಲಿದ್ದು ತೆಲಂಗಾಣದ ಮಾಜಿ ಸಚಿವ ಶ್ರೀನಿವಾಸಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ, ನಾಯಕರಾದ ಸಂತೋಷ್ ಗುತ್ತೇದಾರ, ಮಹಾದೇವ ಗುತ್ತೇದಾರ, ವೆಂಕಟೇಶ ಎಂ ಕಡೇಚೂರ್ ಸೇರಿದಂತೆ ಸಮುದಾಯದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಶುಕ್ರವಾರ ಚಿಗರಳ್ಳಿ ಕ್ರಾಸ್, ಆಂದೋಲಾ ಮೂಲಕ ಸಾಗಿ, ಚಿಕ್ಕಮುಡಬಾಳದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಾಧ್ಯಮ ಸಂಚಾಲಕ ಡಾ.ಸದಾನಂದ ಪೆರ್ಲ ತಿಳಿಸಿದ್ದಾರೆ

