ನಾಗಾವಿ ಎಕ್ಸಪ್ರೆಸ್ ಸುದ್ದಿಗೆ ಸ್ಪಂದಿಸಿದ ತಹಸೀಲ್ದಾರ್
ನಾಗಾವಿ ರಸ್ತೆ ಸುಧಾರಣೆಗೆ ಮುಂದಾದ ಪುರಸಭೆ ಪೌರಕಾರ್ಮಿಕರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಾಗಾವಿಗೆ ಹೋಗುವ ರಸ್ತೆ ಸುಧಾರಣೆಗೆ ಸ್ಥಳೀಯ ನಾಯಕರ ಆಗ್ರಹ ಎನ್ನುವ ಗುರುವಾರ ಪ್ರಕಟಗೊಂಡ ನಾಗಾವಿ ಎಕ್ಸಪ್ರೆಸ್ ಸುದ್ದಿಗೆ ಸ್ಪಂದಿಸಿದ ತಹಸೀಲ್ದಾರ್ ಮತ್ತು ದೇವಸ್ಥಾನದ ಸಮಿತಿ ಅಧ್ಯಕ್ಷರೂ ಆದ ನಾಗಯ್ಯ ಹಿರೇಮಠ ಶುಕ್ರವಾರ ರಸ್ತೆ ಸುಧಾರಣೆಗೆ ಕ್ರಮ ಕೈಗೊಂಡಿದ್ದಾರೆ ಇದರಿಂದ ಸ್ಥಳೀಯ ನಾಗರಿಕರು ಖುಷಿ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಕೂಟರ ಮನೆತನದ ಕುಲದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಇದೇ ಅಕ್ಟೋಬರ್ 17 ರಂದು ನಡೆಯಲಿದ್ದು, ಈ ಉತ್ಸವಕ್ಕೆ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಾದ ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ, ಸೇರಿದಂತೆ ಸಾಕಷ್ಟು ಭಕ್ತರು ಆಗಮಿಸುತ್ತಾರೆ ಹಾಗೂ ಪಲ್ಲಕ್ಕಿ ಉತ್ಸವ ಕೊಡ ಇದೇ ರಸ್ತೆ ಮಾರ್ಗವಾಗಿ ಸಾಗುತ್ತದೆ ಹೀಗಾಗಿ ರಸ್ತೆ ಉದ್ದಕ್ಕೂ ಇರುವ ತಗ್ಗು ಗುಂಡಿಗಳನ್ನು ಮುಚ್ಚುವ ಮೂಲಕ ಅಲ್ಲಲ್ಲಿ ಹಾಳಾದ ರಸ್ತೆ ಸುಧಾರಣೆಗೆ ಪುರಸಭೆಯ ಪೌರಕಾರ್ಮಿಕರು ಮುಂದಾಗಿದ್ದಾರೆ.
ನಾಗಾವಿ ಪಲ್ಲಕ್ಕಿ ಉತ್ಸವಕ್ಕೆ ಈ ಬಾರಿ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಹೀಗಾಗಿ ಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಈಗಿನಿಂದಲೇ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳಬೇಕಿದೆ. ಪ್ರಮುಖವಾಗಿ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು, ಮೊಬೈಲ್ ಶೌಚಾಲಯ, ಮಹಿಳಾ ಸ್ನಾನದ ಕೋಣೆಗಳು, ವಿದ್ಯುತ್ ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಡೆಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.