ಚಿತ್ತಾಪುರ ಪಟ್ಟಣದಲ್ಲಿ ದಿ. 7 ರಂದು ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾಯಾತ್ರೆ: ಉಮೇಶಬಾಬು ಸಾಸಬಾಳ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಹಿಂದು ಸಮ್ಮೇಳನ ಆಯೋಜನ ಸಮಿತಿ ವತಿಯಿಂದ ಇದೇ ದಿ. 7 ರಂದು ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ಅಧ್ಯಕ್ಷ ಉಮೇಶಬಾಬು ಸಾಸಬಾಳ್ ಹೇಳಿದರು.
ಪಟ್ಟಣದ ವರುಣ್ ನಗರದ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2.45 ಕ್ಕೆ ಪಟ್ಟಣದ ಅಕ್ಕಮಹಾದೇವಿ ಮಂದಿರದಿಂದ ಪ್ರಾರಂಭವಾಗುವ ಬೃಹತ್ ಶೋಭಾಯಾತ್ರೆ ಚಿತ್ತಾವಲ್ಲಿ ವೃತ್ತ, ಕಪ್ಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಲಾಡ್ಜಿಂಗ್ ಕ್ರಾಸ್, ಕೋರ್ಟ್ ರಸ್ತೆಯ ಮೂಲಕ ವರುಣ್ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ತಲುಪಲಿದ್ದು, ನಂತರ ಸಾಯಂಕಾಲ 5 ಗಂಟೆಗೆ ಹಿಂದೂ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು, ಬೆಳಗುಂಪಾ ಶ್ರೀ ಅಬಿನವ ಪರ್ವತೇಶ್ವರ ಶಿವಾಚಾರ್ಯರು, ದಂಡೋತಿ ಶ್ರೀ ಬಾಲಯೋಗಿನಿ ಜಯಶ್ರೀ ಮಾತಾಜೀ ಅವರು ವಹಿಸುವರು. ಮುಖ್ಯ ವಕ್ತಾರರಾಗಿ ಪ್ರಜ್ಞಾ ಪ್ರವಾಹ ಅಖೀಲ ಭಾರತೀಯ ಸಹ ಸಂಯೋಜಕ ರಘುನಂದನ ಜೀ, ಹಿಂದು ಸಮ್ಮೇಳನ ಆಯೋಜನ ಸಮಿತಿ ಗೌರವಾಧ್ಯಕ್ಷ ತುಕಾರಾಮ ನಾಯಕ ರಾಠೋಡ ಗೌರವ ಅಧ್ಯಕ್ಷತೆ ಹಾಗೂ ಅಧ್ಯಕ್ಷ ಉಮೇಶಬಾಬು ಸಾಸಬಾಳ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಅಯ್ಯಪ್ಪ ರಾಮತೀರ್ಥ, ಕೋಟೇಶ್ವರ ರೇಷ್ಮಿ, ಗಿರೀಶ್ ಭಜಂತ್ರಿ, ನಟರಾಜ್ ಶಿಲ್ಪಿ, ಸಮಿತಿ ಗೌರವಾಧ್ಯಕ್ಷ ತುಕಾರಾಮ ನಾಯಕ ರಾಠೋಡ, ಕಾರ್ಯಾಧ್ಯಕ್ಷ ಸತ್ಯನಾರಾಯಣ ಯಾದವ್, ಉಪಾಧ್ಯಕ್ಷರಾದ ಅಶೋಕ ಹಡಪದ, ಮಹಾದೇವಪ್ಪ ಉಪ್ಪಾರ, ನಾಗರಾಜ ರಾವೂರಕರ್, ದೇವಾನಂದ್ ತ್ರೀಮಲ್, ಕಾರ್ಯದರ್ಶಿ ಮೈಪಾಲ್ ಮೂಲಿಮನಿ, ಶಿವುಕುಮಾರ ಘವಾರಿಯಾ ಸೇರಿದಂತೆ ಇತರರು.

