ಪ್ರಣವಾನಂದ ಶ್ರೀಗಳ ಮೂರನೇ ದಿನದ ಪಾದಯಾತ್ರೆ, ತೊನಸನಳ್ಳಿ ಗ್ರಾಮದಲ್ಲಿ ಮಲ್ಲಣ್ಣಪ್ಪ ಮಹಾಸ್ವಾಮಿಗಳಿಂದ ಅದ್ದೂರಿ ಸ್ವಾಗತ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈಡಿಗ ಸಮಾಜದ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಡಾ. ಪ್ರಣವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಜ.6 ರಿಂದ ಪ್ರಾರಂಭವಾದ 700 ಕಿ.ಮೀ ಐತಿಹಾಸಿಕ ಪಾದಯಾತ್ರೆ ಮೂರನೇ ದಿನದ ಯಾತ್ರೆ ಶಹಾಬಾದ ಮಾರ್ಗದ ಮೂಲಕ ಜೇವರ್ಗಿ ತಾಲೂಕಿನ ಕಡೆ ಹೋಗುವ ಮಾರ್ಗ ಮಧ್ಯದಲ್ಲಿ ತೊನಸನಳ್ಳಿ ಗ್ರಾಮದ ಹತ್ತಿರ ಅಲ್ಲಮಪ್ರಭು ಸಂಸ್ಥಾನ ಮಠದ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲ ಸೂಚಿಸಿದರು.
ದಾರಿ ಉದ್ದಕ್ಕೂ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದ್ದು ಸರ್ವ ಸಮುದಾಯದವರು ಸ್ವಾಮೀಜಿಯವರ ಪಾದಯಾತ್ರೆಯನ್ನು ಸ್ವಾಗತಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು.
ಈ ಸಂದರ್ಭದಲ್ಲಿ ಮುಖಂಡರಾದ ಭೀಮಯ್ಯ ಗುತ್ತೇದಾರ, ಬಸವರಾಜ ಮದ್ರಕಿ, ಸಾಯಿ ಗುತ್ತೇದಾರ, ವಸಂತ ಗುತ್ತೇದಾರ, ಚಂದ್ರಶೇಖರ ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

