ಮರಗೋಳ ಗ್ರಾಮದಲ್ಲಿ ನಾಳೆ ಶ್ರೀ ಬೀರಲಿಂಗೇಶ್ವರ ಮತ್ತು ಶ್ರೀ ಮಾಳಿಂಗೇಶ್ವರರ ನೂತನ ಮಂದಿರ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮರಗೋಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಬೀರಲಿಂಗೇಶ್ವರ ಮತ್ತು ಶ್ರೀ ಮಾಳಿಂಗೇಶ್ವರರ ನೂತನ ಮಂದಿರ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ ಜೂ.15 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕೊಂಡಂಪಳ್ಳಿ ಮನವಿ ಮಾಡಿದ್ದಾರೆ.
ಮುಗಳಕೋಡ, ಜಿಡಗಾ ಶ್ರೀ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರುವುದು. ಶ್ರೀ ಹೈಯ್ಯಾಳಸಿದ್ದೇಶ್ವರ ದೇವಸ್ಥಾನ ಹೂಡಾ (ಬಿ) ಶ್ರೀ ಮರೇಪ್ಪ ಮುತ್ಯಾ, ಶ್ರೀ ಭೋಜಲಿಂಗೇಶ್ವರ ಮಠ, ಸೂಗೂರ (ಎನ್) ಶ್ರೀ ಹಿರಗಪ್ಪ ತಾತಾ, ಕಂಬಳೇಶ್ವರ ಸಂಸ್ಥಾನಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಶ್ರೀ ಗುರುಲಿಂಗೇಶ್ವರ ಪುಣ್ಯಾಶ್ರಮ ಕಂಚಗಾರಹಳ್ಳ ದಿಗ್ಗಾಂವ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಹುಲಿಜಂತಿ ಶ್ರೀ ಮಾಳಿಂಗರಾಯ ಸ್ವಾಮಿಗಳು ಅವರು ನೇತೃತ್ವ ವಹಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಬೀರಪ್ಪ ಬಿ. ಮುಗಟಿ, ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಎಂ. ಮುಗಟಿ, ಉಪಾಧ್ಯಕ್ಷ ನಾಗೇಂದ್ರ ಎಸ್. ಮುಗಟಿ, ಸದಸ್ಯರಾದ ಯಲ್ಲಾಲಿಂಗ ಬಿ. ಜಂಬಗಿ, ಮಲ್ಲೇಶಿ ಎನ್. ಮುಗಟಿ, ಅಮೃತ ಪಿ. ನಿಪ್ಪಾಣಿ, ಶ್ರೀಮಂತ ಎ. ಮುಗಟಿ, ಶರಣಪ್ಪ ಬಿ. ಸಂಗಾವಿ, ನಾಗಪ್ಪ ಈ. ಮುಗಟಿ, ಶರಣಪ್ಪ ಬಿ. ಮುಗಟಿ, ಬಸವರಾಜ ಎಂ. ಮುಗಟಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

